• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಮೂವರು ಮಕ್ಕಳನ್ನು ಕೊಂದು ಆತ್ಮಹ*ತ್ಯೆ ಮಾಡಿಕೊಂಡ ದಂಪತಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 11, 2026 - 12:51 pm
in Flash News, ದೇಶ
0 0
0
Untitled design 2026 02 11T124458.270

ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಭೀಕರ ಘಟನೆಯೊಂದು ದೇಶವನ್ನೇ ಬೆಚ್ಚಿಬೀಳಿಸಿದೆ. ಮನೆಯೊಳಗೆ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸದಸ್ಯರು ಮೃತಪಟ್ಟಿರುವುದು ಪತ್ತೆಯಾಗಿದೆ.

35 ವರ್ಷದ ಮನೀಶ್ ಕುಮಾರ್ ಎಂಬುವವರು ಹಾಗೂ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ದಂಪತಿ ತಮ್ಮ ಮೂವರು ಪುಟ್ಟ ಮಕ್ಕಳನ್ನು ಹತ್ಯೆಗೈದಿದ್ದಾರೆ ಎನ್ನುವುದು ಹೊರಬಂದಿದೆ.

RelatedPosts

ಯು-ಟರ್ನ್ ಹೊಡೆದ ಅಮೆರಿಕ: PoK ಒಳಗೊಂಡ ಭಾರತದ ಭೂಪಟದ ಪೋಸ್ಟ್ ಡಿಲೀಟ್

ಕ್ಷಮೆಯಾಚಿಸಿದ ಚಂದ್ರಚೂಡ್: ಟಾಕ್ಸಿಕ್ ಪರ ಚಿತ್ರರಂಗ ಬ್ಯಾಟಿಂಗ್

ಗಾಯಕ ಉದಿತ್ ನಾರಾಯಣ್‌ಗೆ ಸಂಕಷ್ಟ: ಪತ್ನಿಯ ಗರ್ಭಕೋಶ ತೆಗೆಸಿದ ಆರೋಪದಡಿ ಎಫ್‌ಐಆರ್ ದಾಖಲು

ಬೆಂಗಳೂರಿನಲ್ಲಿ ಶಾಲಾ ಬಸ್ ಚಕ್ರಕ್ಕೆ ಸಿಲುಕಿ ಇಬ್ಬರು ಕಂದಮ್ಮಗಳ ದಾರುಣ ಸಾ*ವು

ADVERTISEMENT
ADVERTISEMENT

ಮೃತ ಮಕ್ಕಳನ್ನು ಹನಿ (8), ಪ್ರಿಯಾಂಶಿ (5) ಮತ್ತು ಪ್ರತೀಕ್ (3) ಎಂದು ಗುರುತಿಸಲಾಗಿದೆ. ಈ ದಂಪತಿ 2018ರಲ್ಲಿ ವಿವಾಹವಾಗಿದ್ದು, ಮದುವೆಯ ಬಳಿಕ ಸಂತೋಷದಿಂದ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ..

ಕತ್ತು ಹಿಸುಕಿ ಮಕ್ಕಳ ಹತ್ಯೆ

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ದಂಪತಿ ಮೊದಲು ತಮ್ಮ ಮೂವರು ಮಕ್ಕಳನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಹತ್ಯೆಗೈದಿದ್ದಾರೆ. ನಂತರ ಮನೀಶ್ ಕುಮಾರ್ ವಿದ್ಯುತ್ ವೈರ್ ಹಿಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ನಡೆದ ಮನೆಯೊಳಗೆ ಐವರ ಮೃತದೇಹಗಳು ಪತ್ತೆಯಾಗಿದ್ದು, ನೆರೆಹೊರೆಯವರು ಮನೆ ಬಾಗಿಲು ತೆರೆದಿರದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ.

ಸೆಲ್ಫಿ ವಿಡಿಯೋ ಮತ್ತು ಡೆತ್ ನೋಟ್ ಪತ್ತೆ

ಆತ್ಮಹತ್ಯೆಗೂ ಮುನ್ನ ಮನೀಶ್ ಕುಮಾರ್ ಸೆಲ್ಫಿ ವಿಡಿಯೋ ಮಾಡಿದ್ದು, ಆ ವಿಡಿಯೋದಲ್ಲಿ “ನಮ್ಮ ಸಾವಿಗೆ ನಾವೇ ಕಾರಣ, ಯಾರೂ ಜವಾಬ್ದಾರರಲ್ಲ” ಎಂದು ಹೇಳಿರುವುದು ತಿಳಿದುಬಂದಿದೆ. ಅಲ್ಲದೆ ಮನೆಯಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದ್ದು, ಅದಲ್ಲಿಯೂ ಇದೇ ಮಾತುಗಳನ್ನು ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ವಿಡಿಯೋ ಮತ್ತು ಡೆತ್ ನೋಟ್ ಆಧಾರವಾಗಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪ್ರಿಯತಮೆಯ ಲಗ್ನ ಪತ್ರಿಕೆ ನೋಡಿ ಬಾಡಿ ಬಿಲ್ಡರ್ ಆತ್ಮಹ*ತ್ಯೆ

 

ಬೆಂಗಳೂರು: ಪ್ರೀತಿಸಿದ ಯುವತಿ ತನಗೆ ಕೈಕೊಟ್ಟು ಬೇರೆಯವನೊಂದಿಗೆ ಮದುವೆಯಾಗುತ್ತಿದ್ದಾಳೆಂಬ ಸುದ್ದಿಯನ್ನು ಸಹಿಸಲಾಗದೆ ಬೆಂಗಳೂರಿನ ಖ್ಯಾತ ಬಾಡಿ ಬಿಲ್ಡರ್ ನೇಣಿಗೆ ಶರಣಾಗಿರುವ ಘಟನೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ.

ಪ್ರಕರಣದ ವಿವರ:

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕಿರಣ್ (26) ಎಂದು ಗುರುತಿಸಲಾಗಿದೆ. ಕಿರಣ್ ಹಲವು ವರ್ಷಗಳಿಂದ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಕಿರಣ್, ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಮುಂಬರುವ ಫೆಬ್ರವರಿ 14 ರ ‘ವ್ಯಾಲೆಂಟೈನ್ಸ್ ಡೇ’ (ಪ್ರೇಮಿಗಳ ದಿನ) ಸಂದರ್ಭದಲ್ಲಿ ತನ್ನ ಪ್ರೇಯಸಿಗೆ ವಿಶೇಷ ಉಡುಗೊರೆಯನ್ನು ನೀಡಿ ಸರ್ಪ್ರೈಸ್ ಕೊಡಲು ಕಿರಣ್ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗಿ, ಬೇರೊಬ್ಬನ ಜೊತೆ ಮದುವೆಯಾಗಲು ಸಿದ್ದಳಾಗುತ್ತಿದ್ದಳು.

ಯುವತಿಯ ಮದುವೆ ಬೇರೊಬ್ಬನೊಂದಿಗೆ ನಿಶ್ಚಯವಾಗಿದ್ದು ಮಾತ್ರವಲ್ಲದೆ, ಆಕೆ ಕಿರಣ್‌ಗೆ ತನ್ನ ಮದುವೆಯ ಲಗ್ನಪತ್ರಿಕೆ ಮತ್ತು ಮದುವೆಗಾಗಿ ಖರೀದಿಸಿದ ಹೊಸ ಸೀರೆಯನ್ನು ತೋರಿಸಿದ್ದಾಳೆ. ಇದರಿಂದ ತೀವ್ರ ಮನನೊಂದಿದ್ದ ಕಿರಣ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮನನೊಂದ ಕಿರಣ್ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ತನ್ನ ಮನೆಗೆ ಬಂದು ಯಾರೂ ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಮಗನನ್ನು ಕಳೆದುಕೊಂಡ ಪೋಷಕರು ಈಗ ಯುವತಿಯ ಕುಟುಂಬದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮೃತ ಕಿರಣ್ ತಾಯಿಯ ಆರೋಪದಂತೆ, ಕಿರಣ್ ಪ್ರೀತಿಸುತ್ತಿದ್ದ ಯುವತಿಯ ಪೋಷಕರು ಸುಮಾರು 50 ಲಕ್ಷ ರೂಪಾಯಿ ಸಾಲ ಹೊಂದಿದ್ದರು. ಈ ವಿಚಾರ ಕಿರಣ್‌ಗೆ ತಿಳಿದಾಗ, ನಿಮ್ಮ ಎಲ್ಲಾ ಸಾಲವನ್ನು ನಾನೇ ತೀರಿಸುತ್ತೇನೆ, ನನ್ನ ಪ್ರೇಯಸಿಯನ್ನು ನನಗೆ ಕೊಟ್ಟು ಮದುವೆ ಮಾಡಿ ಎಂದು ಭರವಸೆ ನೀಡಿದ್ದನಂತೆ. ಕಳೆದ ಎಂಟು ತಿಂಗಳ ಹಿಂದೆಯೇ ಯುವತಿ ಕಿರಣ್ ಮನೆಗೆ ಬಂದು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದಳು. ತನಗಿಂತ ಎರಡು ವರ್ಷ ದೊಡ್ಡವಳಾಗಿದ್ದರೂ ಕಿರಣ್ ಆಕೆಯನ್ನು ಮನಸ್ಪೂರ್ತಿಯಾಗಿ ಪ್ರೀತಿಸಿ ಮದುವೆಯಾಗಲು ಇಚ್ಚಿಸಿದ್ದ.

ಕಳೆದ ಒಂದು ವಾರದಲ್ಲಿ ಯುವತಿಯ ಕುಟುಂಬದವರು ಆಕೆಗೆ ಬೇರೊಬ್ಬನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಹಣ ಪಡೆದು ಈಗ ಮತ್ತೊಬ್ಬನ ಜೊತೆ ಮದುವೆಯಾಗಿ ನನ್ನ ಮಗನಿಗೆ ಮೋಸ ಮಾಡಿದ್ದಾರೆ ಎಂದು ಕಿರಣ್ ಪೋಷಕರು ಆರೋಪ ಮಾಡಿದ್ದಾರೆ.

ನಿನ್ನೆ ಸಂಜೆ ಕಿರಣ್ ತನ್ನ ತಾಯಿಯ ಬಳಿ ಹೋಗಿ ಬಿಳಿ ಹಾಳೆ (White Sheet) ಮತ್ತು ಪೆನ್ ಕೇಳಿದ್ದಾನೆ. ಮಗನ ವರ್ತನೆಯಿಂದ ಅನುಮಾನಗೊಂಡ ತಾಯಿ, ಯಾಕಪ್ಪಾ ವೈಟ್ ಪೇಪರ್ ? ಎಂದು ಪ್ರಶ್ನಿಸಿದಾಗ, ಕಿರಣ್ ಹೆದರಬೇಡಮ್ಮ, ಸುಮ್ಮನೆ ಫೈನಾನ್ಸ್ ಲೆಕ್ಕ ಬರೆಯಬೇಕು ಅಷ್ಟೇ ಎಂದು ಸುಳ್ಳು ಹೇಳಿ ಸಮಾಧಾನಪಡಿಸಿದ್ದಾನೆ. ಆದರೆ ಅದೇ ಹಾಳೆಯಲ್ಲಿ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಿರಣ್ ಬರೆದಿಟ್ಟಿರುವ ಡೆತ್ ನೋಟ್ ಈಗ ಪೊಲೀಸರ ವಶದಲಿದ್ದು, ಅದರಲ್ಲಿ ಪ್ರೀತಿಸಿದ ಯುವತಿ ಹಾಗೂ ಆಕೆಯ ಕುಟುಂಬಸ್ಥರ ಹೆಸರುಗಳನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಮಗನ ಸಾವಿಗೆ ಈ ಯುವತಿಯೇ ನೇರ ಕಾರಣ ಎಂದು ಪೋಷಕರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

 
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 02 11T181812.657

ಯು-ಟರ್ನ್ ಹೊಡೆದ ಅಮೆರಿಕ: PoK ಒಳಗೊಂಡ ಭಾರತದ ಭೂಪಟದ ಪೋಸ್ಟ್ ಡಿಲೀಟ್

by ಯಶಸ್ವಿನಿ ಎಂ
February 11, 2026 - 6:19 pm
0

Untitled design 2026 02 11T172350.281

ಕ್ಷಮೆಯಾಚಿಸಿದ ಚಂದ್ರಚೂಡ್: ಟಾಕ್ಸಿಕ್ ಪರ ಚಿತ್ರರಂಗ ಬ್ಯಾಟಿಂಗ್

by ಯಶಸ್ವಿನಿ ಎಂ
February 11, 2026 - 5:38 pm
0

Untitled design 2026 02 11T165619.221

ಗಾಯಕ ಉದಿತ್ ನಾರಾಯಣ್‌ಗೆ ಸಂಕಷ್ಟ: ಪತ್ನಿಯ ಗರ್ಭಕೋಶ ತೆಗೆಸಿದ ಆರೋಪದಡಿ ಎಫ್‌ಐಆರ್ ದಾಖಲು

by ಯಶಸ್ವಿನಿ ಎಂ
February 11, 2026 - 5:11 pm
0

Untitled design 2026 02 11T164700.182

ಬೆಂಗಳೂರಿನಲ್ಲಿ ಶಾಲಾ ಬಸ್ ಚಕ್ರಕ್ಕೆ ಸಿಲುಕಿ ಇಬ್ಬರು ಕಂದಮ್ಮಗಳ ದಾರುಣ ಸಾ*ವು

by ಯಶಸ್ವಿನಿ ಎಂ
February 11, 2026 - 4:47 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 11T181812.657
    ಯು-ಟರ್ನ್ ಹೊಡೆದ ಅಮೆರಿಕ: PoK ಒಳಗೊಂಡ ಭಾರತದ ಭೂಪಟದ ಪೋಸ್ಟ್ ಡಿಲೀಟ್
    February 11, 2026 | 0
  • Untitled design 2026 02 11T172350.281
    ಕ್ಷಮೆಯಾಚಿಸಿದ ಚಂದ್ರಚೂಡ್: ಟಾಕ್ಸಿಕ್ ಪರ ಚಿತ್ರರಂಗ ಬ್ಯಾಟಿಂಗ್
    February 11, 2026 | 0
  • Untitled design 2026 02 11T165619.221
    ಗಾಯಕ ಉದಿತ್ ನಾರಾಯಣ್‌ಗೆ ಸಂಕಷ್ಟ: ಪತ್ನಿಯ ಗರ್ಭಕೋಶ ತೆಗೆಸಿದ ಆರೋಪದಡಿ ಎಫ್‌ಐಆರ್ ದಾಖಲು
    February 11, 2026 | 0
  • Untitled design 2026 02 11T164700.182
    ಬೆಂಗಳೂರಿನಲ್ಲಿ ಶಾಲಾ ಬಸ್ ಚಕ್ರಕ್ಕೆ ಸಿಲುಕಿ ಇಬ್ಬರು ಕಂದಮ್ಮಗಳ ದಾರುಣ ಸಾ*ವು
    February 11, 2026 | 0
  • Untitled design 2026 02 11T162205.350
    ನಾಳೆ ಭಾರತ್ ಬಂದ್ ! ನಿಮ್ಮ ನಗರದಲ್ಲಿ ಏನಿರುತ್ತೆ? ಏನಿರಲ್ಲ?
    February 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version