ಮಹಾಕುಂಭ ಮೇಳ ಪ್ರಯಾಗ್ ರಾಜ್ ನಲ್ಲಿ ಧಾರ್ಮಿಕ ಭವ್ಯತೆ ಮತ್ತು ಆರ್ಥಿಕ ಸಾಧನೆಯು ಐತಿಹಾಸಿಕ ಮಿಲನಕ್ಕೆ ಸಾಕ್ಷಿಯಾಗಿದೆ. 144 ವರ್ಷಗಳ ನಂತರ ನಡೆದ ಈ ಮಹಾಸಮಾರಂಭಕ್ಕೆ ದೇಶ-ವಿದೇಶಗಳಿಂದ 54 ಕೋಟಿಗೂ ಹೆಚ್ಚು ಭಕ್ತರುತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ . ಆದರೆ, ಭಕ್ತರ ಸಂಖ್ಯೆ ಊಹೆಗಿಂತ ಮೀರಿದ್ದು, ಕಾಲ್ತುಳಿತದಂತಹ ದುರಂತಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಘಟನೆಯಲ್ಲಿ 40 ಜನ ಸಾವು ಮತ್ತು 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ಪ್ರಕಾರ, ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಜಂಟಿಯಾಗಿ 7,500 ಕೋಟಿ ರೂಪಾಯಿ ಖರ್ಚು ಮಾಡಿವೆ. ಇದರಲ್ಲಿ ಕೇವಲ 1,500 ಕೋಟಿ ಮಹಾಕುಂಭ ಆಯೋಜನೆಗೆ ಮೀಸಲಾಗಿದ್ದರೆ, ಉಳಿದ 6,000 ಕೋಟಿ ಪ್ರಯಾಗ್ ರಾಜ್ ರಸ್ತೆ, ರೈಲ್ವೆ, ವಿಮಾನ ನಿಲ್ದಾಣಗಳು ಮತ್ತು ನಗರ ಸೌಂದರ್ಯೀಕರಣಕ್ಕೆ ವಿನಿಯೋಗಿಸಲಾಗಿದೆ . ಇದರ ಪರಿಣಾಮವಾಗಿ, ರಾಜ್ಯದ ಆರ್ಥಿಕತೆಗೆ 3 ಲಕ್ಷ ಕೋಟಿ ರೂಪಾಯಿ ಆದಾಯವಾಗುವ ನಿರೀಕ್ಷೆಯಿದೆ.
ವಿರೋಧ ಪಕ್ಷಗಳು ಮಹಾಕುಂಭದ ಖರ್ಚು ಮತ್ತು ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರೆ, ಸಿಎಂ ಯೋಗಿ ಇದನ್ನು “ಆರ್ಥಿಕ ವರದಾನ” ಎಂದು ಪರಿಗಣಿಸಿದ್ದಾರೆ. ಅವರ ಮಾತುಗಳು: “ಕುಂಭವು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ಇದು ಉತ್ತರ ಪ್ರದೇಶವನ್ನು ವಿಶ್ವ ಮಾನಚಿತ್ರದಲ್ಲಿ ಸ್ಥಾಪಿಸಿದೆ. 50-55 ಕೋಟಿ ಭಕ್ತರ ಆಗಮನವು ಸ್ಥಳೀಯ ವ್ಯಾಪಾರ, ಹೋಟೆಲ್ ಮತ್ತು ಸಾರಿಗೆ ಸೇವೆಗಳಿಗೆ ಚಾಲನೆ ನೀಡಿದೆ” . ಇದರೊಂದಿಗೆ, ಅಯೋಧ್ಯೆಯ ರಾಮ ಮಂದಿರಕ್ಕೆ 700 ಕೋಟಿ ರೂಪಾಯಿ ದಾನವಾಗಿ ಬಂದಿದೆ ಎಂದು ಹೇಳಿದ್ದಾರೆ .
ಮಹಾಕುಂಭದಿಂದ ಪ್ರಯಾಗ್‌ರಾಜ್, ಕಾಶಿ, ಮತ್ತು ಅಯೋಧ್ಯೆಗೆ ಭಕ್ತರು ಹೆಚ್ಚು ಭೇಟಿ ನೀಡುವುದರ ಮೂಲಕ ಧಾರ್ಮಿಕ ಪ್ರವಾಸೋದ್ಯಮವು ಉತ್ತೇಜಿತವಾಗಿದೆ. ಸರ್ಕಾರದ ಯೋಜನೆಯ ಪ್ರಕಾರ, ಈ ಮೂರು ನಗರಗಳನ್ನು ಸಂಪರ್ಕಿಸುವ 120-150 ಕಿಮೀ ದೂರದ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಯು ದೀರ್ಘಕಾಲೀನ ಆರ್ಥಿಕ ಪ್ರಯೋಜನಗಳನ್ನು ನೀಡಲಿದೆ . ಕೇಂದ್ರ ಸಚಿವ ನಿತಿನ್ ಗಡ್ಕರಿಯು ಈ ಘಟನೆಯನ್ನು “ಭಾರತದ ಆರ್ಥಿಕ ಬೆಳವಣಿಗೆಯ ಇಂಜಿನ್” ಎಂದು ಹೆಸರಿಸಿದ್ದಾರೆ .