ಬಿಹಾರ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ (Exit Poll) ಹೊರಬಿದ್ದಿದೆ. ಬಿಹಾರದಲ್ಲಿ ನವೆಂಬರ್ 11 ರಂದು 2ನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದೆ. ಯಾವ್ಯಾವ ಸಮೀಕ್ಷಾ ಸಂಸ್ಥೆಗಳು ಯಾವ ಮೈತ್ರಿ ಕೂಟಕ್ಕೆ ಎಷ್ಟು ಅಂಕ ನೀಡಿವೆ ಅನ್ನೋದ್ರ ಸಮಗ್ರ ಮಾಹಿತಿ ಇಲ್ಲಿದೆ..
ಗ್ಯಾರಂಟಿ ನ್ಯೂಸ್-ಬಿಹಾರ್ ಪಲ್ಸ್:
ಎನ್‌ಡಿಎ: 115-125
ಮಹಾಘಟಬಂಧನ್: 110-120
ಇತರೆ: 04-06
(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)
ದೈನಿಕ್ ಭಾಸ್ಕರ್:
ಎನ್‌ಡಿಎ:131
ಮಹಾಘಟಬಂಧನ:121
(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)
ಮ್ಯಾಟ್ರಿಜ್:
ಎನ್‌ಡಿಎ: 147-167
ಮಹಾಘಟಬಂಧನ: 70-90
(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)
====================
ಪೀಪಲ್ಸ್ ಪಲ್ಸ್:
ಎನ್‌ಡಿಎ: 133–159
ಮಹಾಘಟಬಂಧನ: 75–101
(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)
====================
ಪೋಲ್ ಸ್ಟಾರ್ಟ್:
ಎನ್‌ಡಿಎ: 133-148
ಮಹಾಘಟಬಂಧನ: 87-102
ಇತರೆ: 03-05
(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)
====================
ಸ್ವದೇಶ್:
ಎನ್‌ಡಿಎ: 126
ಮಹಾಘಟಬಂಧನ: 103
ಇತರೆ: 14
(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)
====================
ಪೋಲ್ ಡೈರಿ:
ಎನ್‌ಡಿಎ: 184-209
ಮಹಾಘಟಬಂಧನ: 32-49
ಇತರೆ: 14
(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)
ಚಾಣಕ್ಯ ಸ್ಟ್ರಾಟಜಿಸ್:
ಎನ್‌ಡಿಎ: 130-138
ಮಹಾಘಟಬಂಧನ: 100-108
ಇತರೆ: 03-05
(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)
====================
ಪೀಪಲ್ ಇನ್‌ಸೈಟ್:
ಎನ್‌ಡಿಎ: 133-148
ಮಹಾಘಟಬಂಧನ: 87-102
ಇತರೆ: 03-06
(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)
====================
ಜೆವಿಸಿ:
ಎನ್‌ಡಿಎ: 135-150
ಮಹಾಘಟಬಂಧನ: 88-103
ಇತರೆ: 04-06
(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)
====================
ಎಬಿಪಿ ಲೈವ್:
ಎನ್‌ಡಿಎ: 147-167
ಮಹಾಘಟಬಂಧನ: 70-90
ಇತರೆ: 02-06
(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)
NDTV:
ಎನ್‌ಡಿಎ: 133-159
ಮಹಾಘಟಬಂಧನ: 75-101
ಇತರೆ: 02-08
(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)
====================
ಪಿ-ಮಾರ್ಕ್:
ಎನ್‌ಡಿಎ: 142-162
ಮಹಾಘಟಬಂಧನ: 82-98
ಇತರೆ: 01-04
(ಒಟ್ಟು ಕ್ಷೇತ್ರಗಳು-243 / ಮ್ಯಾಜಿಕ್ ನಂಬರ್-122)
ಬಿಹಾರದಲ್ಲಿ ಒಟ್ಟು 243 ವಿಧಾನಸಭಾ ಕ್ಷೇತ್ರಗಳಿದ್ದು, 2 ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. 123 ಸ್ಥಾನಗಳನ್ನು ಗೆಲ್ಲುವ ಮೈತ್ರಿ ಕೂಟ ಬಿಹಾರದಲ್ಲಿ ಸರ್ಕಾರ ರಚನೆ ಮಾಡಲಿದೆ. ಈ ಪೈಕಿ ‘ಮ್ಯಾಜಿಕ್ ನಂಬರ್’ ಯಾವ ಮೈತ್ರಿ ಕೂಟಕ್ಕೆ ಸಿಗಲಿದೆ ಅನ್ನೋ ಕುತೂಹಲ ಹಾಗೂ ನಿರೀಕ್ಷೆ ಗರಿಗೆದರಿದೆ. ಸದ್ಯ ಮತಗಟ್ಟೆ ಸಮೀಕ್ಷೆ ಪ್ರಕಾರ ಎನ್‌ಡಿಎ ಮೈತ್ರಿ ಕೂಟವೇ ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರುವ ಸಾಧ್ಯತೆ ವ್ಯಕ್ತವಾಗ್ತಿದೆ. ಈ ಬಾರಿಯೂ ಎನ್‌ಡಿಎ ಮೈತ್ರಿ ಕೂಟ ಗೆಲುವು ಸಾಧಿಸಿದರೆ ನಿತೀಶ್ ಕುಮಾರ್ 10ನೇ ಬಾರಿ ಸಿಎಂ ಕುರ್ಚಿ ಏರುವ ಸಾಧ್ಯತೆ ಇದೆ.
ಒಂದು ವೇಳೆ ಮಹಾಘಟಬಂಧನ ಗೆಲುವು ಸಾಧಿಸಿದರೆ ತೇಜಸ್ವಿ ಯಾದವ್ ತಮ್ಮ ಅಪ್ಪನಂತೆಯೇ ಸಿಎಂ ಗಾದಿ ಅಲಂಕರಿಸಲಿದ್ದಾರೆ. ಈ ನಡುವೆ, ಪ್ರಶಾಂತ್ ಕಿಶೋರ್ ಕಿಂಗ್ ಮೇಕರ್ ಆಗ್ತಾರಾ ಅನ್ನೋ ಪ್ರಶ್ನೆಗಳಿವೆ. ಈ ಬಾರಿ ಬಿಹಾರದಲ್ಲಿ ದಾಖಲೆಯ ಮತದಾನದ ಜೊತೆಗೆ, ಯುವಕರು, ಮಹಿಳಾ ಮತದಾರರು ಮತ್ತು ಝೆನ್Z ವೋಟರ್ಸ್‌ಗಳ ಉತ್ಸಾಹದಿಂದ ಚುನಾವಣೆಯಲ್ಲಿ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಹಾರ ಚುನಾವಣೆಯ ಫಲಿತಾಂಶ ಸಾಕಷ್ಟು ಕುತೂಹಲ ಕೆರಳಿಸಿದೆ. ನವೆಂಬರ್ 14 ಶುಕ್ರವಾರ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟ ಆಗಲಿದ್ದು, ಅಂದೇ ಎಲ್ಲರ ಭವಿಷ್ಯ ನಿರ್ಧಾರ ಆಗಲಿದೆ.