• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಏನಿದು ದಯಾಮರಣ ? ಮರಣದ ಹಕ್ಕಿಗೆ ಬುನಾದಿ ಹಾಕಿದ ಅರುಣಾ ಶಾನ್‌ಬಾಗ್ ಮನಕಲಕುವ ಕಥೆ ನಿಮಗೊತ್ತೇ ?

admin by admin
March 11, 2026 - 8:07 pm
in Flash News, ದೇಶ
0 0
0
Untitled design 2026 03 11T194532.871

ಕಟ್ಟಡದಿಂದ ಬಿದ್ದು 13 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಅನುಮತಿ ನೀಡಿದೆ. ಈ ಮೂಲಕ ಭಾರತದಲ್ಲಿ ‘ಗೌರವಯುತವಾಗಿ ಸಾಯುವ ಹಕ್ಕು’ ಮತ್ತು ‘ಯೂಥನೇಷಿಯಾ’ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಯೂಥನೇಷಿಯಾ ಎಂದೊಡನೆ ನೆನಪಾಗುವುದು ಅರುಣಾ ರಾಮಚಂದ್ರ ಶಾನ್‌ಬಾಗ್ ಪ್ರಕರಣ. ಭಾರತದಲ್ಲಿ ‘ರೈಟ್ ಟು ಡೈ’ ಅಥವಾ ಘನತೆಯಿಂದ ಸಾಯುವ ಹಕ್ಕಿಗೆ ಅಡಿಪಾಯ ಹಾಕಿದ್ದ ಅವರ ಮನಕಲುಕುವ ಕಥೆ ಇಲ್ಲಿದೆ ನೋಡಿ.

ಏನಿದು ಯೂಥನೇಷಿಯಾ?

ಗುಣಪಡಿಸಲಾಗದ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಅಥವಾ ದೀರ್ಘಕಾಲದಿಂದ ತೀವ್ರ ಯಾತನೆ ಅನುಭವಿಸುತ್ತಿರುವ ವ್ಯಕ್ತಿಗೆ ಅವರ ಇಚ್ಛೆಯ ಮೇರೆಗೆ ಅಥವಾ ಕುಟುಂಬದವರ ಕೋರಿಕೆ ಮೇರೆಗೆ ಗೌರವಯುತವಾಗಿ ಸಾವಿಗೆ ಅವಕಾಶ ನೀಡುವ ವೈದ್ಯಕೀಯ ಕ್ರಮವೇ ಯೂಥನೇಷಿಯಾ.

RelatedPosts

ದೀಪಾವಳಿಗೆ ರೈತರಿಗೆ ₹2,000 ಗಿಫ್ಟ್‌? ಪಿಎಂ ಕಿಸಾನ್ 24ನೇ ಕಂತಿನ ಹಣ ಯಾವಾಗ ಜಮೆ?

ಪಾಕಿಸ್ತಾನದಲ್ಲಿ ಶಾಲೆಯ ಮೇಲ್ಛಾವಣಿ ಕುಸಿದು 17 ಮಕ್ಕಳು ದುರ್ಮರಣ

ಪಿಂಚಣಿ ಯೋಜನೆಗಳಿಂದ ಇಂದಿರಾ ಗಾಂಧಿ ಹೆಸರು ಕೈಬಿಟ್ಟ ಕೇಂದ್ರ ಸರ್ಕಾರ: ಹೊಸ ಹೆಸರೇನು?

ಅಂಕಿತಾ ಭಂಡಾರಿ ಕೊ*ಲೆ ಕೇಸ್‌: ಇಂಡಿಯಾ ಗೇಟ್‌ನಲ್ಲಿ ಪ್ರತಿಭಟನೆ, ಪೊಲೀಸರ ವಶದಲ್ಲಿದ್ದ ಪೋಷಕರು ರಿಲೀಸ್

ADVERTISEMENT
ADVERTISEMENT

ಯೂಥನೇಷಿಯಾದಲ್ಲಿ ಎರಡು ವಿಧ

  • ಪ್ಯಾಸಿವ್ ಯೂಥನೇಷಿಯಾ: ರೋಗಿಯ ಜೀವ ಉಳಿಸಬಹುದಾದ ಚಿಕಿತ್ಸೆಯನ್ನು (ಔಷಧಿ, ವೆಂಟಿಲೇಟರ್, ಲೈಫ್ ಸಪೋರ್ಟ್) ನಿಲ್ಲಿಸುವುದು

  • ಆಕ್ಟಿವ್ ಯೂಥನೇಷಿಯಾ: ವೈದ್ಯರು ಔಷಧಿ ನೀಡಿ ನೇರವಾಗಿ ಮರಣಕ್ಕೆ ಕಾರಣವಾಗುವುದು

ಭಾರತದಲ್ಲಿ ಪ್ಯಾಸಿವ್ ಯೂಥನೇಷಿಯಾ ಮಾತ್ರ ಕಾನೂನುಬದ್ಧ. 2018ರಲ್ಲಿ ಸುಪ್ರೀಂ ಕೋರ್ಟ್ ಘನತೆಯಿಂದ ಬದುಕುವ ಹಕ್ಕಿನ ಜೊತೆಗೆ ಘನತೆಯಿಂದ ಸಾಯುವ ಹಕ್ಕನ್ನೂ ಮೂಲಭೂತ ಹಕ್ಕಿನ ಭಾಗವಾಗಿ ಪರಿಗಣಿಸಿದೆ.

ಅರುಣಾ ಶಾನ್‌ಬಾಗ್‌ರ ನಾಲ್ಕು ದಶಕಗಳ ದುರಂತ ಕಥೆ

1973ರ ನವೆಂಬರ್ 27ರಂದು ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 25 ವರ್ಷದ ಅರುಣಾ ಶಾನ್‌ಬಾಗ್‌ಗೆ ಆ ದಿನ ಮರೆಯಲಾಗದ ದಿನ. ಶಿಫ್ಟ್ ಮುಗಿಸಿ ಮನೆಗೆ ತೆರಳಲು ಸಿದ್ಧರಾಗಿದ್ದ ಅರುಣಾ ಅವರಿಗೆ ಆಸ್ಪತ್ರೆಯ ವಾರ್ಡ್ ಬಾಯ್ ಸೋಹನ್‌ಲಾಲ್ ವಾಲ್ಮೀಕಿಯೊಂದಿಗೆ ಜಗಳವಾಯಿತು. ರಜೆ ಕೊಡದ ಕಾರಣಕ್ಕೆ ಆಕೆಯ ಮೇಲೆ ಹಲ್ಲೆ ನಡೆಸಿದ ಸೋಹನ್‌ಲಾಲ್, ನಾಯಿಯ ಸರಪಳಿಯಿಂದ ಕುತ್ತಿಗೆ ಬಿಗಿದು, ಭೀಕರವಾಗಿ ಹಲ್ಲೆ ನಡೆಸಿ, ಅತ್ಯಾಚಾರವೆಸಗಿದ್ದ.

ಈ ಪೈಶಾಚಿಕ ಕೃತ್ಯದಿಂದ ಅರುಣಾ ಅವರ ಮೆದುಳಿಗೆ ತೀವ್ರ ಹಾನಿಯುಂಟಾಯಿತು. ಕುತ್ತಿಗೆ ಬಿಗಿದಿದ್ದರಿಂದ ಮೆದುಳಿಗೆ ಆಕ್ಸಿಜನ್ ಸರಬರಾಜು ನಿಂತುಹೋಗಿ, ಅವರು ಶಾಶ್ವತ ವೆಜಿಟೇಟಿವ್ ಸ್ಥಿತಿಗೆ (ಜೀವಂತವಾಗಿದ್ದರೂ ಜಾಗೃತಿಯ ಅರಿವಿಲ್ಲದ ಸ್ಥಿತಿ) ಜಾರಿದರು. ಮಾತು, ಕೈಕಾಲು ಚಲನೆ, ಗ್ರಹಿಕೆ, ಭಾವನೆಗಳ ಪ್ರದರ್ಶನ ಸಂಪೂರ್ಣ ನಿಂತುಹೋಯ್ತು.

ವಿಚಿತ್ರವೆಂದರೆ, ಸೋಹನ್‌ಲಾಲ್‌ಗೆ ಕೊಲೆಯತ್ನ ಮತ್ತು ಕಳ್ಳತನದ ಆರೋಪದಡಿ ಶಿಕ್ಷೆಯಾಯಿತೇ ಹೊರತು, ಅತ್ಯಾಚಾರ ಆರೋಪದಡಿ ಶಿಕ್ಷೆಯಾಗಲಿಲ್ಲ. ಕಾರಣ, ಅತ್ಯಾಚಾರ ಯೋನಿಮಾರ್ಗದ ಮೂಲಕ ನಡೆದಿರಲಿಲ್ಲ, ಗುದದ್ವಾರದ ಮೂಲಕ ನಡೆದಿತ್ತು.

ಜೀವನೋಪಾಯಕ್ಕಾಗಿ ಆಸ್ಪತ್ರೆ ಸೇರಿದ ಅರುಣಾ, ಆ ಭೀಕರ ಘಟನೆಯಿಂದಾಗಿ ತಮ್ಮ ಉಳಿದ ಜೀವನವನ್ನೇ ಆಸ್ಪತ್ರೆಯಲ್ಲೇ ಕಳೆಯುವಂತಾಯಿತು. ಅವರಿಗೆ 8 ಜನ ಒಡಹುಟ್ಟಿದವರಿದ್ದರೂ, ಕಾಲಕ್ರಮೇಣ ಯಾರೂ ಆಸ್ಪತ್ರೆಗೆ ಭೇಟಿ ನೀಡುವುದನ್ನೇ ನಿಲ್ಲಿಸಿದರು. ನಾಲ್ಕು ದಶಕಗಳ ಕಾಲ ಅರುಣಾ ಅವರನ್ನು ನೋಡಿಕೊಂಡಿದ್ದು ಆಸ್ಪತ್ರೆಯ ಸಿಬ್ಬಂದಿಗಳೇ.

ಆಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದ ಡಾ. ಪ್ರತಾಪ್ ದೇಸಾಯಿ ಅವರನ್ನು ಅರುಣಾ ಪ್ರೀತಿಸುತ್ತಿದ್ದರು. ಮದುವೆಯಾಗಬೇಕಿತ್ತು. ಆದರೆ ಈ ಘಟನೆಯ ಬಳಿಕ ಅರುಣಾ ಅವರ ಆರೋಗ್ಯ ಸುಧಾರಿಸದೇ ಹೋದಾಗ, 1977ರಲ್ಲಿ ಡಾ. ದೇಸಾಯಿ ಬೇರೊಬ್ಬರನ್ನು ಮದುವೆಯಾದರು.

ನ್ಯಾಯಾಲಯದ ಮೆಟ್ಟಿಲೇರಿದ ‘ಅರುಣಾ ಕಥೆ’

2009ರಲ್ಲಿ ಪತ್ರಕರ್ತೆ ಪಿಂಕಿ ವಿರಾನಿ ಅರುಣಾ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಯೂಥನೇಷಿಯಾ ಅರ್ಜಿ ಸಲ್ಲಿಸಿದರು. 36 ವರ್ಷಗಳಿಂದ ಕೋಮಾದಲ್ಲಿದ್ದ ಅರುಣಾ ಅವರ ಸ್ಥಿತಿಯನ್ನು ವೈದ್ಯಕೀಯ ತಂಡ ‘ಶಾಶ್ವತ ವೆಜಿಟೇಟಿವ್ ಸ್ಥಿತಿ’ ಎಂದು ವರದಿ ನೀಡಿತು. ಈ ಪ್ರಕರಣವನ್ನಾಧರಿಸಿ 2011ರ ಮಾರ್ಚ್ 7ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿ, ಪ್ಯಾಸಿವ್ ಯೂಥನೇಷಿಯಾಗೆ ಮಾರ್ಗಸೂಚಿಗಳನ್ನು ರೂಪಿಸಿತು. ಆದರೆ ಅರುಣಾ ಅವರ ಪ್ರಕರಣದಲ್ಲಿ ಆಸ್ಪತ್ರೆಯ ಸಿಬ್ಬಂದಿ ಅವರ ಜೀವ ಉಳಿಸಲು ಬಯಸಿದ ಕಾರಣ ಯೂಥನೇಷಿಯಾ ಅರ್ಜಿ ತಿರಸ್ಕೃತವಾಯಿತು.

2015ರಲ್ಲಿ ನ್ಯುಮೋನಿಯಾದಿಂದ ಅರುಣಾ ಕೊನೆಯುಸಿರೆಳೆದರು. ದಶಕಗಳಿಂದ ಅವರನ್ನು ಶುಶ್ರೂಷೆ ಮಾಡಿದ ಆಸ್ಪತ್ರೆಯ ಸಿಬ್ಬಂದಿಗಳೇ ಅಂತಿಮ ವಿಧಿವಿಧಾನಗಳನ್ನೂ ನೆರವೇರಿಸಿದರು.

ಹರೀಶ್ ರಾಣಾ ಪ್ರಕರಣ ಮತ್ತು ಮಹತ್ವದ ತೀರ್ಪು

2018ರಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ‘ಗೌರವಯುತ ಮರಣ’ದ ಹಕ್ಕು ಕುರಿತು ಮಹತ್ವದ ತೀರ್ಪು ನೀಡಿ, ಪ್ಯಾಸಿವ್ ಯೂಥನೇಷಿಯಾಗೆ ಸಂಪೂರ್ಣ ಮಾನ್ಯತೆ ನೀಡಿತು. ‘ಲಿವಿಂಗ್ ವಿಲ್’ (ಮುಂಚಿತವಾಗಿಯೇ ತನ್ನ ಜೀವನಾವಧಿ ಚಿಕಿತ್ಸೆಗಳ ಬಗ್ಗೆ ನಿರ್ಧಾರ ಮಾಡುವುದು) ವ್ಯವಸ್ಥೆಗೂ ಅನುಮತಿ ನೀಡಿತು.

ಇದೀಗ 31 ವರ್ಷದ ಹರೀಶ್ ರಾಣಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪ್ಯಾಸಿವ್ ಯೂಥನೇಷಿಯಾಗೆ ಅನುಮತಿ ನೀಡಿದೆ. 2013ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಹರೀಶ್ ನಾಲ್ಕನೇ ಮಹಡಿಯಿಂದ ಬಿದ್ದು 13 ವರ್ಷಗಳಿಂದ ವೆಜಿಟೇಟಿವ್ ಸ್ಥಿತಿಯಲ್ಲಿದ್ದಾರೆ. ಅವರ ಪೋಷಕರ ಕೋರಿಕೆಯನ್ನಿಟ್ಟುಕೊಂಡು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಕೆವಿ ವಿಶ್ವನಾಥನ್ ಅವರ ಪೀಠ ಚೇತರಿಕೆಯ ಸಾಧ್ಯತೆ ಇಲ್ಲದ ಸಂದರ್ಭದಲ್ಲಿ ವೈದ್ಯರ ಕರ್ತವ್ಯವೂ ಮಿತಿಯೊಳಗೆ ಬರುತ್ತದೆ ಎಂದು ಹೇಳಿ ಪ್ಯಾಸಿವ್ ಯೂಥನೇಷಿಯಾಗೆ ಅನುಮತಿ ನೀಡಿದೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Your paragraph text (94)

ರಾಜ್ಯದಲ್ಲಿ ಮುಂದುವರಿಯಲಿದೆ ಮಳೆ ಆಟ: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ!

by ದಿಶಾ ಕೆ. ಎಸ್.
October 16, 2026 - 6:57 pm
0

Your paragraph text (92)

ಭಾರತ-ವೆಸ್ಟ್ ಇಂಡೀಸ್ ಟಿ20 ಪಂದ್ಯ: ಅಭಿಮಾನಿಗಳಿಗೆ ಗುಡ್‌ನ್ಯೂಸ್, ನಮ್ಮ ಮೆಟ್ರೋ ಸೇವೆ ವಿಸ್ತರಣೆ

by ದಿಶಾ ಕೆ. ಎಸ್.
October 16, 2026 - 6:04 pm
0

Your paragraph text (90)

ತಪಸ್ವಿನಿ ಪೂಣಚ್ಚ ನಾಯಕಿಯಾಗಿ ನಟಿಸಿರುವ “MR ಜಾಕ್” ಚಿತ್ರ ಡಿ. 4 ರಂದು ತೆರೆಗೆ

by ದಿಶಾ ಕೆ. ಎಸ್.
October 16, 2026 - 5:15 pm
0

Your paragraph text (89)

ಬೆಂಗಳೂರು ಹೊರವಲಯದಲ್ಲಿ ಅಕ್ರಮ ಪಿಜಿಗಳ ಹಾವಳಿ: 35ಕ್ಕೂ ಹೆಚ್ಚು ಪಿಜಿಗಳಿಗೆ ಪಂಚಾಯಿತಿ ನೋಟಿಸ್!

by ದಿಶಾ ಕೆ. ಎಸ್.
October 16, 2026 - 4:06 pm
0

ಸಂಬಂಧಿಸಿದ ಪೋಸ್ಟ್‌ಗಳು

  • ₹111.68 (3)
    ಪಾಕಿಸ್ತಾನದಲ್ಲಿ ಶಾಲೆಯ ಮೇಲ್ಛಾವಣಿ ಕುಸಿದು 17 ಮಕ್ಕಳು ದುರ್ಮರಣ
    October 15, 2026 | 0
  • ಮುನ್ಸೂಚನೆ (23)
    ಪತಿಯನ್ನು ಕೊಂದು ಶವ ಡ್ರಂನಲ್ಲಿ ಮುಚ್ಚಿಟ್ಟ ಪತ್ನಿಗೆ ಗಲ್ಲು ಶಿಕ್ಷೆ: ಪ್ರಿಯಕರನಿಗೂ ಮರಣದಂಡನೆ
    October 14, 2026 | 0
  • ಮುನ್ಸೂಚನೆ (22)
    ರೈಲ್ವೆ ನೌಕರರಿಗೆ ನವರಾತ್ರಿ ಬಂಪರ್ ಗಿಫ್ಟ್: 78 ದಿನಗಳ ಬೋನಸ್ ಘೋಷಿಸಿದ ಕೇಂದ್ರ ಸರ್ಕಾರ
    October 14, 2026 | 0
  • ಮುನ್ಸೂಚನೆ (18)
    ಮೈಸೂರು ದಸರಾ: ಪ್ರಶಾಂತ ಆನೆಗೆ ಚಿನ್ನದ ಅಂಬಾರಿ ಹೊರುವ ಚಾನ್ಸ್‌!
    October 14, 2026 | 0
  • ಮುನ್ಸೂಚನೆ (20)
    ಅಂಜನಾದ್ರಿ ಬೆಟ್ಟದಲ್ಲಿ ಹೊಸ ವಿವಾದ: ಮುಜರಾಯಿ ಸಿಬ್ಬಂದಿಯನ್ನು ಹೊರಹಾಕಿ ಕಚೇರಿಗಳಿಗೆ ಬೀಗ
    October 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version