ಶಿವಮೊಗ್ಗ: ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿಯೊಬ್ಬರು ತನ್ನ ಹನ್ನೊಂದು ವರ್ಷದ ಮಗಳನ್ನು ಭೀಕರವಾಗಿ ಕೊಂದು, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಮೆಗ್ಗಾನ್ ಆಸ್ಪತ್ರೆ ಕ್ವಾರ್ಟಸ್‌ನಲ್ಲಿ ನಡೆದಿದೆ. 11 ವರ್ಷದ ಪೂರ್ವಿಕ ಕೊಲೆಯಾಗಿದ್ದಾರೆ ಇನ್ನೂ 38 ವರ್ಷದ ಶರತಿ ಎಂಬುವವರು ಶತ್ಮಹತ್ಯೆಗೆ ಶರಣಾಗಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಶೃತಿ, ತನ್ನ ಮಗಳು ಪೂರ್ವಿಕಾ ಮಲಗಿದ್ದ ಸಮಯದಲ್ಲಿ ಅವಳ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ . ಈ ಭೀಕರ ಕೃತ್ಯವನ್ನು ಮಾಡಿದ ನಂತರ, ಶೃತಿ ಮಗಳ ಮೃತ ದೇಹದ ಮೇಲೆ ನಿಂತುಕೊಂಡು ಅಲ್ಲಿದ್ದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶೃತಿ ಅವರು ಮೆಗ್ಗಾನ್ ಆಸ್ಪತ್ರೆಯ ಒಬ್ಬ ಲ್ಯಾಬ್ ಟೆಕ್ನಿಶಿಯನ್ ರಾಮಣ್ಣ ಅವರ ಪತ್ನಿ. ಈ ದುರಂತ ಘಟನೆ ನಡೆದ ಸಮಯದಲ್ಲಿ, ಪತಿ ರಾಮಣ್ಣ ನೈಟ್ ಶಿಫ್ಟ್ ಡ್ಯೂಟಿಯಲ್ಲಿದ್ದರು. ಅವರು ಬೆಳಗ್ಗೆ ಡ್ಯೂಟಿ ಮುಗಿಸಿ ಮನೆಗೆ ಮರಳಿದಾಗ, ಮನೆಯ ಬಾಗಿಲು ತೆರೆಯದ ಕಾರಣ ಕಿಟಕಿಯ ಮೂಲಕ ನೋಡಿದ್ದಾರೆ.ಆಗ ಈ ಘಟನೆ ಬೆಳಕಿಗೆ ಬಂದಿದೆ ನಂತರ ಪೊಲೀಸರಿಗೆ ತಿಳಿಸಿದ್ದಾರೆ
ಮಾನಸಿಕ ಆರೋಗ್ಯ ಸಮಸ್ಯೆಯಿಂದಾಗಿ ಶೃತಿ ಅವರು ಕಳೆದ ಕೆಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೆಂದು ತಿಳಿದುಬಂದಿದೆ. ದುರಂತಕ್ಕೆ ಮುನ್ನ ರಾತ್ರಿ, ಮಗಳು ಪೂರ್ವಿಕಾ ತನ್ನ ತಂದೆಗೆ ಕರೆ ಮಾಡಿ, “ಅಮ್ಮ ಒಂದು ರೀತಿ ಆಡ್ತಿದ್ದಾರೆ” ಎಂದು ತಿಳಿಸಿದ್ದಳು. ಆ ಸಮಯದಲ್ಲಿ ಪತಿ ರಾಮಣ್ಣ, “ಎಲ್ಲಾ ಸರಿಯಾಗುತ್ತೆ, ಬೆಳಿಗ್ಗೆ ಬರ್ತಿನಿ” ಎಂದು ಹೇಳಿದ್ದರು. ದುರದೃಷ್ಟವಶಾತ್ ಅದೇ ರಾತ್ರಿ ಈ ಘಟನೆ ಸಂಭವಿಸಿದ.ಘಟನಾ ಸ್ಥಳಕ್ಕೆ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ . ಮೃತದೇಹಗಳನ್ನು ಪೊಸ್ಟ್ಮಾರ್ಟಮ್ ಗಾಗಿ ವೈದ್ಯಕೀಯ ವಿದ್ಯಾಲಯಕ್ಕೆ ರವಾನಿಸಲಾಗಿದೆ.