ರಾಯಬಾಗ ತಾಲೂಕಿನ ಕಪ್ಪಲಗುದ್ದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮತನಾಡುತ್ತಾ ಸತೀಶ್ ಜಾರಕಿಹೊಳಿ ಅವರನ್ನು ಮುಂದಿನ ಮುಖ್ಯಮಂತ್ರಿ ಪದವಿಗೆ ಸೂಚಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಯತೀಂದ್ರ ಸಿದ್ದರಾಮಯ್ಯ ಮಾತನಾಡುತ್ತಾ,ನಮ್ಮ ತಂದೆಯವರು ತಮ್ಮ ರಾಜಕೀಯ ಕೊನೆಗಾಲದಲ್ಲಿದ್ದಾರೆ. ಮುಂದಿನ ರಾಜಕೀಯಕ್ಕೆ ವೈಚಾರಿಕವಾಗಿ ಪ್ರಗತಿಪರ ತತ್ವ-ಸಿದ್ಧಾಂತ ಇರುವ ನಾಯಕರು ಬೇಕು. ಹೀಗಾಗಿ ಸತೀಶ್ ಜಾರಕಿಹೊಳಿಯವರು ಈ ಜವಾಬ್ದಾರಿ ನಿಭಾಯಿಸುತ್ತಾರೆ ಎಂದು ಭಾವಿಸುತ್ತೇನೆ. ಜಾರಕಿಹೊಳಿ ಅವರು ಮಾದರಿಯಾಗಿ ನಮ್ಮನ್ನು ಮುನ್ನಡೆಸುತ್ತಾರೆನ ಎಂದು ಮುಖ್ಯಮಂತ್ರಿ ಪದವಿಗೆ ಸೀಚಿಸಿದ್ದಾರೆ.
ಯತೀಂದ್ರ ಅವರ ಈ ಹೇಳಿಕೆಯು ಕಾಂಗ್ರೆಸ್ ಪಕ್ಷದ ಒಳಗೆ ನಡೆಯುತ್ತಿರುವ ನಾಯಕತ್ವ ಚರ್ಚೆಗೆ ಹೊಸ ತಿರುವನ್ನು ನೀಡಿದೆ. ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮನ್ನು ಮುಂದಿನ ನಾಯಕ ಎಂದು ಸೂಚಿಸಿಕೊಂಡಿದ್ದಾರೆ. ಯತೀಂದ್ರ ಅವರ ಈ ಹೇಳಿಕೆಯು ಪಕ್ಷದ ಒಳಗೆ ಪರ್ಯಾಯ ನಾಯಕತ್ವದ ಚರ್ಚೆಗೆ ಬೆಂಬಲವನ್ನು ನೀಡಿದಂತಾಗಿದೆ.
ಯತೀಂದ್ರ ಅವರ “ರಾಜಕೀಯ ಕೊನೆಗಾಲ” ಎಂಬ ಮಾತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ಕುರಿತು ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ. ಸಿದ್ದರಾಮಯ್ಯ ಅವರು ನಿವೃತ್ತಿಗೆ ಸನ್ನದ್ಧರಾಗುತ್ತಿದ್ದಾರೆಯೇ? ಅಥವಾ ಇದು ಪಕ್ಷದ ಒಳಗೆ ನಾಯಕತ್ವ ಬದಲಾವಣೆಗೆ ಸೂಚನೆಯೇ ಎಂದು ಕಾದುನೋಡಬೇಕಿದೆ.
ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದು, ಅನುಭವಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಯತೀಂದ್ರ ಅವರ ಈ ಹೇಳಿಕೆಯು ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಪದವಿಗೆ ಸೂಚಿಸಿದ ಮೊದಲ ಅಧಿಕೃತ ಸೂಚನೆಯಾಗಿದೆ.