ರಂಜಾನ್ ಹಂಬಕ್ಕೆ ಕೌನ್ ಡೌನ್ ಶುರುವಾಗಿದ್ದು, ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರ್ಜೂರ ಮತ್ತು ಡ್ರೈ ಫ್ರೂಟ್ಸ್‌ಗಳ ಬೇಡಿಕೆ ಹೆಚ್ಚಾಗುತ್ತೆದೆ. ರಂಜಾನ್ ಹಬ್ಬದ ಅಂಗವಾಗಿ ಮಾರುಕಟ್ಟೆಗಳಲ್ಲಿ ವಿವಿಧ ರೀತಿಯ ಖರ್ಜೂರಗಳು ಬಂದಿವೆ. ಮುಸ್ಲಿಂ ಪವಿತ್ರ ಮಾಸವಾದ ರಮಜಾನ್ ಸಮಯದಲ್ಲಿ ಖರ್ಜೂರ ಮತ್ತು ಒಣ ಹಣ್ಣುಗಳ ಸರಬರಾಜು ಹೆಚ್ಚಿರುತ್ತದೆ.
ಬೆಂಗಳೂರಿನ ರೆಸೆಲ್ ಮಾರುಕಟ್ಟೆ ಸೇರಿದಂತೆ ಎಲ್ಲೆಡೆ ಭರ್ಜರಿ ಖರ್ಜೂರ ಹಾಗೂ ಡ್ರೈ ಫ್ರೂಟ್ಸ್ ವ್ಯಾಪಾರ. ವ್ರತಾಚರಣೆ ವೇಳೆ, ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖರ್ಜೂರ ಮಾರಾಟವಾಗುತ್ತದೆ. ಪ್ರಪಂಚದಲ್ಲಿ 350ಕ್ಕೂ ಹೆಚ್ಚು ಬಗೆಯ ವಿಧದ ಖರ್ಜೂರಗಳಿವೆ.
ರಸೆಲ್ ಮಾರುಕಟ್ಟೆ ಸೇರಿದಂತೆ ನಗರದ ಎಲ್ಲಾ ಭಾಗಗಳಲ್ಲಿ42 ರೀತಿಯ ಖರ್ಜೂರ್ ಹಾಗೂ ಅಂತರರಾಷ್ಟ್ರೀಯ ಡ್ರೈ ಫ್ರೂಟ್ಸ್‌ಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಅಜುವಾ, ಸಕ್ಕರೆ ರಹಿತ ಮೆಡ್ಜಾಲ್, ರುತ್ಭ ಸುಖ್ರಿ, ಸಖಾರಿ, ಕಲ್ಮಿ, ಇರಾನಿ, ಅಂಬರ, ಖುದ್ರಿ, ಸಗಾಯಿ ಸೇರಿ ಹಲವಾರು ಬಗೆಯ ಖರ್ಜೂರಗಳು ಲಭ್ಯವಾಗಲಿದೆ.
ವಿಭಿನ್ನ ರೀತಿಯ ಡ್ರೈ ಫ್ರೂಟ್ಸ್ ಹಾಗು ಖರ್ಜೂರ ಕಂಡು ಗ್ರಾಹಕರು ಫುಲ್ ಖುಷಿಯಲ್ಲಿದ್ದಾರೆ.ಅಫ್ಘಾನಿಸ್ತಾನದ ಅಂಜೂರ, ಬಾದಾಮಿ, ಗೋಡಂಬಿ, ಪಿಸ್ತಾ ಮಾರುಕಟ್ಟೆ ಜನರ ಗಮನ ಸೆಳೆಯುತ್ತಿವೆ. ಬಾದಾಮಿ ಸೇರಿದಂತೆ ಪ್ರತಿ ಕೆಜಿಗೆ ₹100 ರಿಂದ ₹2000 ರವರೆಗೆ ದರಗಳಲ್ಲಿ ಲಭ್ಯವಿದೆ. ರಂಜಾನ್ ತಿಂಗಳಲ್ಲಿ ಮಾತ್ರ 12-15ಟನ್‌ನಷ್ಟು ಖರ್ಜೂರ್ ಮಾರಾಟವಾಗುವುದಾಗಿ ವ್ಯಾಪಾರಿಗಳು ತಿಳಿಸಿದ್ದಾರೆ.
ಮಾಂಸ ದರ ದುಬಾರಿ ಸಾಧ್ಯತೆ
ಹೊಸತೊಡಕು, ರಂಜಾನ್ ಹಿನ್ನೆಲೆ ಚಿಕನ್ ಮಟನ್ ದರ ಏರಿಕೆ ಸಾಧ್ಯವಾಗಲಿದೆ. ಮಾರ್ಚ್ 30 ರ ಯುಗಾದಿ ಮತ್ತು ಏಪ್ರಿಲ್ 01ರ ರಂಜಾನ್ ಹಬ್ಬದ ನಡುವೆ ಮಾಂಸದ ಬೇಡಿಕೆ ಹೆಚ್ಚಾಗಿ, ಚಿಕನ್ ಪ್ರತಿ ಕೆಜಿ ₹200-220 ರಿಂದ ₹230-240ಕ್ಕೂ, ಮಟನ್ ₹850-900 ರವರೆಗೆ ಏರಿಕೆಯ ಸಾಧ್ಯತೆ ಇದೆ. ಹಕ್ಕಿ ಜ್ವರದಿಂದ ಇತ್ತೀಚೆಗೆ ದರಗಳು ಇಳಿದಿದ್ದರೂ, ಹಬ್ಬಗಳಿಂದ ಮತ್ತೆ ಏರಿಕೆ ನಿರೀಕ್ಷಿಸಲಾಗಿದೆ.
ಕಳೆದ ಕೆಲ ದಿನಗಳಿಂದ ಹಕ್ಕಿ ಜ್ವರ ಕಾರಣದಿಂದ ಇಳಿಕೆ ಕಂಡಿದ್ದ ಮಾಂಸ ದರ. ತಿಂಗಳಾಂತ್ಯದಲ್ಲಿ ಎರಡು ಪ್ರಮುಖ ಹಬ್ಬಗಳು ಬರೋದ್ರಿಂದ ಮತ್ತೆ ಏರಿಕೆ ಸಾಧ್ಯತೆಯಾಗಲಿದೆ.
ಮಾರ್ಚ್ 30ರಂದು ಯುಗಾದಿ ಇರಲಿದ್ದು ಮಾರ್ಚ್ 31 ಅಥವಾ ಏಪ್ರಿಲ್ 1ರಂದು ಹೊಸತೊಡಕು ಮತ್ತು ರಂಜಾನ್ ಆಚರಣೆ ಇರಲಿದೆ. ಈ ಹಬ್ಬಗಳ ಸಲುವಾಗಿ ಚಿಕನ್ ಪ್ರೈಸ್‌ನಲ್ಲಿ ಕೆಜಿಗೆ ₹10 ರಿಂದ ₹15 ಏರಿಕೆಯಾಗಲಿದೆ. ಮಟನ್ ಪ್ರೈಸ್ ಕೆಜಿಗೆ ₹50 ಏರಿಕೆ ಸಾಧ್ಯತೆ ಇದೆ. ಪ್ರಸ್ತುತ ಚಿಕನ್ ಪ್ರೈಸ್ ₹200-220 ರೂ ಗೆ ,ಮಟನ್ ಪ್ರೈಸ್ ₹800-850 ರೂ ಗೆ ಮಾರಾಟವಾಗುತ್ತಿದೆ.ಮಾರ್ಚ್ 30ರ ವೇಳೆಗೆ ₹900 ತಲುಪುವ ಸಾಧ್ಯತೆ ಇದೆ.