ಮುಂಬೈ: ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಏಳು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಕಸ್ತೂರಿ ಪಾಟೀಲ (50) ಎಂಬ ಮಹಿಳೆ ಇದೀಗ ತಮ್ಮ ಕುಟುಂಬದೊಂದಿಗೆ ಪುನಃ ಒಂದುಗೊಂಡಿರುವ ಹೃದಯಸ್ಪರ್ಶಿ ಘಟನೆ ಮುಂಬೈನಲ್ಲಿ ನಡೆದಿದೆ. ಸಾಮಾಜಿಕ ಸೇವಾ ಸಂಸ್ಥೆಯ ಸಹಾಯದಿಂದ ಈಕೆಯ ಮೂಲ ಪತ್ತೆಯಾಗಿದ್ದು, ಬಾದಾಮಿ ಪೊಲೀಸರ ಸಹಕಾರದಿಂದ ಈಕೆ ಮಗಳನ್ನು ಭೇಟಿಯಾದರು.
ಆಗಿದ್ದೇನು?
ಮಹಾರಾಷ್ಟ್ರದ ರಾಯಗಢದಲ್ಲಿ ಅಸ್ತವ್ಯಸ್ತ ಸ್ಥಿತಿಯಲ್ಲಿ ಓಡಾಡುತ್ತಿದ್ದ ಈ ಮಹಿಳೆಯನ್ನು ಪನ್ವೇಲ್ ಮೂಲದ ‘ಸೋಶಿಯಲ್ ಅಂಡ್ ಇವಾಂಜೆಲಿಕಲ್ ಅಸೋಸಿಯೇಷನ್ ಫಾರ್ ಲವ್’ (SEAL) ಎಂಬ ಎನ್ಜಿಒ ಕಾರ್ಯಕರ್ತರು ಗಮನಿಸಿದರು. ಮಾನಸಿಕ ಹಾಗೂ ದೈಹಿಕ ಸ್ಥಿತಿ ದುರಸ್ತಿ ಆಗಿದ್ದರಿಂದ ಅವರು ಆಶ್ರಯ ಕೇಂದ್ರಕ್ಕೆ ಕರೆದೊಯ್ದು ಆರೈಕೆ ಮಾಡಿದರು.
ಮಹಿಳೆ ಬಾದಾಮಿಗೆ ಹೇಗೆ ತಲುಪಿದರು?
ಇತ್ತೀಚೆಗೆ ಮಾತನಾಡುತ್ತಿದ್ದಾಗ, ಅವರು ‘ಬಾದಾಮಿ’ ಎಂದು ಉಲ್ಲೇಖಿಸಿದರು. ಬಾದಾಮಿ ಎಂಬುದು ಕರ್ನಾಟಕದ ಒಂದು ಸ್ಥಳ ಎಂಬುದು ಫಿಲಿಪ್ ಅವರಿಗೆ ತಿಳಿದಿತ್ತು. ಕೂಡಲೇ ಫಿಲಿಪ್ ಅವರು ಬಾದಾಮಿ ಪೊಲೀಸ್ ಠಾಣೆಗೆ ಕರೆ ಮಾಡಿ ಕಸ್ತೂರಿ ಅವರ ಫೋಟೋಗಳನ್ನು ವಾಟ್ಸ್‌ಆಪ್‌ನಲ್ಲಿ ಕಳುಹಿಸಿದ್ದರು. ತಕ್ಷಣವೇ, ಪೊಲೀಸರು ಇವರ ಪುತ್ರಿ ದೇವಮ್ಮ ಭಿಂಗಾರಿ 7 ವರ್ಷಗಳಿಂದ ತಾಯಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿರುವುದು ತಿಳಿಯಿತು.
ನಾಪತ್ತೆಯಾಗಲು ಕಾರಣವೇನು?
ಕಸ್ತೂರಿ ಪಾಟೀಲ ಅವರ ಪತಿ ಎರಡನೇ ಮದುವೆ ಮಾಡಿಕೊಂಡಿರುವ ವಿಷಯ ತಿಳಿದು, ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದರೂ, ಆಘಾತದಿಂದ ಮನೆಯಿಂದ ತಪ್ಪಿಸಿಕೊಂಡು ಮಹಾರಾಷ್ಟ್ರದ ರಾಯಗಢಕ್ಕೆ ಹೋದರು. ರಾಯಗಢಕ್ಕೆ ತೆರಳಿದ್ದರು. ಆದರೆ ಅಲ್ಲಿ ದಿಕ್ಕಿ ಕಾಣದೇ ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಆಳಿದುಳಿದ ಆಹಾರ, ಪಾದಚಾರಿಗಳು ಅಥವಾ ಪ್ರಯಾಣಿಕರು ಕೊಟ್ಟ ತಿನಿಸು ಸೇವಿಸಿ ಜೀವನ ಮಾಡುತ್ತಿದ್ದರು. ಬಳಿಕ ಸ್ಥಳಿಯ ಜನರು ಆಕೆಯನ್ನು ಸೀಲ್ ಸಂಸ್ಥೆ ತಲುಪಿಸಿದ್ದರು.
ಪುನಃ ಕುಟುಂಬದೊಂದಿಗೆ ಸೇರಿಕೊಂಡರು
ಪೊಲೀಸರು ಮತ್ತು ಎನ್ಜಿಒ ಸಹಕಾರದಿಂದ, ಕಸ್ತೂರಿ ಪಾಟೀಲ ಅವರನ್ನು ಮಗಳು ದೇವಮ್ಮನೊಂದಿಗೆ ಮತ್ತೆ ಸೇರಿಸಲಾಯಿತು.