ಬೆಂಗಳೂರು, ಆಗಸ್ಟ್ 10: ಬೆಂಗಳೂರು, ಆಗಸ್ಟ್ 10: ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಇಂದಿನಿಂದ ಮಳೆ ಕಡಿಮೆಯಾಗಲಿದ್ದು, ಆಗಸ್ಟ್ 15ರಿಂದ ಮತ್ತೆ ಜೋರಾಗಲಿದೆ. ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾಗುವ ನಿರೀಕ್ಷೆಯಿದೆ. ಆದರೆ ಆಗಸ್ಟ್ 15ರಿಂದ ಮತ್ತೆ ಭಾರೀ ಮಳೆಯ ಸಾಧ್ಯತೆ ಇದೆ.
ಯಾವ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್?
ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆ ಹೆಚ್ಚಾಗುವ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ತುಮಕೂರು ಜಿಲ್ಲೆಗಳು ಇದರಲ್ಲಿ ಸೇರಿವೆ.
ವಿಜಯನಗರ, ಶಿವಮೊಗ್ಗ, ಕೊಡಗು, ದಾವಣಗೆರೆ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಳಗಾವಿ, ಬೀದರ್, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಇತ್ತೀಚಿನ ದಿನಗಳಲ್ಲಿ ನರಗುಂದ, ವಿಜಯಪುರ, ಕೋಲಾರ, ಹುಣಸಗಿ, ಲೋಕಾಪುರ, ಜಗಳೂರು, ಚಿಂತಾಮಣಿ, ಬರಗೂರು, ಗೌರಿಬಿದನೂರು, ಭರಮಸಾಗರ, ಯಲಬುರ್ಗಾ, ಪರಶುರಾಂಪುರ, ಲಕ್ಷ್ಮೇಶ್ವರ, ಗೋಕಾಕ್, ಗದಗ, ದಾವಣಗೆರೆ, ಮುನಿರಾಬಾದ್, ಸಿಂದಗಿ, ಸೈದಾಪುರ, ಹುನಗುಂದ, ಕಕ್ಕೇರಿ, ಗೇರುಸೊಪ್ಪ, ಚಿತ್ರದುರ್ಗ, ಅಣ್ಣಿಗೆರೆ, ತಿಪಟೂರು, ಕಿಬ್ಬನಹಳ್ಳಿ, ಹಿರಿಯೂರು, ರಬಕವಿ, ಕುಷ್ಟಗಿ, ಬೆಳ್ಳೂರು, ಬಾದಾಮಿ, ಹಗರಿಬೊಮ್ಮನಹಳ್ಳಿ ಹಾಗೂ ಆಗುಂಬೆಗಳಲ್ಲಿ ಮಳೆಯಾಗಿದೆ.
ಹವಾಮಾನ ಇಲಾಖೆ ಪ್ರಕಾರ ಕರಾವಳಿ ಭಾಗಗಳಲ್ಲಿ ಮುಂದಿನ ಕೆಲವು ದಿನ ಮಳೆ ಕಡಿಮೆಯಾಗಿದ್ರೂ, ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಆಗಸ್ಟ್ 15ರಿಂದ ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಜೋರಾದ ಮಳೆ ಬೀಳುವ ಸಾಧ್ಯತೆ ಇದೆ.