ರಾಜ್ಯದ ಜನರಿಗೆ ಇಂದು ಬಸ್ ಬಂದ್ ಬಿಸಿ ತಟ್ಟಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ಸಾರಿಗೆ ನೌಕರರು ಫ್ರೀಡಂ ಪಾರ್ಕ್‌ನಲ್ಲಿ ಬೆಂಗಳೂರು ಚಲೋ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಗೆ ತಕ್ಕ ಮಟ್ಟಿನ ಯಶಸ್ಸು ಲಭ್ಯವಾದಂತಿದೆ. ಇಂದು ಸಾರಿಗೆ ಬಸ್‌ಗಳು ಲಭ್ಯವಿಲ್ಲದ ಕಾರಣ ಜನರು ಬಸ್‌ಗಳಿಲ್ಲದೆ ಹೈರಾಣಾದರು.
ಸಾರಿಗೆ ನೌಕರರ ಕೂಟ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಬಸ್ ಬಿಸಿ ಎಲ್ಲರಿಗೂ ತಟ್ಟಿದಂತಾಗಿದೆ. ಪ್ರತಿಭಟನೆಯ ಕಾರಣದಿಂದ ಬಸ್ ಸಂಚಾರದಲ್ಲಿ ಉಂಟಾದ ವ್ಯತ್ಯಯದಿಂದ ಅಲ್ಪ ಮಟ್ಟಿನ ಆತಂಕ ಜನರಲ್ಲಿ ಮನೆಮಾಡಿತ್ತು.
ಸಾರಿಗೆ ನೌಕರರ ಈ ಪ್ರತಿಭಟನೆಯನ್ನು ತಪ್ಪಿಸುವ ಉದ್ಧೇಶದಿಂದ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಗಳು ಆಗಬಾರದು ಎನ್ನುವ ಕುರಿತಾಗಿ ಸರ್ಕಾರ ಸಾರಿಗೆ ಸಂಘಟನೆಗಳಿಗೆ ಸಂಜೆ 4 ಗಂಟೆಯ ಒಳಗೆ ತಮ್ಮ ನಿರ್ಧಾರ ಏನು ಎನ್ನುವ ಕುರಿತು ಸ್ಪಷ್ಟ ನಿಲುವು ಏನು ಎಂಬುದನ್ನು ತಿಳಿಸಲು ಡೆಡ್‌ಲೈನ್ ಅನ್ನು ನೀಡಿದೆ.
ಮುಖ್ಯವಾಗಿ ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳು:
- ಬಾಕಿ ಇರುವ 38 ತಿಂಗಳ ಸಂಬಳದ ಹಣವನ್ನು ನೀಡುವುದು.
- ವೇತನ ಪರಿಷ್ಕರಣೆಗೆ ಒತ್ತಾಯ
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಆದರೆ ಈ ಪ್ರತಿಭಟನೆಗೆ ತಕ್ಕ ಮಟ್ಟಿನ ಯಶಸ್ಸು ಈಗ ಲಭ್ಯವಾಗಿದೆ..
ಆದರೆ ಇದರಲ್ಲೂ ಒಂದು ಸಂಶಯವೆಂದರೆ ಪ್ರತಿಭಟನೆ ಮಾಡುತ್ತಿರುವ ಸಾರಿಗೆ ನೌಕರರಲ್ಲೇ ಒಮ್ಮತ ಇಲ್ಲದಿರುವುದು ಗೊಂದಲ ಮೂಡಿಸಿದಂತಿದೆ. ಇಂದು ಬಸ್‌ಗಳು ಬೀದಿಗಿಳಿಯುತ್ತವೋ ಇಲ್ಲವೋ ಎಂಬ ಗೊಂದಲದಲ್ಲಿ ಜನ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಈ ನಡುವೆ ಸರ್ಕಾರ ಸೂಚನೆ ಒಂದಿದ್ದರೆ ಸಾರಿಗೆ ನೌಕರರ ಬೇಡಿಕೆಗಳು ಒಂದು ರೀತಿಯದ್ದಾಗಿದೆ .ಒಟ್ಟಿನಲ್ಲಿ ಸರ್ಕಾರ ಮತ್ತು ಸಾರಿಗೆ ನೌಕರರ ನಡುವೆ ಸಾಮರಸ್ಯ ಇಲ್ಲದಿರುವುದು ಸಾರಿಗೆ ನೌಕರರು ಮತ್ತು ಸರ್ಕಾರದ ನಡುವೆ ಜಟಾಪಟಿಗೆ ಕಾರಣವಾಗಿದೆ.





