ಸಾರಿಗೆ ನೌಕರರ ಜಟಾಪಟಿಗೆ ಫುಲ್‌ಸ್ಟಾಪ್‌ ನೀಡಲು ಸರ್ಕಾರ ಸಜ್ಜು..!

BeFunky collage 2026 02 19T150929.380

ರಾಜ್ಯದ ಜನರಿಗೆ ಇಂದು ಬಸ್‌ ಬಂದ್‌ ಬಿಸಿ ತಟ್ಟಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ಸಾರಿಗೆ ನೌಕರರು ಫ್ರೀಡಂ ಪಾರ್ಕ್‌ನಲ್ಲಿ ಬೆಂಗಳೂರು ಚಲೋ ಬೃಹತ್‌ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಗೆ ತಕ್ಕ ಮಟ್ಟಿನ ಯಶಸ್ಸು ಲಭ್ಯವಾದಂತಿದೆ. ಇಂದು ಸಾರಿಗೆ ಬಸ್‌ಗಳು ಲಭ್ಯವಿಲ್ಲದ ಕಾರಣ ಜನರು ಬಸ್‌ಗಳಿಲ್ಲದೆ ಹೈರಾಣಾದರು.

ಸಾರಿಗೆ ನೌಕರರ ಕೂಟ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಬಸ್‌ ಬಿಸಿ ಎಲ್ಲರಿಗೂ ತಟ್ಟಿದಂತಾಗಿದೆ. ಪ್ರತಿಭಟನೆಯ ಕಾರಣದಿಂದ ಬಸ್‌ ಸಂಚಾರದಲ್ಲಿ ಉಂಟಾದ ವ್ಯತ್ಯಯದಿಂದ ಅಲ್ಪ ಮಟ್ಟಿನ ಆತಂಕ ಜನರಲ್ಲಿ ಮನೆಮಾಡಿತ್ತು.

ಸಾರಿಗೆ ನೌಕರರ ಈ ಪ್ರತಿಭಟನೆಯನ್ನು ತಪ್ಪಿಸುವ ಉದ್ಧೇಶದಿಂದ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಗಳು ಆಗಬಾರದು ಎನ್ನುವ ಕುರಿತಾಗಿ ಸರ್ಕಾರ ಸಾರಿಗೆ ಸಂಘಟನೆಗಳಿಗೆ ಸಂಜೆ 4 ಗಂಟೆಯ ಒಳಗೆ ತಮ್ಮ ನಿರ್ಧಾರ ಏನು ಎನ್ನುವ ಕುರಿತು ಸ್ಪಷ್ಟ ನಿಲುವು ಏನು ಎಂಬುದನ್ನು ತಿಳಿಸಲು ಡೆಡ್‌ಲೈನ್‌ ಅನ್ನು ನೀಡಿದೆ.

ಮುಖ್ಯವಾಗಿ ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳು:

ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಆದರೆ ಈ ಪ್ರತಿಭಟನೆಗೆ ತಕ್ಕ ಮಟ್ಟಿನ ಯಶಸ್ಸು ಈಗ ಲಭ್ಯವಾಗಿದೆ..

ಆದರೆ ಇದರಲ್ಲೂ ಒಂದು ಸಂಶಯವೆಂದರೆ ಪ್ರತಿಭಟನೆ ಮಾಡುತ್ತಿರುವ ಸಾರಿಗೆ ನೌಕರರಲ್ಲೇ ಒಮ್ಮತ ಇಲ್ಲದಿರುವುದು ಗೊಂದಲ ಮೂಡಿಸಿದಂತಿದೆ. ಇಂದು ಬಸ್‌ಗಳು ಬೀದಿಗಿಳಿಯುತ್ತವೋ ಇಲ್ಲವೋ ಎಂಬ ಗೊಂದಲದಲ್ಲಿ ಜನ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಈ ನಡುವೆ ಸರ್ಕಾರ ಸೂಚನೆ ಒಂದಿದ್ದರೆ ಸಾರಿಗೆ ನೌಕರರ ಬೇಡಿಕೆಗಳು ಒಂದು ರೀತಿಯದ್ದಾಗಿದೆ .ಒಟ್ಟಿನಲ್ಲಿ ಸರ್ಕಾರ ಮತ್ತು ಸಾರಿಗೆ ನೌಕರರ ನಡುವೆ ಸಾಮರಸ್ಯ ಇಲ್ಲದಿರುವುದು ಸಾರಿಗೆ ನೌಕರರು ಮತ್ತು ಸರ್ಕಾರದ ನಡುವೆ ಜಟಾಪಟಿಗೆ ಕಾರಣವಾಗಿದೆ.

Exit mobile version