ತಾಯಿ ಎಂದರೆ ಸರ್ವಸ್ವ, ಹೆತ್ತ ತಾಯಿ ಹತ್ತು ದೇವರಿಗೆ ಸಮ ಎಂದು ಎಲ್ಲರೂ ಆರಾಧಿಸುವ ಜಗದಲ್ಲಿ ಕೆಲವೊಬ್ಬ ನೀಚ ಮಕ್ಕಳು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ತನ್ನ ಕರಳುಬಳ್ಳಿ ಹರಿದು ಜೀವ ನೀಡಿದ ತಾಯಿಯನ್ನು ತನ್ನ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಹೆತ್ತ ಮಗನೆ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಕೃತ್ಯ ನಡೆದ ಜಾಗದ ಮನೆಯಲ್ಲಿ ಪರಿಶೀಲನೆ ಮಾಡಿದ್ದಾರೆ.
ಕಳೆದ ರಾತ್ರಿ ಛಲ್ಲಗೇರಿ ಕುಟುಂಬದ ಮನೆಯಲ್ಲಿ ಅಕ್ರಮ ಸಂಬಂಧದ ವಿಚಾರವಾಗಿ ಪ್ರಶ್ನೆ ಮಾಡಿದಕ್ಕೆ ಸಹೋದರಾದ ಮಂಜು ಹಾಗೂ ಲಕ್ಷ್ಮಣ ನಡುವೆ ಜಗಳ ನಡೆಡಿದ್ದು, ಅದನ್ನು ಬಿಡಿಸಲು ಹೋದ ತಾಯಿ ಪದ್ಮಾ ಚಲ್ಲಗೆರಿಗೆ ಏಟು ಬಿದ್ದು ಸಾವನ್ನಪ್ಪಿದ ಘಟನೆ ನಗರದ ತೊರವಿಹಕ್ಕಲ್ ನಲ್ಲಿ ನಡೆದಿದೆ. ಮಕ್ಕಳು ಜಗಳ ಮಾಡುವುದನ್ನು ಬಿಡಿಸಲು ಹೋಗಿ ಪದ್ಮಾ ಕೊಲೆಯಾಗಿ ಹೋಗಿದ್ದಾರೆ. ಅಣ್ಣ ಮಂಜು ಹಾಗೂ ತಮ್ಮ ಲಕ್ಷ್ಮಣ್ ಕಟಿಂಗ್ ಶಾಪ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಅಣ್ಣ ಮಂಜು ಆಕ್ರಮಸಂಬಂಧ ಇಟ್ಕೊಂಡಿದ್ದ. ಇದನ್ನು ಪ್ರಶ್ನಿಸಿದ ತಮ್ಮನ ಜೊತೆ ಜಗಳ ಶುರುವಾಗಿದೆ. ಅದು ಪೋಲಿಸ್ ಮೆಟ್ಟಿಲು ಕೂಡ ಏರಿದೆ. ಪೊಲೀಸರು ಇಬ್ಬರಿಗೆ ಬುದ್ಧಿ ಮಾತು ಹೇಳಿ ಅಲ್ಲಿಂದ ಕಳಿಸಿದ್ದಾರೆ. ಅಲ್ಲಿಂದ ನೇರವಾಗಿ ಮನೆಗೆ ಬಂದ ಮೇಲೆ ಈ ಘಟನೆ ನಡೆದಿದೆ.
ಮನೆಗೆ ಬಂದು ತಡ ರಾತ್ರಿ ಮತ್ತೆ ಇಬ್ಬರ ನಡುವೆ ಜಗಳ ನಡೆದಿದೆ, ಜಗಳ ವಿಕೋಪಕ್ಕೆ ಹೋಗಿ, ಅಣ್ಣನಾದ ಮಂಜು, ತಮ್ಮನಿಗೆ ವಿಂಡೋ ಗ್ಲಾಸ್ ನಿಂದ್ ಹಲ್ಲೆ ಮಾಡಲು ಮುಂದಾಗಿದ್ದಾನೆ, ಅದನ್ನು ಬಿಡಿಸಲು ಬಂದ ತಾಯಿಗೆ ಗ್ಲಾಸ್ ತಾಗಿದೆ, ತೀವ್ರವಾಗಿ ಗಾಯಗೊಂಡ ಆಕೆಯನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಹೋದರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಪೋಲಿಸ್ ಆಯುಕ್ತ ಎನ್ ಶಶಿಕುಮಾರ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆಡಿದ್ದಾರೆ.
ಸದ್ಯ ಈ ಘಟನೆ ಕುರಿತು ಕಮರಿಪೇಟೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ವಿಚಾರವಾಗಿ ಪದ್ಮಾ ಪತಿ ಶ್ರೀನಿವಾಸ , ಮಕ್ಕಳಾದ ಮಂಜು ಹಾಗೂ ಲಕ್ಷ್ಮಣ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮಲ್ಲಿಕ್ ಬೆಳಗಲಿ, ಗ್ಯಾರಂಟಿ ನ್ಯೂಸ್, ಹುಬ್ಬಳ್ಳಿ





