ಹೆಗಡೆ ನಗರದಲ್ಲಿರುವ ಜಾಮೀಯ ಆಯೀಷ ಸಿದ್ದಿಕಾ ಆಲ್ ಬನಾತ್ ಮದರಸದಲ್ಲಿ ಬಾಲಕಿಯರ ಮೇಲೆ ಹಲ್ಲೆ ನಡೆದ ಘಟನೆ ಬೆಳಕಿಗೆ ಬಂದಿದೆ. ತಪ್ಪು ಮಾಡಿದ್ದಾರೆಂದು ಆರೋಪಿಸಿ, ಬಾಲಕಿಯನ್ನು ಕಚೇರಿಗೆ ಕರೆದು ಮನಬಂದಂತೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮದರಸವನ್ನು ಅನ್ವರ್ ಅಲಿ ರಶಿದ್ ಹಸನ್ ಅಲಿ ನಡೆಸುತ್ತಿದ್ದು, ಆರೋಪಿ ಅಮೀದ್, ಮದರಸಾದ ಆಡಳಿತ ಸದಸ್ಯ ಎಂದು ತಿಳಿದುಬಂದಿದೆ. ಆತನ ಸಹೋದರಿ ನಿಶಾ ಪ್ರಾಂಶುಪಾಲರಾಗಿದ್ದಾರೆ. ನಿನ್ನೆ ಸಹೋದರಿ ಸಲುಗೆಯಿಂದ ಒಳಗೆ ಹೋಗಿದ್ದಾನೆ. ಬಳಿಕ ಏಕಾಏಕಿ ನಾಲ್ಕೈದು ಮಕ್ಕಳಿಗೆ ಕೈ ಯಿಂದ ಹಲ್ಲೆ ಮಾಡಿದ್ದಾನೆ. ಥಣಿಸಂದ್ರದಲ್ಲಿ 2021 ರಿಂದ ಮದರಸಾ ನಡೆಸಲಾಗುತ್ತಿದೆ. 200 ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿದೆ.
ಮದರಸಾ ಆವರಣದಲ್ಲಿ ಹಲ್ಲೆ – ಪೋಷಕರ ಆಕ್ರೋಶ
ಮದರಸದಲ್ಲಿ ಕೆಲ ಮಕ್ಕಳ ಮೇಲೆ ತಪ್ಪು ಮಾಡಿದ್ದಾರೆ ಎಂದು ಆರೋಪಿಸಿ, ಅವರನ್ನು ಕಚೇರಿಗೆ ಕರೆಸಿ ನಿರ್ದಯವಾಗಿ ಹಲ್ಲೆ ಮಾಡಲಾಗಿದೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಈ ಘಟನೆಯ ವಿರುದ್ಧ ಪೋಷಕರು ಮದರಸ ಎದುರು ಗಲಾಟೆ ಮಾಡಿದ್ದಾರೆ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಪೊಲೀಸ್ ಕ್ರಮ – ಆರೋಪಿಯ ಬಂಧನ
ಈ ಕುರಿತು ಪೋಷಕರು ಕಮೀಷನರ್, ಎಸಿಪಿ, ಡಿಸಿಪಿ ಗೆ ದೂರನ್ನು ನೀಡಿದ್ದು, ಪೊಲೀಸರು ಕೂಡಲೇ ಎಫ್‌ಐಆರ್ ದಾಖಲಿಸಿ ಆರೋಪಿಯನ್ನ ಬಂಧಿಸಿದ್ದಾರೆ. CWC (ಚೈಲ್ಡ್ ವೆಲ್ಫೇರ್ ಕಮಿಟಿ) ಗೆ ಈ ಬಗ್ಗೆ ಪತ್ರ ಬರೆದಿದ್ದು, ಮದರಸಾದೊಳಗಿನ ಬೆಳವಣಿಗೆಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. CWC ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.