ಬೆಂಗಳೂರು: ರಾಜ್ಯದ ರಾಜಕೀಯದಲ್ಲಿ ಸ್ಪಷ್ಟತೆ ಮತ್ತು ಒಮ್ಮತದ ಸಂದೇಶ ನೀಡಲು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರ ಜಿಲ್ಲಾ ಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾಳೆ (ಜನವರಿ 29) ತಮ್ಮ ಮನೆಗೆ ಬ್ರೇಕ್ ಫಾಸ್ಟ್ (ಉಪಾಹಾರ) ಕೂಟಕ್ಕೆ ಆಹ್ವಾನಿಸಿದ್ದಾರೆ. ಈ ಭೇಟಿಯನ್ನು ‘ರಾಜ್ಯದ ಭರವಸೆಗಳನ್ನು ಈಡೇರಿಸಲು ಸಾಮೂಹಿಕ ಪ್ರಯತ್ನಗಳನ್ನು ಚರ್ಚಿಸುವ’ ಸಂದರ್ಭ ಎಂದು ಡಿ.ಕೆ.ಎಸ್. ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ತಮ್ಮ ‘X’ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ, ಕರ್ನಾಟಕಕ್ಕೆ ನಮ್ಮ ಭರವಸೆಗಳನ್ನು ಈಡೇರಿಸಲು ನಮ್ಮ ಸಾಮೂಹಿಕ ಪ್ರಯತ್ನಗಳನ್ನು ಚರ್ಚಿಸಲು ಮತ್ತು ಬಲಪಡಿಸಲು ನಾಳೆ ಮುಖ್ಯಮಂತ್ರಿಗಳನ್ನು ಉಪಾಹಾರಕ್ಕೆ ಆಹ್ವಾನಿಸಿದ್ದೇನೆ, ಎಂದು ಸೂಚಿಸಿದರು. ಇದಕ್ಕೂ ಮುಂಚಿತವಾಗಿ, ನಾನು ಮತ್ತು ಮುಖ್ಯಮಂತ್ರಿಗಳು ಒಂದು ತಂಡವಾಗಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ, ಎಂದು ಹೇಳಿ, ಮುಖ್ಯಮಂತ್ರಿ ಹುದ್ದೆಗೆ ನಡೆಯುತ್ತಿರುವ ಆಂತರಿಕ ಪೈಪೋಟಿಯ ಕುರಿತಾದ ಪ್ರಚಲಿತ ವದಂತಿಗಳಿಗೆ ಪೂರ್ಣವಿರಾಮ ಹಾಕಲು ಪ್ರಯತ್ನಿಸಿದ್ದಾರೆ.
Me and the CM continue to work together as a team.
I have invited the Hon’ble CM for breakfast tomorrow to discuss and strengthen our collective efforts to deliver on our promises to Karnataka.
— DK Shivakumar (@DKShivakumar) December 1, 2025
ಈ ಘಟನೆಯು ಹಲವಾರು ರಾಜಕೀಯ ಹಲವಾರು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಪದವಿಗಾಗಿ ಹಲವಾರು ಹಿರಿಯ ನಾಯಕರು ಪೈಪೋಟಿ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಡಿ.ಕೆ.ಎಸ್. ಮತ್ತು ಸಿದ್ದರಾಮಯ್ಯ ಅವರ ಈ ಅನೌಪಚಾರಿಕ ಭೇಟಿಯು, ಆಡಳಿತ ಪಕ್ಷದ ಮೇಲಿನ ಆಂತರಿಕ ಕಲಹದ ಆರೋಪಗಳನ್ನು ನಿರಾಕರಿಸಿ, ನಾಯಕತ್ವದಲ್ಲಿ ಏಕತೆ ಮತ್ತು ಸಹಕಾರ ಇದೆ ಎಂಬ ಸಂದೇಶ ನೀಡುತ್ತದೆ.
ರಾಜ್ಯದಲ್ಲಿ ಜಾರಿಯಲ್ಲಿರುವ ‘ಪ್ರಮುಖ ಐದು ಗ್ಯಾರಂಟಿ’ ಯೋಜನೆಗಳ ಅನುಷ್ಠಾನ, ಹಣಕಾಸಿನ ಸವಾಲುಗಳು ಮತ್ತು ಮುಂದಿನ ಹಂತದ ಅಭಿವೃದ್ಧಿ ಕಾರ್ಯಸೂಚಿಯ ಬಗ್ಗೆ ಈ ಸಮಾವೇಶದಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಅಧಿಕಾರಕ್ಕೆ ಬಂದ ನಂತರ ಈ ಗ್ಯಾರಂಟಿಗಳ ಅನುಷ್ಠಾನವೇ ಈ ಸರ್ಕಾರದ ಪ್ರಮುಖ ಆಧ್ಯತೆಯಾಗಿದೆ. ಜನರಿಗೆ ನೀಡಿದ ಮಾತುಗಳನ್ನು ಹೇಗೆ ಪೂರೈಸಬಹುದು ಮತ್ತು ಸರ್ಕಾರದ ಕಾರ್ಯಕ್ಷಮತೆಯನ್ನು ಹೇಗೆ ಮೇಲ್ಮುಖಗೊಳಿಸಬಹುದು ಎಂಬುದು ಚರ್ಚೆಯ ಮುಖ್ಯ ಅಂಶವಾಗಬಹುದು.
ಈ ಬ್ರೇಕ್ ಫಾಸ್ಟ್ ಭೇಟಿ ಎರಡು ಆಯಾಮವನ್ನ ನೀಡುತ್ತದೆ. ಮೊದಲನೆಯದಾಗಿ, ಇದು ಬಾಹ್ಯವಾಗಿ ಮತ್ತು ಆಂತರಿಕವಾಗಿ ಪಕ್ಷದ ಏಕತೆಯನ್ನು ಪ್ರದರ್ಶಿಸುವ ರಾಜಕೀಯ ಕ್ರಮ. ಎರಡನೆಯದಾಗಿ, ಇದು ನಿಜವಾದ ಆಡಳಿತಾತ್ಮಕ ಮತ್ತು ನೀತಿಗತ ಸಮಸ್ಯೆಗಳನ್ನು, ಮಾಧ್ಯಮದ ಗಮನವಿಲ್ಲದೆ, ಮುಕ್ತವಾಗಿ ಚರ್ಚಿಸಲು ಅನುವು ಮಾಡಿಕೊಡುವ ಅನೌಪಚಾರಿಕ ವೇದಿಕೆ. ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯರಿಗೆ ತಮ್ಮ ಸ್ವಂತ ನಿವಾಸದಲ್ಲಿ ಅತಿಥ್ಯ ನೀಡುವುದು, ನಾಯಕರ ನಡುವಿನ ವೈಯಕ್ತಿಕ ಸೌಹಾರ್ದ ಮತ್ತು ಗೌರವವನ್ನು ಸೂಚಿಸುತ್ತದೆ.





