ಕರ್ನಾಟಕದ ಜಾತಿ ಗಣತಿ ಸಮೀಕ್ಷೆಯ ಪ್ರಶ್ನಾವಳಿಗಳು ಗೊಂದಲ ಉಂಟುಮಾಡುತ್ತಿವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನಮಗೇ ತಾಳ್ಮೆ ಇಲ್ಲ, ಜನರಿಗೆ ಇರುತ್ತಾ? ಕುರಿ, ಕೋಳಿ, ಕೇಸ್, ಕಾಯಿಲೆಯಂತಹ ಪ್ರಶ್ನೆಗಳು ಜನರಿಗೆ ತೊಂದರೆ ಕೊಡುತ್ತವೆ” ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಸಮೀಕ್ಷೆಯನ್ನು ಸರಳಗೊಳಿಸಿ, ಜನಸಂಖ್ಯೆ, ಶೈಕ್ಷಣಿಕ ವಿವರ, ಆರ್ಥಿಕ-ಸಾಮಾಜಿಕ ಮಾಹಿತಿಗೆ ಸೀಮಿತಗೊಳಿಸಬೇಕು ಎಂದು ಹೇಳಿದ್ದಾರೆ.
ಜಾತಿ ಗಣತಿ ಸಮೀಕ್ಷೆಯ ಪ್ರಶ್ನಾವಳಿಯ ದೀರ್ಘತೆಯಿಂದಾಗಿ, ಒಂದು ಮನೆಯ ಸಮೀಕ್ಷೆಗೆ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಡಿಕೆ ಶಿವಕುಮಾರ್ ಅವರ ಮನೆಯಲ್ಲಿಯೇ ಸಮೀಕ್ಷೆಗೆ ಒಂದು ಗಂಟೆ ತೆಗೆದುಕೊಂಡಿತು ಎಂದು ಅವರು ತಿಳಿಸಿದ್ದಾರೆ. “ಹೀಗೆ ಸಮೀಕ್ಷೆ ಮಾಡ್ತಾ ಇದ್ರೆ ದಿನಕ್ಕೆ ಎಷ್ಟು ಜನರ ಸಮೀಕ್ಷೆ ಮಾಡ್ತೀರಾ? ಜನರು ಗಾಬರಿಯಾಗಿ ಮಾಹಿತಿ ಕೊಡದೇ “ನಡೀರಿ” ಅಂತಾರೆ ಎಂದು ಡಿಕೆಶಿ ಆಕ್ಷೇಪಿಸಿದ್ದಾರೆ. ಸಮೀಕ್ಷಾದಾರರಿಗೆ ದಿನಕ್ಕೆ 20 ಮನೆಗಳ ಟಾರ್ಗೆಟ್ ನೀಡಲಾಗಿದೆ ಎಂದು ಅಧಿಕಾರಿ ರಾಜೇಂದ್ರ ಚೋಳನ್ ತಿಳಿಸಿದ್ದಾರೆ, ಆದರೆ ಈ ಪ್ರಶ್ನಾವಳಿಯಿಂದ ಇದು ಕಷ್ಟ ಎಂದು ಡಿಕೆಶಿ ಹೇಳಿದ್ದಾರೆ.
ಕುರಿ, ಕೋಳಿ, ಟ್ರಾಕ್ಟರ್, ಕೇಸ್, ಕಾಯಿಲೆಯಂತಹ ಪ್ರಶ್ನೆಗಳು ಬೇಡ. ಆರ್ಥಿಕ-ಸಾಮಾಜಿಕ ಮಾಹಿತಿ ತಗೊಂಡ್ರೆ ಸಾಕು. ಸಿಂಪಲ್ ಆಗಿ ಸಮೀಕ್ಷೆ ಮಾಡಿ” ಎಂದು ಡಿಕೆಶಿ ತಾಕೀತು ಮಾಡಿದ್ದಾರೆ.ಈ ರೀತಿಯ ವಿವರವಾದ ಮತ್ತು ವೈಯಕ್ತಿಕ ಪ್ರಶ್ನೆಗಳು ಜನರಿಗೆ ಗಾಬರಿ ಉಂಟುಮಾಡುತ್ತವೆ ಎಂದಿದ್ದಾರೆ ಡಿಕೆಶಿ.
ಸಮೀಕ್ಷೇಯಲ್ಲಿ ಡಿಕೆ ಶಿವಕುಮಾರ್‌ಗೆ ಕೇಳಲಾದ ಪ್ರಶ್ನೆಗಳು ಯಾವು ಯಾವು..?
ವೈಯಕ್ತಿಕ ವಿವರ:
- ಶಿಕ್ಷಣ: M.com
- ಜಾತಿ: ಒಕ್ಕಲಿಗ
- ಉಪ ಜಾತಿ: ಗೌಡ ಒಕ್ಕಲಿಗ
- ವೈವಾಹಿಕ ಸ್ಥಿತಿ: ಉಷಾ ಶಿವಕುಮಾರ್
- ಮದುವೆ ವಯಸ್ಸು: 30
- ಸರ್ಕಾರದಲ್ಲಿ ಉದ್ಯೋಗ: ಏನೂ ಇಲ್ಲ
- ವಸತಿ ಶಾಲಾ ಸೌಲಭ್ಯ: ಇಲ್ಲ
- ಮೀಸಲಾತಿ ಸೌಲಭ್ಯ: ಇಲ್ಲ
- ಹಾಲಿ ಕೆಲಸ: ಪಬ್ಲಿಕ್ ಸರ್ವೆಂಟ್, ಸೆಲ್ಫ್ ಎಂಪ್ಲಾಯ್
- ಮೂಲ ಕೆಲಸ: ಕೃಷಿ ಸಂಗೋಪನೆ
- ಕುಲ ಕಸುಬಿನಿಂದ ಬಂದ ಕಾಯಿಲೆ: ಇಲ್ಲ
- ಆದಾಯ: 12 ಲಕ್ಷಕ್ಕೂ ಹೆಚ್ಚು
- ತೆರಿಗೆ ಪಾವತಿ: ಹೌದು
- ನಿಗಮ ಮಂಡಳಿ ಸದಸ್ಯತ್ವ: ಇದೆ
- ಜಮೀನು: 50 ಎಕರೆ, ಪಿತ್ರಾರ್ಜಿತ ಜಮೀನು
- ಲೋನ್: ಇಲ್ಲ , ಬ್ಯುಸಿನೆಸ್ ಲೋನ್
- ಜಾನುವಾರು: 29 ಹಸು
- ಕುರಿ: 10 , ಹೈನುಗಾರಿಕೆ , ರೇಷ್ಮೆ ಸಾಕಾಣಿಕೆ, ಕೋಳಿ ಸಾಕಾಣಿಕೆ
- ವಾಸದ ಮನೆ: 9
- ವಾಣಿಜ್ಯ ಕಟ್ಟಡ: 4
- ಫ್ಯಾಕ್ಟರಿ: 0
- ಫಾರ್ಮ್ ಹೌಸ್: 2
- ಖಾಲಿ ನಿವೇಷನ: 10
- ಚರಾಸ್ತಿ: ಮೋಟರ್ ಸೈಕಲ್, ಕಾರು, ಎಸಿ, ಫ್ರಿಡ್ಜ್, ಟಿವಿ, ಲ್ಯಾಂಡ್ ಲೈನ್- 2
- ಹನಿನೀರಾವರಿ: ಇದೆ
- ಟ್ರಾಕ್ಟರ್: 3
- ವಜ್ರಾಭರಣ: ‘ಇದು ಹೇಳಲು ಆಗಲ್ಲ‘
- ವಾಸದ ಮನೆ: ಪಕ್ಕಾ ಮನೆ
- ಅಡುಗೆ ಇಂಧನ: ಎಲ್ ಪಿಜಿ
- ಮನೆ: ಹೆಂಡತಿ ಮನೆ
- ಕುಟುಂಬದಲ್ಲಿ ಅನಿವಾಸಿ ಭಾರತೀಯರು ಇದ್ದಾರಾ: ಇಲ್ಲ
- ವ್ಯಾಜ್ಯ ಪ್ರಕರಣ: ಇದೆ