ಜಾತಿ ಗಣತಿಗೆ ಬಂದ ಅಧಿಕಾರಿಗಳ ಪ್ರಶ್ನೆಗಳಿಗೆ ಡಿಕೆಶಿ ತಕರಾರು..!

ಡಿಸಿಎಂ ಮನೆಯಿಂದಲೇ ಸಮೀಕ್ಷೇ ಆರಂಭಿಸಿದ ಗಣತಿದಾರರು

Web (13)

ಕರ್ನಾಟಕದ ಜಾತಿ ಗಣತಿ ಸಮೀಕ್ಷೆಯ ಪ್ರಶ್ನಾವಳಿಗಳು ಗೊಂದಲ ಉಂಟುಮಾಡುತ್ತಿವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನಮಗೇ ತಾಳ್ಮೆ ಇಲ್ಲ, ಜನರಿಗೆ ಇರುತ್ತಾ? ಕುರಿ, ಕೋಳಿ, ಕೇಸ್, ಕಾಯಿಲೆಯಂತಹ ಪ್ರಶ್ನೆಗಳು ಜನರಿಗೆ ತೊಂದರೆ ಕೊಡುತ್ತವೆ” ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಸಮೀಕ್ಷೆಯನ್ನು ಸರಳಗೊಳಿಸಿ, ಜನಸಂಖ್ಯೆ, ಶೈಕ್ಷಣಿಕ ವಿವರ, ಆರ್ಥಿಕ-ಸಾಮಾಜಿಕ ಮಾಹಿತಿಗೆ ಸೀಮಿತಗೊಳಿಸಬೇಕು ಎಂದು ಹೇಳಿದ್ದಾರೆ.

ಜಾತಿ ಗಣತಿ ಸಮೀಕ್ಷೆಯ ಪ್ರಶ್ನಾವಳಿಯ ದೀರ್ಘತೆಯಿಂದಾಗಿ, ಒಂದು ಮನೆಯ ಸಮೀಕ್ಷೆಗೆ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಡಿಕೆ ಶಿವಕುಮಾರ್‌ ಅವರ ಮನೆಯಲ್ಲಿಯೇ ಸಮೀಕ್ಷೆಗೆ ಒಂದು ಗಂಟೆ ತೆಗೆದುಕೊಂಡಿತು ಎಂದು ಅವರು ತಿಳಿಸಿದ್ದಾರೆ. “ಹೀಗೆ ಸಮೀಕ್ಷೆ ಮಾಡ್ತಾ ಇದ್ರೆ ದಿನಕ್ಕೆ ಎಷ್ಟು ಜನರ ಸಮೀಕ್ಷೆ ಮಾಡ್ತೀರಾ? ಜನರು ಗಾಬರಿಯಾಗಿ ಮಾಹಿತಿ ಕೊಡದೇ “ನಡೀರಿ” ಅಂತಾರೆ ಎಂದು ಡಿಕೆಶಿ ಆಕ್ಷೇಪಿಸಿದ್ದಾರೆ. ಸಮೀಕ್ಷಾದಾರರಿಗೆ ದಿನಕ್ಕೆ 20 ಮನೆಗಳ ಟಾರ್ಗೆಟ್ ನೀಡಲಾಗಿದೆ ಎಂದು ಅಧಿಕಾರಿ ರಾಜೇಂದ್ರ ಚೋಳನ್ ತಿಳಿಸಿದ್ದಾರೆ, ಆದರೆ ಈ ಪ್ರಶ್ನಾವಳಿಯಿಂದ ಇದು ಕಷ್ಟ ಎಂದು ಡಿಕೆಶಿ ಹೇಳಿದ್ದಾರೆ.

ಕುರಿ, ಕೋಳಿ, ಟ್ರಾಕ್ಟರ್, ಕೇಸ್, ಕಾಯಿಲೆಯಂತಹ ಪ್ರಶ್ನೆಗಳು ಬೇಡ. ಆರ್ಥಿಕ-ಸಾಮಾಜಿಕ ಮಾಹಿತಿ ತಗೊಂಡ್ರೆ ಸಾಕು. ಸಿಂಪಲ್ ಆಗಿ ಸಮೀಕ್ಷೆ ಮಾಡಿ” ಎಂದು ಡಿಕೆಶಿ ತಾಕೀತು ಮಾಡಿದ್ದಾರೆ.ಈ ರೀತಿಯ ವಿವರವಾದ ಮತ್ತು ವೈಯಕ್ತಿಕ ಪ್ರಶ್ನೆಗಳು ಜನರಿಗೆ ಗಾಬರಿ ಉಂಟುಮಾಡುತ್ತವೆ ಎಂದಿದ್ದಾರೆ ಡಿಕೆಶಿ.

ಸಮೀಕ್ಷೇಯಲ್ಲಿ ಡಿಕೆ ಶಿವಕುಮಾರ್‌ಗೆ ಕೇಳಲಾದ ಪ್ರಶ್ನೆಗಳು ಯಾವು ಯಾವು..?
ವೈಯಕ್ತಿಕ ವಿವರ:
 

 

Exit mobile version