ಬೆಂಗಳೂರು, ಫೆ.19: ಬೆಂಗಳೂರಿನ ಉತ್ತರ ಭಾಗದ ಹಲವು ಪ್ರದೇಶಗಳಲ್ಲಿ ಫೆಬ್ರವರಿ 20 ಮತ್ತು 21ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು BESCOM ಪ್ರಕಟಣೆ ಹೊರಡಿಸಿದೆ. 66/11 ಕೆವಿ ಯಲಹಂಕ ಸಬ್ಸ್ಟೇಷನ್ನಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪವರ್ ಕಟ್ ಇರಲಿದೆ.
KPTCL ವತಿಯಿಂದ ಯಲಹಂಕ ಸಬ್ಸ್ಟೇಷನ್ನ ಟ್ರಾನ್ಸ್ಫಾರ್ಮರ್–2 ಬೇಗಳಲ್ಲಿ 66 ಕೆವಿ ಐಸೊಲೇಟರ್ ಅಳವಡಿಸುವ ಹಾಗೂ ಅಸ್ತಿತ್ವದಲ್ಲಿರುವ 66 ಕೆವಿ ಲೈನ್ ಮತ್ತು ಟ್ರಾನ್ಸ್ಫಾರ್ಮರ್–2 ಬೇಗಳಲ್ಲಿ ಹೊಸ ಐಸೊಲೇಟರ್ ನಿರ್ಮಾಣ ಕಾರ್ಯ ನಡೆಯಲಿದೆ. ಈ ತಾಂತ್ರಿಕ ಕಾಮಗಾರಿಯ ನಿಮಿತ್ತ ಹೆಬ್ಬಾಳ ವಿಭಾಗದ ಸಿ-7 ಉಪವಿಭಾಗ ವ್ಯಾಪ್ತಿಯಲ್ಲಿ ಹಲವು ಪ್ರದೇಶಗಳಿಗೆ ವಿದ್ಯುತ್ ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.
ವಿದ್ಯುತ್ ವ್ಯತ್ಯಯ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಇರಲಿದ್ದು, ಕಾರ್ಯದ ಪ್ರಗತಿಗೆ ಅನುಗುಣವಾಗಿ ವಿದ್ಯುತ್ ಕಡಿತವಾಗುವ ಸಾಧ್ಯತೆ ಇದೆ. ಅಗತ್ಯ ತಾಂತ್ರಿಕ ಕಾರ್ಯಗಳನ್ನು ಸುರಕ್ಷಿತವಾಗಿ ಪೂರ್ಣಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು
ಯಲಹಂಕ ಮತ್ತು ಸುತ್ತಮುತ್ತಲಿನ ಹಲವಾರು ಬಡಾವಣೆಗಳು ಪವರ್ ಕಟ್ ಆಗಲಿದೆ. ಪ್ರಮುಖವಾಗಿ ಕೆಎಂಎಫ್ ಸುತ್ತಮುತ್ತ, ಯಲಹಂಕ ನ್ಯೂ ಟೌನ್ನ 208, 407 ಹಾಗೂ ‘ಬಿ’ ಸೆಕ್ಟರ್ ಪ್ರದೇಶಗಳು, ಸಿಬಿ ಸಾಂದ್ರ, ಅಲ್ಲಾಳಸಂದ್ರ, ಶಾರದನಗರ, ಜನಪ್ರಿಯ, ಅನ್ರಿಯಾ, ಮಾರುತಿ ನಗರ, ಕೋಗಿಲು ಹಾಗೂ ಬಿಬಿ ರಸ್ತೆ ಯಲಹಂಕ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಸಂಭವಿಸಲಿದೆ.
ಇದೇ ರೀತಿ ಬಾಗಲೂರು ಕ್ರಾಸ್, ವೆಂಕಟಾಲ, ನಿಟ್ಟೆ ಕಾಲೇಜು ಸುತ್ತಮುತ್ತ, ಬಿಎಸ್ಎಫ್, ಐಎಎಫ್ ಪ್ರದೇಶಗಳು, ಕಾಗೆನ್ಅಡ್ಯಾನ್ ಕಾಲೇಜು, ರಾಯಣ್ಣನ ಶಾಲೆ, ಪಾಲನಹಳ್ಳಿ ಹಾಗೂ ದ್ವಾರಖಾ ನಗರ ಪ್ರದೇಶಗಳೂ ಪವರ್ ಇರಲ್ಲ..
ತಿರುಮಲ ನಗರ, ಅತ್ತೂರು ಬಡಾವಣೆಯ 1ರಿಂದ 10ನೇ ಅಡ್ಡರಸ್ತೆಗಳವರೆಗೆ, ಎಸ್ಕಾರ್ಟ್ಸ್ ಬಡಾವಣೆ, ದೊಡ್ಡಬೆಟ್ಟಹಳ್ಳಿ, ಟಿಪ್ಪು ವೃತ್ತ, ಚಿಕ್ಕಬೆಟ್ಟಹಳ್ಳಿ, ಕಾವೇರಿ ಬಡಾವಣೆ, ಗಿರಿಧಾಮ ನಗರ, ಎಎಂಎಸ್ ಬಡಾವಣೆ, ಡಿಫೆನ್ಸ್ ಬಡಾವಣೆ ಹಾಗೂ ಜೆಲ್ಲಿ ಯಂತ್ರ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಅದರ ಜೊತೆಗೆ ಎಂ.ಎಸ್. ಪಾಳ್ಯ, ಶಿಕ್ಷಕರ ಬಡಾವಣೆ, ಬೆಲ್ 6ನೇ ಬ್ಲಾಕ್, ಎಚ್ಎಂಟಿ 3ನೇ, 4ನೇ ಮತ್ತು 6ನೇ ಬ್ಲಾಕ್ ಪ್ರದೇಶಗಳಲ್ಲಿಯೂ ವಿದ್ಯುತ್ ಕಡಿತವಾಗಲಿದೆ.
ಸಾರ್ವಜನಿಕರಿಗೆ ಸೂಚನೆ
ಬೆಸ್ಕಾಂ ಅಧಿಕಾರಿಗಳು ನಾಗರಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ವಿಶೇಷವಾಗಿ ವ್ಯಾಪಾರಸ್ಥರು, ಐಟಿ ಕಂಪನಿಗಳು, ಸಣ್ಣ ಕೈಗಾರಿಕೆಗಳು ಮತ್ತು ಮನೆಮಂದಿ ತಮ್ಮ ದಿನನಿತ್ಯದ ಕಾರ್ಯಗಳನ್ನು ಯೋಜನೆಗೊಳಿಸಿ ಮುಂದುವರಿಸಲು ಸಲಹೆ ನೀಡಲಾಗಿದೆ. ವಿದ್ಯುತ್ ಕಡಿತ ಅವಧಿಯಲ್ಲಿ ಇನ್ವರ್ಟರ್, ಜನರೇಟರ್ ವ್ಯವಸ್ಥೆ ಮಾಡಿಕೊಂಡು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ವಿದ್ಯುತ್ ಪೂರೈಕೆ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಬೆಸ್ಕಾಂ ತಿಳಿಸಿದೆ.





