ದೇಶದಾದ್ಯಂತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಕರ್ನಾಟಕದಲ್ಲಿ ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಅಧಿಕಾಗಿದೆ. ಇತ್ತೀಚೆಗೆ ಇಂತಹ ಅನೇಕ ಘಟನೆಗಳು ವರದಿಯಾಗುತ್ತಿದ್ದು, ಜನ ಸಾಮಾನ್ಯರಲ್ಲಿ ಇದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಇಂದು ಬೆಂಗಳೂರಿನಲ್ಲಿ 6 ಬೀದಿ ನಾಯಿಗಳ ಗೊಂಪೊಂದು ಮಗುವಿನ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ. ಬೆಂಗಳೂರಿನ ಸಹಕಾರನಗರದ ಒಳಾಂಗಣ ಕ್ರೀಡಾಂಗಣ ಬಳಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಗುವಿನ ಮೇಲೆ ಬರೋಬ್ಬರಿ 6 ಬೀದಿ ನಾಯಿಗಳ ಹಿಂಡು ಏಕಾಏಕಿ ಭೀಕರ ಮಾರಣಾಂತಿಕ ದಾಳಿ ನಡೆಸಿದೆ. ಅದೃಷ್ಟವಶಾತ್ ಮಗು ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಮಗುವಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿಲಾಗಿದೆ.
ಬೆಂಗಳೂರಿನ ಅನೇಕ ಕಡೆಗಳಲ್ಲಿ ಬೀದಿ ನಾಯಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ನಾಯಿಗಳ ಉಪಟಳದಿಂದ ಜನ ಸಾಮಾನ್ಯರಿಗೆ ರಸ್ತೆ ಬದಿಗಳಲ್ಲಿ ಓಡಾಡಲು ಭಯದ ವಾತಾವರಣ ನಿರ್ಮಾಣವಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸಂತಾನಶಕ್ತಿ ಹರಣ ಮತ್ತು ಲಸಿಕೆ ನೀಡುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಬೀದಿ ನಾಯಿಗಳ ಹಾವಳಿ ಮಾತ್ರ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ.
ಬೀದಿ ನಾಯಿಗಳ ದಾಳಿಯಾದಾಗ ತುರ್ತು ಕ್ರಮ:
ನಾಯಿ ಕಡಿತದಿಂದ ಗಾಯಗೊಂಡ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ನಾಯಿ ಕಡಿತದ ಚುಚ್ಚುಮದ್ದು ಹಾಗೂ ಅಗತ್ಯ ಚಿಕಿತ್ಸೆ ಪಡೆಯುವುದು ಕಡ್ಡಾಯ.
ಸಹಾಯವಾಣಿ ಸಂಖ್ಯೆ:
1533 ಅಥವಾ BBMP ಅಧಿಕೃತ ಸಾರ್ವಜನಿಕ ಕುಂದುಕೊರತೆ ಆಪ್ ಬಳಸಬಹುದು.
ಸಲಹೆಗಳು ಮತ್ತು ದೂರು ನೀಡುವ ವಿಧಾನ:





