ಮಳೆಗಾಲ ಆರಂಭವಾಗುತಿದಂತೆ ಸಿಲಿಕಾನ್ ಸಿಟಿ ನದಿಯಾಗುತ್ತಿದೆ. ಇದನ್ನು ಸರಿಪಡಿಸುವ ಬದಲು ಬಿಬಿಎಂಪಿ ಇತಿಹಾಸ ಸೃಷ್ಟಿಸಲು ಮುಂದಾಗಿದೆ. ವಾಟರ್ ಬೆಂಗಳೂರಿಗೆ ಬೋಟ್ ತರೋ ಪ್ಲಾನ್ ನಡೆಯುತ್ತಿದ್ದು ಪಾಲಿಕೆ ಮತ್ತೆ ಛೀಮಾರಿಗೆ ಗುರಿಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಮಳೆ ಬಂದ್ರೆ ಸಾಕು ರಸ್ತೆಗಳು ನದಿಯಾಗುತ್ತೆ, ಬೀದಿ ಬೀದಿಗಳು ಮನೆಗಳು ನೀರು ತುಂಬಿ ಕೆರೆಯಾಗುತ್ತವೆ. ಮಳೆ ಆಂದ್ರೆ ಬೆಂಗಳೂರಿಗರಿಗೆ ನಡುಕ ಶುರುವಾಗಿದೆ. ಮಳೆ ಬಂದ್ರೆ ಏನೂ ಆಗುತ್ತೋ ಎನೋ ಅನ್ನೋ ಭಯ ಎದೆ ಝಲ್ ಅನ್ನಿಸುತ್ತಿದೆ. ಮಳೆ ನೀರು ನಿಂತೂ ಜನ ಹೊರಗಡೆ ಬರೋದಕ್ಕೆ ಕಷ್ಟ ಅಗ್ತಾ ಇದೆ. ಇದಕ್ಕೆ ಶಾಶ್ವತ ಪರಿಹಾರ ನೀಡೋ ಬದಲು ಪಾಲಿಕೆ ಹೊಸ ಪ್ಲಾನ್ ರೂಪಿಸಿಕೊಂಡಿದೆ.
ಹೌದು ಕಳೆದ ಎರಡು ವಾರದ ಹಿಂದೆ ಬೆಂಗಳೂರಿನಲ್ಲಿ ಸುರಿದ ಮಳೆಗೆ ಬೆಂಗಳೂರು ಅಕ್ಷರ ಸಹ ನಡುಗಿಹೋಗಿತ್ತು. ಅದರಲ್ಲೂ ಸಾಯಿ ಲೇಔಟ್ ಸಂಪೂರ್ಣ ಜಲಾವೃತಗೊಂಡು ಜನ ಹೊರಬರಲು ಪರದಾಟ ನಡೆಸಿದ್ರೂ . ಈ ಸಂಧರ್ಭದಲ್ಲಿ ಜನರನ್ನು ಹೊರತರಲು ಅಗ್ನಿಶಾಮಕ ದಳ ಸಿಬ್ಬಂದಿ ಬೋಟ್ ಬಳಕೆ ಮಾಡಿದ್ರು. ಇದೀಗಾ ಅದೆ ಪ್ಲಾನ್ ಒಂದನ್ನು ಪಾಲಿಕೆ ಮಾಡಿಕೊಂಡಿದೆ.ಮಳೆ ಬಂದ್ರೆ ಜನರನ್ನು ಹೊರತರಲು 7 ಬೋಟ್ ಖರೀದಿಗೆ ಟೆಂಡರ್ ಕರೆದಿದೆ. ಮಳೆ ಬಂದಾಗ ರಸ್ತೆ ತುಂಬ ನೀರು ನಿಂತ್ತಿದ್ರೆ ಹೊರಗೆ ಬರಲು ಪಾಲಿಕೆಯಿಂದ ಹೊಸ ಕೊಡುಗೆ ನೀಡಲು ಸಿದ್ದವಾಗಿದೆ ವಾಟರ್ ಬೆಂಗಳೂರಿಗೆ ಬೋಟರ್ ಯೋಜನೆ ತರಲು ಪ್ಲಾನ್ ಮಾಡಿಕೊಂಡಿದ್ದು ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಇದು ಸಾರ್ವಜನಿಕ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹೊಸ ಪ್ಲಾನ್ ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ. ರಾಜಕಾಲುವೆ ಒತ್ತುವರಿ ತೆರವೂ ಮಾಡದೇ ನೀರು ತುಂಬಿಕೊಳ್ಳುತಿದೆ. ಇದರ ಜೊತೆಗೆ ರಾಜಕಾಲುವೆಗಳಲ್ಲಿ ಹೊಳೆತ್ತುವ ಕೆಲಸ ಕೂಡ ಮಾಡದೇ ಪಾಲಿಕೆ ಸೈಲೆಂಟ್ ಆಗಿದೆ. ಇಷ್ಟೆಲ್ಲಾ ಸಮಸ್ಯೆ ಇದ್ರೂ ಕೂಡ ಪಾಲಿಕೆ ಬೋಟ್ ಖರೀದಿ ಮಾಡಿ ದುಂದು ವೆಚ್ಚ ಮಾಡುತಿರೋದು ಜನರ ಅಕ್ರೋಶಕ್ಕೆ ಕಾರಣವಾಗಿದೆ. ಬೇಕಾಬಿಟ್ಟಿ ತೆರಿಗೆ ಹಣ ಹಾಳು ಮಾಡಿ ಜನರನ್ನು ಸಾಯುವ ರೀತಿ ಮಾಡುತಿದ್ದಾರೆ.ಆಗೋದಾದ್ರೆ ಶಾಶ್ವತ ಪರಿಹಾರ ನೀಡಿ ಬೋಟ್ ಖರೀದಿ ಮಾಡಿದ ಮೇಲ ಮಳೆ ಬರ್ಲಿಲ್ಲಾ ಅಂದ್ರೆ ಎನ್ ಮಾಡ್ತಿರಾ ಅಂತಾ ಜನ ಅಕ್ರೋಶ ಹೊರಹಾಕುತಿದ್ದಾರೆ.
ಓಟ್ನಲ್ಲಿ ಮುಂಗಾರು ಮಳೆಗೆ ನಾವು ಸಿದ್ದರಾಗಿದ್ದೇವೆ ಅಂತಾ ಬಡಾಯಿ ಕೊಚ್ಚಿಕೊಳ್ಳುವ ಪಾಲಿಕೆ ಪ್ಲಾಪ್ ಪ್ಲಾನ್ ಮಾಡುತಿರೋದು ಜನರ ಕೆಂಗಣ್ಣಿಗೆ ಗುರಿಯಾಗಿದ್ರೆ.ಪಾಲಿಕೆ ಮಾತ್ರ ಬೋಟ್ ಖರೀದಿ ಮಾಡೋದು ಶತಸಿದ್ದ ಅನ್ನೋ ಹಾಗೆ ಮಾಡುತಿರೊದಂತು ಸತ್ಯ.
ಚರಣ್ ಮೂಡಬಿದಿರೆ,ಮೆಟ್ರೋ ಬ್ಯೂರೋ ಗ್ಯಾರಂಟಿ ನ್ಯೂಸ್ ಬೆಂಗಳೂರು