ಬೆಂಗಳೂರು, ನವೆಂಬರ್ 16: ಸಾಕು ನಾಯಿಯನ್ನು ವಾಕಿಂಗ್‌ಗೆ ಕರೆದೊಯ್ಯುತ್ತಿದ್ದ ಯುವತಿಯೊಬ್ಬರಿಗೆ ನಾಯಿ ಮುದ್ದಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ, ಮೊಬೈಲ್ ಕಸಿದುಕೊಂಡು ಪರಾರಿಯಾದ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಉಪಕಾರ್ ಲೇಔಟ್ನಲ್ಲಿ ನಡೆದಿದೆ. ನವೆಂಬರ್ 7 ರ ರಾತ್ರಿ ಸಂಭವಿಸಿದ ಈ ದುಸ್ಸಾಹಸ ಜನರಲ್ಲಿ ಆತಂಕ ಮೂಡಿಸಿದದೆ.
ನವೆಂಬರ್ 7 ರಾತ್ರಿ ಸುಮಾರು 8:30 ರ ಸಮಯದಲ್ಲಿ, ಸಂತ್ರಸ್ತೆ ಯುವತಿ (ವಯಸ್ಸು ಸುಮಾರು 28) ತನ್ನ ಪೆಟ್ ಡಾಗ್ನ್ನು ವಾಕಿಂಗ್‌ಗೆಂದು ಉಪಕಾರ್ ಲೇಔಟ್‌ನ ಮುಖ್ಯ ರಸ್ತೆಗೆ ಕರೆತಂದಿದ್ದಳು. ಈ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ (ವಯಸ್ಸು ಸುಮಾರು 30-35) ಅವಳ ಮುಂದೆ ಬಂದು ನಿಂತ. ನಿಮ್ಮ ನಾಯಿಯನ್ನು ಮುಟ್ಟಬಹುದೇ ? ಬಹಳ ಕ್ಯೂಟ್ ಇದೆ ಎಂದು ಹೇಳಿ ಆಕೆಯನ್ನ ಮಾತನಾಡಿಸಲು ಪ್ರಯತ್ನಿಸಿದ್ದಾನೆ.
ಸಾಮಾನ್ಯವಾಗಿ ನಾಯಿ ಪ್ರಿಯರು ಇಂತಹ ಕೋರಿಕೆ ಮಾಡುವುದು ಸಾಧಾರಣವಾದ್ದರಿಂದ, ಯುವತಿ ಒಪ್ಪಿಗೆ ನೀಡಿದಳು. ಆದರೆ ವ್ಯಕ್ತಿ ನಾಯಿಯನ್ನು ಮುದ್ದಾಡುತ್ತಿರುವ ನೆಪದಲ್ಲಿ ಏಕಾಏಕಿ ಯುವತಿಯ ದೇಹದ ಮುಟ್ಟಿದ್ದಾನೆ. ಹೆದರಿದ ಯುವತಿ ತಕ್ಷಣ ಆತನನ್ನು ತಳ್ಳಿ ಏನು ಮಾಡ್ತೀಯಾ ? ಎಂದು ಕೂಗಿದಳು.ಆದರೆ ಆರೋಪಿ ಸುಮ್ಮನಾಗದೇ, ಮತ್ತೊಮ್ಮೆ ಕಿರುಕುಳ ನೀಡಲು ಮುಂದಾದ. ಈ ಬಾರಿ ಯುವತಿ ಆತನ ಕಪಾಳಕ್ಕೆ ಹೊಡೆದಿದ್ದಾಳೆ. ಈ ಎಲ್ಲಾ ಗಲಾಟೆಯ ನಡುವೆ ಮಹಿಳೆಯ ಫೋನ್ ರಸ್ತೆಗೆ ಬಿದ್ದಿದ್ದು, ಮಹಿಳೆ ಜೋರಾಗಿ ಕಿರುಚಿದ್ದಾರೆ. ಈ ಸಂದರ್ಭದಲ್ಲಿ ಕೆಳಗೆ ಬಿದ್ದ, ಸುಮಾರು 25,000 ರೂ. ಬೆಲೆಯ ಮೊಬೈಲ್ ತೆಗೆದುಕೊಂಡ ವ್ಯಕ್ತಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸಾರ್ವಜನಿಕರು ಸೇರುವಷ್ಟರಲ್ಲಿ ಕಾಮುಕ ಪರಾರಿಯಾಗಿದ್ದು, ಲೈಂಗಿಕ ಕಿರುಕುಳ ನೀಡಿದ ಹಿನ್ನಲೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಯುವತಿ ಜೋರಾಗಿ ಕಿರುಚಿದ್ದರಿಂದ ಸುತ್ತಮುತ್ತಲಿನ ನಿವಾಸಿಗಳು ಓಡಿಬಂದರು. ಆದರೆ ಆ ಸಮಯಕ್ಕಾಗಲೇ ಆರೋಪಿ ಕಣ್ಮರೆಯಾಗಿದ್ದ. ಸಾರ್ವಜನಿಕರು ಯುವತಿಯನ್ನು ಸಂತೈಸಿ, ತಕ್ಷಣ ಜ್ಞಾನಭಾರತಿ ಪೊಲೀಸ್ ಠಾಣೆಗೆ ಕರೆದೊಯ್ದರು.ಯುವತಿಯ ದೂರಿನ ಆಧಾರದಲ್ಲಿ ಜ್ಞಾನಭಾರತಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಕೇಸ್ IPC ಸೆಕ್ಷನ್ 354 (ಮಹಿಳೆಯ ವಿನಯಕ್ಕೆ ಧಕ್ಕೆ), 354A (ಲೈಂಗಿಕ ಕಿರುಕುಳ), 379 (ಕಳ್ಳತನ) ಅಡಿಯಲ್ಲಿ ನೋಂದಾಯಿಸಲಾಗಿದೆ.
ಪೊಲೀಸರು ಸಿಸಿಟಿವಿ ಫೂಟೇಜ್ ಪರಿಶೀಲಿಸುತ್ತಿದ್ದು, ಲೇಔಟ್‌ನಲ್ಲಿ 3-4 ಕ್ಯಾಮೆರಾಗಳು ಘಟನೆಯ ಭಾಗವನ್ನು ರೆಕಾರ್ಡ್ ಮಾಡಿರುವ ಸಾಧ್ಯತೆ ಇದೆ. ಆರೋಪಿಯ ಸ್ಕೆಚ್ ತಯಾರಿಸಲಾಗುತ್ತಿದ್ದು, ಸ್ಥಳೀಯರ ಸಹಕಾರಕ್ಕೆ ಮನವಿ ಮಾಡಲಾಗಿದೆ. “ಆರೋಪಿಯನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ. ಮಹಿಳಾ ಸುರಕ್ಷತೆಗೆ ಆದ್ಯತೆ” ಎಂದು ಜ್ಞಾನಭಾರತಿ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.





