ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡುವುದು ದೊಡ್ಡ ಸವಾಲಾಗಿದೆ. ದುಬಾರಿ ಮಾತ್ರೆಗಳು, ಆಸ್ಪತ್ರೆಗಳು ಮತ್ತು ರಾಸಾಯನಿಕ ಔಷಧಗಳಿಗೆ ಹೋಗುವ ಬದಲು, ಮನೆಯಲ್ಲೇ ಲಭ್ಯವಿರುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಆರೋಗ್ಯವನ್ನು ಸುಧಾರಿಸಬಹುದು. ಅಂತಹ ಅದ್ಭುತ ಮಿಶ್ರಣವೇ ಬೆಳ್ಳುಳ್ಳಿ ಮತ್ತು ಜೇನುತುಪ್ಪ.! ಈ ಎರಡನ್ನು ಸರಿಯಾದ ರೀತಿಯಲ್ಲಿ ಮಿಶ್ರಣ ಮಾಡಿ ಸೇವಿಸಿದರೆ, ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ.
ರೋಗನಿರೋಧಕ ಶಕ್ತಿ ಬಲಪಡಿಸುವ ಮಾಂತ್ರಿಕ ಮಿಶ್ರಣ
ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಂಯುಕ್ತವಿದೆ, ಇದು ಶಕ್ತಿಶಾಲಿ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ. ಜೇನುತುಪ್ಪದಲ್ಲಿ ನೈಸರ್ಗಿಕ ಆಂಟಿಆಕ್ಸಿಡೆಂಟ್‌ಗಳು ಮತ್ತು ಎಂಜೈಮ್‌ಗಳು ಇರುತ್ತವೆ. ಈ ಎರಡನ್ನು ಒಟ್ಟಿಗೆ ಸೇವಿಸಿದರೆ, ದೇಹದ ಇಮ್ಯೂನ್ ಸಿಸ್ಟಮ್ ಬಲಗೊಳ್ಳುತ್ತದೆ.
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1-2 ಬೆಳ್ಳುಳ್ಳಿ ಎಸಳನ್ನು ಚೂರು ಮಾಡಿ, 1 ಚಮಚ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ತಿನ್ನಿ. ಇದರಿಂದ ಶೀತ, ಕೆಮ್ಮು, ಗಂಟಲು ನೋವು, ಜ್ವರದಂತಹ ಸಮಸ್ಯೆಗಳು ದೂರಾಗುತ್ತವೆ. ಅಧ್ಯಯನಗಳ ಪ್ರಕಾರ, ಬೆಳ್ಳುಳ್ಳಿ ದೇಹದಲ್ಲಿ ವೈಟ್ ಬ್ಲಡ್ ಸೆಲ್‌ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
ಜೀರ್ಣಕ್ರಿಯೆ ಸುಧಾರಣೆ ಮತ್ತು ಹೊಟ್ಟೆ ಸಮಸ್ಯೆಗಳ ನಿವಾರಣೆ
ಹೊಟ್ಟೆಯ ಸಮಸ್ಯೆಗಳು ಅಜೀರ್ಣ, ಅಸಿಡಿಟಿ, ಗ್ಯಾಸ್, ಮಲಬದ್ಧತೆ ಇವೆಲ್ಲವನ್ನೂ ಈ ಮಿಶ್ರಣ ನಿಯಂತ್ರಿಸುತ್ತದೆ. ಜೇನುತುಪ್ಪದಲ್ಲಿ ಪ್ರೊಬಯಾಟಿಕ್‌ಗಳು ಇದ್ದು, ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಬೆಳೆಸುತ್ತವೆ. ಇದರಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಪೋಷಕಾಂಶಗಳು ಸರಿಯಾಗಿ ಹೀರಕೊಳ್ಳುತ್ತದೆ. ರಾತ್ರಿ ಮಲಗುವ ಮುನ್ನ ಈ ಮಿಶ್ರಣವನ್ನು ತೆಗೆದುಕೊಂಡರೆ, ಮರುದಿನ ಬೆಳಿಗ್ಗೆ ಹೊಟ್ಟೆ ಸ್ವಚ್ಛವಾಗಿರುತ್ತದೆ.
ಉಸಿರಾಟದ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ
ಕೆಮ್ಮು, ಸೈನಸೈಟಿಸ್, ಅಲರ್ಜಿ ಇವುಗಳಿಗೆ ಈ ಮಿಶ್ರಣ ಅದ್ಭುತ ಕಫ ನಿವಾರಕವಾಗಿ ಕೆಲಸ ಮಾಡುತ್ತದೆ. ಬೆಳ್ಳುಳ್ಳಿಯ ಸಲ್ಫರ್ ಸಂಯುಕ್ತಗಳು ಕಫವನ್ನು ಕರಗಿಸುತ್ತವೆ. ಜೇನುತುಪ್ಪ ಗಂಟಲನ್ನು ಸೋಥಿಂಗ್ ಮಾಡುತ್ತದೆ. ಪ್ರತಿದಿನ ಸೇವಿಸಿದರೆ, ಶ್ವಾಸಕೋಶದ ಆರೋಗ್ಯ ಉತ್ತಮವಾಗಿರುತ್ತದೆ. ಒಂದು ಅಧ್ಯಯನದಲ್ಲಿ, ಬೆಳ್ಳುಳ್ಳಿ ಸೇವನೆಯಿಂದ ಶೀತದ ಅವಧಿ 60% ಕಡಿಮೆಯಾಗಿದೆ ಎಂದು ಕಂಡುಬಂದಿದೆ.
ಇತರ ಪ್ರಯೋಜನಗಳು
ಈ ಮಿಶ್ರಣ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಹೃದಯಕ್ಕೆ ರಕ್ಷಣೆ ನೀಡುತ್ತದೆ. ಬೆಳ್ಳುಳ್ಳಿ ರಕ್ತವನ್ನು ಶುದ್ಧೀಕರಿಸುತ್ತದೆ.. ಇದು ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಮೊಡವೆ, ಸೋಂಕುಗಳನ್ನು ತಡೆಯುತ್ತದೆ. ತೂಕ ನಿಯಂತ್ರಣಕ್ಕೂ ಸಹಾಯಕ, ಏಕೆಂದರೆ ಇದು ಮೆಟಾಬಾಲಿಸಂ ಹೆಚ್ಚಿಸುತ್ತದೆ.
ಸೇವನೆಯ ಸರಿಯಾದ ವಿಧಾನ ಮತ್ತು ಎಚ್ಚರಿಕೆ
ತಯಾರಿ, 10-15 ಬೆಳ್ಳುಳ್ಳಿ ಎಸಳನ್ನು ಚೂರು ಮಾಡಿ, 1 ಕಪ್ ಶುದ್ಧ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ. 7 ದಿನಗಳ ಕಾಲ ಇರಿಸಿ. ಪ್ರತಿದಿನ 1 ಚಮಚ ಸೇವಿಸಿ. ಗರ್ಭಿಣಿಯರು, ಮಕ್ಕಳು ವೈದ್ಯರ ಸಲಹೆ ಪಡೆಯಿರಿ. ಅತಿಯಾದ ಸೇವನೆಯಿಂದ ಹೊಟ್ಟೆ ಉರಿ ಉಂಟಾಗಬಹುದು.





