ಮೀನನ್ನು ತಯಾರಿಸುವಾಗ ನಾವು ಸಾಮಾನ್ಯವಾಗಿ ಅದರ ಸಿಪ್ಪೆ, ಕಣ್ಣು, ಮೂಳೆ ಮುಂತಾದ ಹಲವಾರು ಭಾಗಗಳನ್ನು ಅಗತ್ಯವಿಲ್ಲದೆ ಎಸೆಯುತ್ತೇವೆ. ಆದರೆ, ಈ ಭಾಗಗಳು ಅತ್ಯಂತ ಪೌಷ್ಟಿಕವಾಗಿದ್ದು, ಆರೋಗ್ಯಕ್ಕೆ ಬಹಳ ಉಪಯುಕ್ತ! ಈ ಸ್ಟೋರಿಯಲ್ಲಿ ಮೀನಿನ ಯಾವ ಯಾವ ಭಾಗಗಳನ್ನು ತಪ್ಪದೆ ಸೇವಿಸಬೇಕೆಂಬುದನ್ನು ತಿಳಿಯಿತಿ.
1. ಮೀನಿನ ಕಣ್ಣು
ಅನೇಕರು ಮೀನಿನ ಕಣ್ಣನ್ನು ತಿನ್ನದೆ ಎಸೆಯುತ್ತಾರೆ. ಆದರೆ, ಇದರಲ್ಲಿ ವಿಟಮಿನ್ ಬಿ1 ಮತ್ತು ಅಪರ್ಯಾಪ್ತ ಕೊಬ್ಬಿನಾಮ್ಲಗಳಿವೆ, ಇದು ದೃಷ್ಟಿ ಕ್ಷಮತೆಯನ್ನು ಹೆಚ್ಚಿಸಬಹುದು. ಜೊತೆಗೆ, ಮೆದುಳಿನ ಚಟುವಟಿಕೆಯನ್ನು ಉತ್ತೇಜಿಸಿ, ಸ್ಮರಣಶಕ್ತಿಯನ್ನು ಉತ್ತಮಗೊಳಿಸುವ ಸಾಮರ್ಥ್ಯವಿದೆ.
2. ಮೀನಿನ ಮೂತ್ರಕೋಶ
ಪ್ರಾಚೀನ ಔಷಧಗಳಲ್ಲಿ ಮೀನಿನ ಮೂತ್ರಕೋಶಕ್ಕೆ ವಿಶೇಷ ಸ್ಥಾನವಿದೆ. ಇದು ಜೆಲಾಟಿನ್, ಲಿಪಿಡ್, ಸಕ್ಕರೆ ಮತ್ತು ವಿಟಮಿನ್‌ಗಳ ನೈಸರ್ಗಿಕ ಶ್ರೇಣಿಯಾಗಿದೆ. ಸಂಶೋಧನೆಯ ಪ್ರಕಾರ, ಇದು ಕಾಲಜನ್ ಅನ್ನು ಹೊಂದಿದ್ದು, ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಯೌವನವನ್ನು ಕಾಪಾಡುತ್ತದೆ.
3. ಮೀನಿನ ಮೂಳೆ (ಫಿಶ್ ಬೋನ್ಸ್)
ಮೀನಿನ ಮೂಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇದೆ. ಈ ಮೂಳೆಯನ್ನು ಬೇಯಿಸಿ ಅಥವಾ ಒಣಗಿಸಿ ಪುಡಿಮಾಡಿ ಸೇವಿಸಬಹುದು. ಇದು ಮೂಳೆಯ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ ಮತ್ತು ಆಸ್ಟಿಯೊಪೊರೋಸಿಸ್ ಸಮಸ್ಯೆ ತಡೆಗಟ್ಟಲು ಸಹಾಯ ಮಾಡುತ್ತದೆ.
4. ಮೀನಿನ ಯಕೃತ್ತು
ಮೀನಿನ ಯಕೃತ್ತು ಪ್ರೋಟೀನ್ ಮತ್ತು ಉತ್ತಮ ಕೊಬ್ಬಿನಿಂದ ಸಮೃದ್ಧವಾಗಿದೆ. ಇದನ್ನು ಆಹಾರದಲ್ಲಿ ಬಳಸುವುದರಿಂದ ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ, ಇದು ರುಚಿಯ ದೃಷ್ಠಿಯಿಂದಲೂ ಬಹಳ ಮಧುರವಾಗಿದೆ.
5. ಮೀನಿನ ಮೆದುಳು
ಮೀನಿನ ಮೆದುಳಿನಲ್ಲಿ ಒಮೇಗಾ-3 ಕೊಬ್ಬಿನಾಮ್ಲಗಳಿವೆ. ಇದು ಮಕ್ಕಳು ಮತ್ತು ವೃದ್ಧರಿಗೆ ಬಹಳ ಪೌಷ್ಟಿಕ. ಆಲ್ಝೈಮರ್ಸ್ ಸೇರಿದಂತೆ ಹಲವಾರು ಮೆದುಳು ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟುವ ಸಾಮರ್ಥ್ಯವಿದೆ.
6. ಮೀನಿನ ಸಿಪ್ಪೆಗಳು
ಮೀನಿನ ಸಿಪ್ಪೆಗಳಲ್ಲಿ ಪ್ರೊಟೀನ್, ಲೆಸಿಥಿನ್, ಮತ್ತು ಕೋಲೀನ್ ಇರುತ್ತವೆ. ಇದು ಸ್ಮರಣಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
ಮೀನಿನ ವಿವಿಧ ಭಾಗಗಳನ್ನು ಹೇಗೆ ತಿನ್ನಬಹುದು?
ಮೀನಿನ ಈ ಭಾಗಗಳನ್ನು ನೇರವಾಗಿ ಸೇವಿಸಲು ತೊಂದರೆ ಇದ್ದರೆ, ನೀರಿನಲ್ಲಿ ಕುದಿಸಿ ಸೂಪ್ ರೂಪದಲ್ಲಿ ಕುಡಿಯಬಹುದು. ಈ ಸೂಪಿಗೆ ಸ್ವಲ್ಪ ಮಸಾಲೆ ಸೇರಿಸಿಕೊಂಡರೆ, ಅದನ್ನು ರುಚಿಕರವಾಗಿ ಸೇವಿಸಬಹುದು.