ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು (Brushing Teeth) ಉತ್ತಮ ಆರೋಗ್ಯಕರ ಅಭ್ಯಾಸ. ಬೆಳಿಗ್ಗೆ ಎದ್ದು ಮತ್ತು ರಾತ್ರಿ ಮಲಗುವ ಮುನ್ನ ಹಲ್ಲುಜ್ಜುವುದು ಮಾತ್ರವಲ್ಲ, ದಿನಕ್ಕೆ ಕನಿಷ್ಠ ಮೂರು ಬಾರಿ ಹಲ್ಲುಜ್ಜುವುದು ನೈರ್ಮಲ್ಯ (Oral Hygiene) ಕಾಪಾಡಲು ಅಗತ್ಯವಾಗಿದೆ.
ಹಲ್ಲುಜ್ಜುವುದರಿಂದ ಹಲ್ಲಿನ ಕಲೆಗಳು, ಕುಳಿಗಳು, ದುರ್ವಾಸನೆ, ಸೂಕ್ಷ್ಮತೆ ಮುಂತಾದವುಗಳು ತಡೆಯಲ್ಪಡುವುದರ ಜೊತೆಗೆ, ಹೃದಯದ ಆರೋಗ್ಯಕ್ಕೂ ಇದು ಪರಿಣಾಮ ಬೀರುತ್ತದೆ. ಹಲ್ಲುಜ್ಜದೇ ಹೋದರೆ ಬ್ಯಾಕ್ಟೀರಿಯಾಗಳು ಬಾಯಿಯಲ್ಲಿ ಹೆಚ್ಚಾಗಿ, ರಕ್ತಪ್ರವಾಹಕ್ಕೆ ಪ್ರವೇಶಿಸಬಹುದು. ಇದರಿಂದ ಹೃದಯದ ಮೇಲೆ ಉರಿಯೂತದ ಪರಿಣಾಮ ಉಂಟಾಗಿ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಹೀಗಾಗಿ ಹಲ್ಲುಜ್ಜುವುದು ಹೃದಯದ ಆರೋಗ್ಯಕ್ಕಾಗಿ ಅವಶ್ಯ.
ಇತ್ತೀಚೆಗೆ ಡಾ. ಕುನಾಲ್ ಸೂದ್ ಅವರು ಹಲ್ಲುಜ್ಜುವಿಕೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ನಡುವಿನ ಸಂಬಂಧವನ್ನು ವಿವರಿಸುವ ವಿಡಿಯೋ ಹಂಚಿಕೊಂಡಿದ್ದಾರೆ. ಅವರು ಉಲ್ಲೇಖಿಸಿದ ಸಂಶೋಧನೆಯ ಪ್ರಕಾರ, ಹಲ್ಲುಜ್ಜದೇ ಇರುವುದು ಹೃದಯ ವೈಫಲ್ಯ ಮತ್ತು ಹೃದಯರೋಗಕ್ಕೆ ಕಾರಣವಾಗಬಹುದು ಎಂಬುದು ಕಂಡುಬಂದಿದೆ. ಹೀಗಾಗಿ ಹಲ್ಲುಜ್ಜುವುದನ್ನು ನಿರ್ಲಕ್ಷಿಸುವುದು ಮಾರಕ ಎಂದು ಎಚ್ಚರಿಸಿದ್ದಾರೆ.
ರಾತ್ರಿ ಹಲ್ಲುಜ್ಜದಿರುವ ದುಷ್ಪರಿಣಾಮಗಳು
- ಹೃದಯ ಸಂಬಂಧಿ ರೋಗಗಳು: ಬ್ಯಾಕ್ಟೀರಿಯಾದಿಂದ ಸೆಪ್ಸಿಸ್ (Sepsis) ಅಥವಾ ಎಂಡೋಕಾರ್ಡಿಟಿಸ್ (Endocarditis) ಸಾಧ್ಯತೆ.
- ಮಧುಮೇಹದ ತೊಂದರೆ: ಮುಖದ ಸೋಂಕುಗಳು ಇನ್ಸುಲಿನ್ ಪ್ರತಿರೋಧಕತೆಯನ್ನು ಹೆಚ್ಚಿಸಬಹುದು.
- ಆರ್ತರೊಸ್ಕ್ಲೆರೋಸಿಸ್ (Arteriosclerosis): ಧಮನಿಗಳ ಗಟ್ಟಿಯಾಗುವಿಕೆಗೆ ಕಾರಣ.
ಪರಿಹಾರ ಮತ್ತು ಸಲಹೆಗಳು
- ರಾತ್ರಿ 2 ನಿಮಿಷಗಳ ಕಾಲ ಮೃದುವಾದ ಟೂತ್ಬ್ರಷ್ ಬಳಸಿ ಹಲ್ಲುಜ್ಜಿ.
- ಆಂಟಿ-ಬ್ಯಾಕ್ಟೀರಿಯಲ್ ಮೌತ್ವಾಶ್ ಬಳಸಿ.
- ವರ್ಷಕ್ಕೆ ಎರಡು ಬಾರಿ ದಂತವೈದ್ಯರನ್ನು ಸಂಪರ್ಕಿಸಿ.
ದಿನಕ್ಕೆ ಮೂರು ಬಾರಿ ಹಲ್ಲುಜ್ಜಿದರೆ, ಕೇವಲ ಹಲ್ಲುಗಳ ಆರೋಗ್ಯವಷ್ಟೇ ಅಲ್ಲ, ಹೃದಯದ ಆರೋಗ್ಯವೂ ಕಾಪಾಡಲು ಸಾಧ್ಯ. ನಿಯಮಿತವಾಗಿ ಹಲ್ಲುಜ್ಜುವುದು ನಿಮ್ಮ ಹೃದಯದ ಮೇಲೆ ದೀರ್ಘಾವಧಿಯ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಹೀಗಾಗಿ ನೀವು ಇನ್ನೂ ರಾತ್ರಿ ಹಲ್ಲುಜ್ಜುವುದನ್ನು ಆರಂಭಿಸದಿದ್ದರೆ, ಇಂದೇ ಪ್ರಾರಂಭಿಸಿ. ನಿಮ್ಮ ಹಲ್ಲುಗಳ ಆರೋಗ್ಯ ಮಾತ್ರವಲ್ಲ, ಹೃದಯದ ಆರೋಗ್ಯಕ್ಕೂ ಇದು ಅಗತ್ಯವೆಂದು ತಿಳಿಯಿರಿ.