ಪಾಕಿಸ್ತಾನದಲ್ಲಿ ಭಯೋತ್ಪಾದಕರ ಆತ್ಮಹತ್ಯಾ ದಾಳಿ ನಡೆದಿದೆ. ಶುಕ್ರವಾರದ ನಮಾಜ್ ಹೊತ್ತಿನಲ್ಲೇ ಸಂಭವಿಸಿರುವ ಭಯೋತ್ಪಾದಕರ ದಾಳಿಯಲ್ಲಿ 10ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಈಗ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೀತಾ ಇದೆ. ಈ ಸಮಯದಲ್ಲೇ ನಡೆದಿರೋ ಭಯೋತ್ಪಾದಕ ದಾಳಿ, ಪಾಕಿಸ್ತಾನ ಸೇಫ್ ರಾಷ್ಟ್ರ ಅಲ್ಲ ಎನ್ನುವುದನ್ನ ಮತ್ತೆ ಸಾಬೀತು ಮಾಡಿದೆ.
ಪಾಕಿಸ್ತಾನದಲ್ಲಿ ಭಯೋತ್ಪಾದಕರ ಆತ್ಮಹತ್ಯಾ ದಾಳಿ ನಡೆದಿರುವುದು ಶುಕ್ರವಾರದ ನಮಾಜ್ ಮಾಡುತ್ತಿರುವ ಸಮಯದಲ್ಲಿ. ಭಯೋತ್ಪಾದಕರ ದಾಳಿಯಲ್ಲಿ 10ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ದರುಲ್ ಉಲ್ ಹಕೀನಾ ಅನ್ನೋ ಪ್ರದೇಶದಲ್ಲಿ ಮದರಸಾ ಮೇಲೆ ಉಗ್ರರ ದಾಳಿ ದೊಡ್ಡ ಮಟ್ಟದಲ್ಲಿಯೇ ನಡೆದಿದೆ. ಈ ಉಗ್ರರ ದಾಳಿ ನಡೆದಿರೋದು ಖೈಬರ್ ಪ್ರಾಂತ್ಯದಲ್ಲಿ.
ಜಮೈತ್ ಉಲೇಮಾ ಇ ಇಸ್ಲಾಮ್ ಮುಖಂಡ, ಮದರಸಾದ ಮುಖ್ಯಸ್ಥ ಮೌಲಾನಾ ಹಕ್ಕಾನಿ ಗಂಭೀರವಾಗಿ ಗಾಯಗೊಂಡಿದ್ಧಾರೆ. ಈ ಮದರಸಾಗೂ ತಾಲಿಬಾನ್ ಉಗ್ರರಿಗೂ ಅವಿನಾಭಾವ ಸಂಬಂಧವಿದೆ. ತಾಲಿಬಾನ್ ಸಂಘಟನೆಯ ಬಹುತೇಕ ಮುಖಂಡರನ್ನು ಉತ್ಪಾದನೆ ಮಾಡುತ್ತಿದ್ದ ಮದರಸಾ ಇದು. ಈ ಮದರಸಾದಿಂದಲೇ ಒಮರ್ ಅಬ್ದುಲ್ಲಾ, ಸಿರಾಜುದ್ದೀನ್ ಹಕಾನಿಯಂತಹ ನರಹಂತಕ ಉಗ್ರರು ತಯಾರಾಗಿದ್ದರು. ಆದರೆ ಉಗ್ರರ ಮೇಲೆ ನಡೆದ, ಭಯೋತ್ಪಾದನಾ ಬಾಂಬ್ ದಾಳಿ, ಪಾಕಿಸ್ತಾನ ಸೈನ್ಯಕ್ಕೂ ಅಚ್ಚರಿ ತಂದಿದೆ.
ವಿಚಿತ್ರ ಅಂದ್ರೆ, ಪಾಕಿಸ್ತಾನದಲ್ಲಿ ಈಗ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೀತಾ ಇದೆ. ಪಾಕಿಸ್ತಾನವೇ ಅತಿಥೇಯ ರಾಷ್ಟ್ರ. ಭಾರತ, ಇದೇ ಭಯೋತ್ಪಾದನೆ ಕಾರಣಕ್ಕೆ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡ್ತಾ ಇಲ್ಲ. ಪಾಕಿಸ್ತಾನ ಕೂಡಾ, ಭಾರತದ ವಿರುದ್ಧ ಪಂದ್ಯವನ್ನ ಆಡಿರೋದು ದುಬೈನಲ್ಲಿ.
ಭಾರತ ಬಿಟ್ಟರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿರೋ ಆಸ್ಟ್ರೇಲಿಯಾ, ಇಂಗ್ಲೆಂಡ್, ಅಫ್ಘಾನಿಸ್ತಾನ, ನ್ಯೂಜಿಲೆಂಡ್, ಬಾಂಗ್ಲಾದೇಶ ತಂಡಗಳ ಆಟಗಾರರು ಈಗ ಪಾಕಿಸ್ತಾನದಲ್ಲೇ ಇದ್ದಾರೆ. ಅವರೂ ಕೂಡಾ ಭಾರತದ ವಿರುದ್ಧದ ಪಂದ್ಯಗಳಿಗಷ್ಟೇ ಪಾಕಿಸ್ತಾನವನ್ನ ಬಿಟ್ಟು, ದುಬೈಗೆ ಬಂದು ಆಡ್ತಿದ್ಧಾರೆ.
ಇದೇ ವೇಳೆ ಈ ಸಮಯದಲ್ಲೇ ನಡೆದಿರೋ ಭಯೋತ್ಪಾದಕ ದಾಳಿ, ಪಾಕಿಸ್ತಾನ ಸೇಫ್ ರಾಷ್ಟ್ರ ಅಲ್ಲ ಎನ್ನುವುದನ್ನ ಮತ್ತೆ ಸಾಬೀತು ಮಾಡಿದೆ. ಸದ್ಯಕ್ಕೆ ಕ್ರಿಕೆಟ್ ಪಂದ್ಯಗಳು ನಡೆಯುತ್ತಿರೋ ಪ್ರದೇಶದಿಂದ, ಈ ಉಗ್ರರ ದಾಳಿ ಸಂಭವಿಸಿರುವ ಪ್ರದೇಶ ದೂರದಲ್ಲಿದೆ. ಆ ಕಾರಣಕ್ಕೆ ಆಟಗಾರರು ನೆಮ್ಮದಿಯಾಗಿದ್ಧಾರೆ. ಆದರೆ, ಅಕಸ್ಮಾತ್ ಇಂತಹುದೇ ಭಯೋತ್ಪಾದನಾ ದಾಳಿ ಟೂರ್ನಿ ನಡೆಯುತ್ತಿರುವ ಪ್ರದೇಶದ ಸಮೀಪದಲ್ಲೇ ಸಂಭವಿಸಿದರೆ ಚಾಂಪಿಯನ್ಸ್ ಟ್ರೋಫಿ ಮೂಲಕ ಪಾಕಿಸ್ತಾನದ ಹಣೆಬರಹ ಮತ್ತೊಮ್ಮೆ ಬಯಲಾಗಲಿದೆ.