ಮಾಸ್ಕೋ/ಪ್ಯಾಂಗ್ಯಾಂಗ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದರ ನಡುವೆಯೇ ಯುದ್ಧ ಭೂಮಿಗೆ ಉತ್ತರ ಕೊರಿಯಾ ಪ್ರವೇಶಿಸಿದ್ದು, ಉಕ್ರೇನ್ ಸಂಘರ್ಷವನ್ನು ಮತ್ತೊಂದು ಅಪಾಯಕಾರಿ ಹಂತಕ್ಕೆ ಕೊಂಡೊಯ್ದಿದೆ.
ರಷ್ಯಾ ಪರ ಉತ್ತರ ಕೊರಿಯಾದ 50 ಸಾವಿರ ಸೈನಿಕರು
ರಷ್ಯಾದ ಪರ ಬೃಂದಾವನ ಬೆಂಬಲ ವ್ಯಕ್ತಪಡಿಸಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಸುಮಾರು 50,000 ಸೈನಿಕರನ್ನು ರಷ್ಯಾಗೆ ಕಳುಹಿಸಿಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ರಷ್ಯಾದಿಂದಲೂ ಉತ್ತರ ಕೊರಿಯಾ ಆಧುನಿಕ ಮಿಲಿಟರಿ ತಂತ್ರಜ್ಞಾನ ಹಾಗೂ ಆರ್ಥಿಕ ನೆರವನ್ನು ಪಡೆದುಕೊಳ್ಳುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬೆಳವಣಿಗೆಯಿಂದಾಗಿ ಉಕ್ರೇನ್ ಮುಂಚೂಣಿ ಯುದ್ಧ ಭೂಮಿಯಲ್ಲಿ ಭೀಕರತೆ ಮತ್ತಷ್ಟು ಹೆಚ್ಚಾಗಲಿದೆ.
ರಷ್ಯಾದ ಬತ್ತಳಿಕೆಗೆ ಸೇರಿತು ಭಯಾನಕ ‘ಹ್ವಾಸೊಂಗ್-11ಜಿಎ’ ಕ್ಷಿಪಣಿ
ಸೈನಿಕರಷ್ಟೇ ಅಲ್ಲದೆ ಉತ್ತರ ಕೊರಿಯಾ ತನ್ನ ಅತ್ಯಂತ ಅಪಾಯಕಾರಿ ‘ಹ್ವಾಸೊಂಗ್-11ಜಿಎ’ (Hwasong-11GA) ಅಲ್ಪಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ರಷ್ಯಾಗೆ ಪೂರೈಸಿದೆ.
• ತಂತ್ರಜ್ಞಾನ ಮತ್ತು ವೇಗ: ಈ ಕ್ಷಿಪಣಿಯು ತನ್ನ ವಿಧ್ವಂಸಕ ಕ್ಷಮತೆ, ಅತಿವೇಗ ಹಾಗೂ ಶತ್ರುಗಳ ಏರ್ ಡಿಫೆನ್ಸ್ (ವಾಯು ರಕ್ಷಣಾ) ವ್ಯವಸ್ಥೆಯನ್ನು ಚತುರತೆಯಿಂದ ತಪ್ಪಿಸಿಕೊಂಡು ಗುರಿ ತಲುಪುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ.
• ಪಾಶ್ಚಿಮಾತ್ಯ ದೇಶಗಳಲ್ಲಿ ಆತಂಕ: ಈ ಮಾರಕ ಕ್ಷಿಪಣಿ ರಷ್ಯಾದ ಸೈನ್ಯದ ಕೈಸೇರಿರುವುದು ಉಕ್ರೇನ್ ಮಾತ್ರವಲ್ಲದೆ ಅಮೆರಿಕ, ಬ್ರಿಟನ್ ಮತ್ತು ಕೆನಡಾ ಸೇರಿದಂತೆ ನ್ಯಾಟೋ (NATO) ರಾಷ್ಟ್ರಗಳಲ್ಲಿ ತೀವ್ರ ಆತಂಕವನ್ನು ಹುಟ್ಟುಹಾಕಿದೆ.




