ಬೆಂಗಳೂರು: ಕಳೆದ ಕೆಲವು ದಿನಗಳಿಂದ ಏರಿಳಿತದ ಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ವಾರಾಂತ್ಯದಲ್ಲಿ ಕೊಂಚ ಸ್ಥಿರತೆ ಕಂಡುಕೊಂಡಿವೆ. ಜಾಗತಿಕ ಮಾರುಕಟ್ಟೆಯ ಪ್ರಕ್ಷುಬ್ಧತೆಯ ನಡುವೆಯೂ ಭಾರತೀಯ ಮಾರುಕಟ್ಟೆಯಲ್ಲಿ ಬೆಲೆಗಳು ಸದ್ಯ ಶಾಂತವಾಗಿವೆ. ಈ ವಾರ ಒಟ್ಟಾರೆಯಾಗಿ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ 260 ರೂಪಾಯಿಗಳಷ್ಟು ಏರಿಕೆ ದಾಖಲಾಗಿದೆ.
ಏಪ್ರಿಲ್ 5ರ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10 ಗ್ರಾಂಗೆ 1,38,350 ರೂಪಾಯಿ ತಲುಪಿದೆ. ಇನ್ನು ಹೂಡಿಕೆದಾರರ ನೆಚ್ಚಿನ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 1,50,930 ರೂಪಾಯಿ ಆಗಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 13,835 ರೂಪಾಯಿಗಳಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 15,093 ರೂಪಾಯಿಗಳಿದೆ. ದೇಶದ ಇತರ ಪ್ರಮುಖ ನಗರಗಳಾದ ಮುಂಬೈ, ಕೋಲ್ಕತ್ತಾ ಮತ್ತು ಕೇರಳದಲ್ಲೂ ಇದೇ ದರ ಮುಂದುವರಿದಿದೆ. ಆದರೆ, ದೆಹಲಿ, ಚೆನ್ನೈ ಮತ್ತು ಜೈಪುರದಲ್ಲಿ ದರದಲ್ಲಿ ಅಲ್ಪ ವ್ಯತ್ಯಾಸವಿದ್ದು, ಪ್ರತಿ ಗ್ರಾಂಗೆ 13,850 ರೂಪಾಯಿ ದಾಖಲಾಗಿದೆ.
ಬೆಳ್ಳಿ ಬೆಲೆ ಸ್ಥಿರ
ಚಿನ್ನ ಹಾದಿಯಲ್ಲೇ ಬೆಳ್ಳಿ ಬೆಲೆಯೂ ಸದ್ಯ ಸ್ಥಿರವಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಗ್ರಾಂ ಬೆಳ್ಳಿಗೆ 250 ರೂಪಾಯಿ ಇದೆ (100 ಗ್ರಾಂಗೆ 25,000 ರೂ.). ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಬೆಳ್ಳಿ ದರ ಅಲ್ಪ ಏರಿಕೆ ಕಂಡಿದ್ದು, 100 ಗ್ರಾಂಗೆ 25,500 ರೂಪಾಯಿ ವರೆಗೆ ಮಾರಾಟವಾಗುತ್ತಿದೆ.
ಭಾರತಕ್ಕೆ ಹೋಲಿಸಿದರೆ ವಿದೇಶಗಳಲ್ಲಿ ಚಿನ್ನದ ಬೆಲೆ ಇಂದಿಗೂ ಕಡಿಮೆ ಇದೆ. ದುಬೈನಲ್ಲಿ ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಅಂದಾಜು 13,169 ರೂಪಾಯಿಗಳಷ್ಟಿದ್ದರೆ, ಕುವೈತ್‌ನಲ್ಲಿ ಇದು ಕೇವಲ 12,965 ರೂಪಾಯಿಗಳಾಗಿದೆ. ಅಮೆರಿಕ ಮತ್ತು ಸಿಂಗಾಪುರಗಳಲ್ಲಿ 13,500 ರೂಪಾಯಿಗಳ ಆಸುಪಾಸಿನಲ್ಲಿ ದರಗಳು ಇವೆ.
ಗಮನಿಸಿ: ಇಲ್ಲಿ ನೀಡಿರುವ ದರಗಳು ಮಾರುಕಟ್ಟೆಯ ಆಧಾರದ ಮೇಲೆ ಶೇಖರಿಸಿದ ಮಾಹಿತಿಯಾಗಿದೆ. ಆಭರಣ ಖರೀದಿಸುವಾಗ ಈ ದರದ ಮೇಲೆ ಹೆಚ್ಚುವರಿಯಾಗಿ ಜಿಎಸ್‌ಟಿ (GST) ಮತ್ತು ಮೇಕಿಂಗ್ ಚಾರ್ಜಸ್ (ತಯಾರಿಕಾ ವೆಚ್ಚ) ಅನ್ವಯವಾಗುವುದರಿಂದ, ನಿಮ್ಮ ನಗರದ ಅಧಿಕೃತ ಜ್ಯುವೆಲ್ಲರಿ ಮಳಿಗೆಯಲ್ಲಿ ದರವನ್ನು ಖಚಿತಪಡಿಸಿಕೊಳ್ಳುವುದು ಸೂಕ್ತ.





