• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

BBK 12: ಟಾಪ್‌ 6ನಿಂದ ‘ಟಾಸ್ಕ್ ಮಾಸ್ಟರ್’ ಧನುಷ್ ಔಟ್: ಬಿದ್ದ ವೋಟ್ ಎಷ್ಟು?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
January 18, 2026 - 7:44 pm
in Flash News, ಬಿಗ್ ಬಾಸ್
0 0
0
Untitled design 2026 01 18T193836.492

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಗ್ರ್ಯಾಂಡ್‌ ಫಿನಾಲೆ ಹಂತಕ್ಕೆ ತಲುಪುತ್ತಿದ್ದಂತೆ ಪ್ರೇಕ್ಷಕರಿಗೆ ಭಾರೀ ಶಾಕ್‌ ನೀಡುವ ಎಲಿಮಿನೇಷನ್‌ ನಡೆದಿದೆ. ಸೀಸನ್‌ನಲ್ಲಿ ‘ಟಾಸ್ಕ್‌ ಮಾಸ್ಟರ್’ ಎಂದೇ ಗುರುತಿಸಿಕೊಂಡಿದ್ದ ಧನುಷ್‌ ಗೌಡ ಫಿನಾಲೆಗೂ ಮುನ್ನವೇ ಹೊರಬಿದ್ದಿದ್ದಾರೆ. ವಿನ್ನರ್‌ ಆಗಬಹುದು ಎಂದು ಅಭಿಮಾನಿಗಳು ಭಾವಿಸಿದ್ದ ಧನುಷ್‌ ಔಟ್‌ ಆಗಿದ್ದಾರೆ..

ಧನುಷ್‌ ಅವರ ಬಿಗ್‌ ಬಾಸ್‌ ಜರ್ನಿ ಆರಂಭದಿಂದಲೇ ವಿಭಿನ್ನವಾಗಿತ್ತು. ಹೆಚ್ಚು ಮಾತನಾಡದೇ, ಜಗಳ-ಕಲಹಗಳಿಂದ ದೂರ ಉಳಿದು, ಶಾಂತವಾಗಿ ಆಟ ಆಡಿದವರು ಧನುಷ್‌. ಮೊದಲ ವಾರದಿಂದಲೇ ಟಾಸ್ಕ್‌ಗಳಲ್ಲಿ ತಮ್ಮ ಸಾಮರ್ಥ್ಯ ತೋರಿಸಿದ ಅವರು, ಕ್ರಮೇಣ ಮನೆಯೊಳಗಿನ ಸ್ಟ್ರಾಂಗ್‌ ಕಂಟೆಸ್ಟೆಂಟ್‌ ಆಗಿ ಹೊರಹೊಮ್ಮಿದರು. ಟಾಸ್ಕ್‌ ಅಂತ ಬಂದರೆ, ಪ್ರೇಕ್ಷಕರಿಗೆ ಮೊದಲಿಗೆ ನೆನಪಾಗುತ್ತಿದ್ದ ಹೆಸರು ಧನುಷ್‌ದ್ದೇ ಆಗಿತ್ತು. ಅವರಿಗೆ 1 ಕೋಟಿ 27 ಲಕ್ಷ ವೋಟ್ ಬಿದ್ದಿದೆ. ವಿನ್ನರ್ ವೋಟ್ 40 ಕೋಟಿ ಮೇಲಿದೆ. ಹೀಗಾಗಿ, ಅದಕ್ಕೆ ಹೋಲಿಸಿದರೆ ಇದು ಕಡಿಮೆಯೇ.

RelatedPosts

ಬಾಗಲಕೋಟೆಯಲ್ಲಿ ಪೊಲೀಸರಿಂದ ಹೈ-ಅಲರ್ಟ್: ಇಂದು ಮಧ್ಯರಾತ್ರಿಯಿಂದ ಮದ್ಯ ಮಾರಾಟ ನಿಷೇಧ

ಅನಿಲ್ ಅಂಬಾನಿಗೆ ಬಿಗ್ ಶಾಕ್: 3800 ಕೋಟಿ ರೂಪಾಯಿ ಮೌಲ್ಯದ ‘ಅಬೋಡ್’ ಮನೆ ಸೀಜ್‌ ಮಾಡಿದ ED

ರಶ್ಮಿಕಾ-ವಿಜಯ್ ಮದುವೆ: ಹಳದಿ ಶಾಸ್ತ್ರದ ಫೋಟೋ ಹಂಚಿಕೊಂಡ ನಟಿ ಆಶಿಕಾ

ಬಾಲಕಿಯೊಂದಿಗೆ ಅನುಚಿತ ವರ್ತನೆ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದೂರು ದಾಖಲು

ADVERTISEMENT
ADVERTISEMENT

ಈ ಸೀಸನ್‌ನಲ್ಲಿ ಮೂರು ಬಾರಿ ಕ್ಯಾಪ್ಟನ್‌ ಆಗಿ ದಾಖಲೆ ಬರೆದಿರುವ ಕೀರ್ತಿ ಧನುಷ್‌ಗೆ ಸಲ್ಲುತ್ತದೆ. ಅಷ್ಟೇ ಅಲ್ಲ, ಅವರು ಈ ಸೀಸನ್‌ನ ಕೊನೆಯ ಕ್ಯಾಪ್ಟನ್‌ ಕೂಡ ಆಗಿದ್ದರು. ಕೊನೆಯ ಕ್ಯಾಪ್ಟನ್‌ ಆದ ಕಾರಣ ಅವರಿಗೆ ಕೆಲವು ವಿಶೇಷ ಅಧಿಕಾರಗಳು ಲಭಿಸಿದ್ದವು. ‘ಟಿಕೆಟ್‌ ಟು ಟಾಪ್‌ 6’ ಗೆದ್ದು, ಮೊದಲ ಫೈನಲಿಸ್ಟ್‌ ಆಗಿ ಹೊರಹೊಮ್ಮಿದ್ದ ಧನುಷ್‌, ಫಿನಾಲೆ ತಲುಪುವುದು ಖಚಿತ ಎನ್ನುವ ನಿರೀಕ್ಷೆ ಎಲ್ಲರಲ್ಲೂ ಮೂಡಿಸಿತ್ತು.

ಆದರೆ, ಸೀಸನ್‌ ಮುಂದುವರಿದಂತೆ ಆಟದ ಡೈನಾಮಿಕ್ಸ್‌ ಬದಲಾಗತೊಡಗಿದವು. ವೈಲ್ಡ್‌ ಕಾರ್ಡ್‌ ಮೂಲಕ ರಘು ಅವರ ಎಂಟ್ರಿಯ ನಂತರ ಸ್ಪರ್ಧೆ ಇನ್ನಷ್ಟು ಕಠಿಣವಾಯಿತು. ರಘು ಕೂಡ ಸ್ಟ್ರಾಂಗ್‌ ಕಂಟೆಸ್ಟೆಂಟ್‌ ಆಗಿ ಕಾಣಿಸಿಕೊಂಡರು. ಧನುಷ್‌ ಅವರು ಟಾಸ್ಕ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರೂ, ಮನೆಯೊಳಗಿನ ಸಂಭಾಷಣೆ, ಸ್ಟ್ರಾಟೆಜಿ ಮತ್ತು ಎಂಟರ್‌ಟೇನ್‌ಮೆಂಟ್‌ ಅಂಶದಲ್ಲಿ ಹೆಚ್ಚು ಕಾಣಿಸಿಕೊಳ್ಳದೇ ಇದ್ದುದು ಕೆಲ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಯಿತು.

ಇನ್ನೂ, ಕಾವ್ಯ ಮತ್ತು ಗಿಲ್ಲಿ ನಡುವಿನ ವಿಚಾರಗಳಲ್ಲಿ ಧನುಷ್‌ ಪದೇ ಪದೇ ಮಧ್ಯೆ ಪ್ರವೇಶಿಸುತ್ತಿದ್ದರು ಎಂಬ ಆರೋಪವೂ  ಕೇಳಿಬಂದಿತ್ತು. ಆದರೂ, ಅವರು ಯಾವುದೇ ದೊಡ್ಡ ಜಗಳ ಅಥವಾ ಮೇಜರ್‌ ಕಾನ್ಫ್ಲಿಕ್ಟ್‌ ಇಲ್ಲದೇ ಫಿನಾಲೆ ಹಂತದವರೆಗೂ ಬಂದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವಿಚಾರವನ್ನು ಸ್ವತಃ ಬಿಗ್‌ ಬಾಸ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು..

ಧನುಷ್‌ ಅವರ ವ್ಯಕ್ತಿತ್ವಕ್ಕೆ ಕಿಚ್ಚ ಸುದೀಪ್‌ ಕೂಡ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. “ಒಂದು ಕೈಯಲ್ಲಿ ಕೊಟ್ಟಿದ್ದು, ಇನ್ನೊಂದು ಕೈಗೆ ಗೊತ್ತಾಗದಂತೆ ನಡೆದುಕೊಂಡಿದ್ದೀರಾ. ಇದು ನನಗೆ ತುಂಬಾ ಇಷ್ಟ ಆಯ್ತು” ಎಂದು ಕಿಚ್ಚ ಅವರು ಧನುಷ್‌ ಅವರನ್ನು ಹೊಗಳಿದ್ದರು. ಎಲ್ಲಿಯೂ ತಮ್ಮ ತ್ಯಾಗಗಳನ್ನು ಜಾಹೀರಾತು ಮಾಡದೇ, ಶಾಂತವಾಗಿ ಆಟ ಆಡಿದ ಧನುಷ್‌, ವ್ಯಕ್ತಿತ್ವದ ಮೂಲಕ ಗೆದ್ದಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು.

ಇಂತಹ ಸ್ಪರ್ಧಿಯ ಎಲಿಮಿನೇಷನ್‌ ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರ ತಂದಿದೆ. “ವಿನ್ನರ್‌ ಆಗ್ತಾರೆ” ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದ ಫ್ಯಾನ್ಸ್‌ಗೆ ಇದು ದೊಡ್ಡ ಶಾಕ್‌. ಆದರೂ, ಧನುಷ್‌ ಅವರ ಬಿಗ್‌ ಬಾಸ್‌ ಜರ್ನಿ ಸೈಲೆಂಟ್‌ ಆದರೆ ಪವರ್‌ಫುಲ್‌ ಆಗಿ ನೆನಪಿನಲ್ಲಿ ಉಳಿಯಲಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 02 25T221851.283

ಮದ್ಯ ಸೇವಿಸಿ ವಾಹನ ಚಲಾಯಿಸಿದ್ರೆ ಭಾರೀ ದಂಡ: 17 ಸಾವಿರಕ್ಕೂ ಹೆಚ್ಚು ಡಿಎಲ್ ರದ್ದು!

by ಶಾಲಿನಿ ಕೆ. ಡಿ
February 25, 2026 - 10:25 pm
0

Untitled design 2026 02 25T220414.164

ಬಾಗಲಕೋಟೆಯಲ್ಲಿ ಪೊಲೀಸರಿಂದ ಹೈ-ಅಲರ್ಟ್: ಇಂದು ಮಧ್ಯರಾತ್ರಿಯಿಂದ ಮದ್ಯ ಮಾರಾಟ ನಿಷೇಧ

by ಶಾಲಿನಿ ಕೆ. ಡಿ
February 25, 2026 - 10:05 pm
0

Untitled design 2026 02 25T205947.083

ಅನಿಲ್ ಅಂಬಾನಿಗೆ ಬಿಗ್ ಶಾಕ್: 3800 ಕೋಟಿ ರೂಪಾಯಿ ಮೌಲ್ಯದ ‘ಅಬೋಡ್’ ಮನೆ ಸೀಜ್‌ ಮಾಡಿದ ED

by ಶಾಲಿನಿ ಕೆ. ಡಿ
February 25, 2026 - 9:10 pm
0

Untitled design 2026 02 25T202946.344

ರಶ್ಮಿಕಾ-ವಿಜಯ್ ಮದುವೆ: ಹಳದಿ ಶಾಸ್ತ್ರದ ಫೋಟೋ ಹಂಚಿಕೊಂಡ ನಟಿ ಆಶಿಕಾ

by ಶಾಲಿನಿ ಕೆ. ಡಿ
February 25, 2026 - 8:40 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 25T220414.164
    ಬಾಗಲಕೋಟೆಯಲ್ಲಿ ಪೊಲೀಸರಿಂದ ಹೈ-ಅಲರ್ಟ್: ಇಂದು ಮಧ್ಯರಾತ್ರಿಯಿಂದ ಮದ್ಯ ಮಾರಾಟ ನಿಷೇಧ
    February 25, 2026 | 0
  • Untitled design 2026 02 25T205947.083
    ಅನಿಲ್ ಅಂಬಾನಿಗೆ ಬಿಗ್ ಶಾಕ್: 3800 ಕೋಟಿ ರೂಪಾಯಿ ಮೌಲ್ಯದ ‘ಅಬೋಡ್’ ಮನೆ ಸೀಜ್‌ ಮಾಡಿದ ED
    February 25, 2026 | 0
  • Untitled design 2026 02 25T202946.344
    ರಶ್ಮಿಕಾ-ವಿಜಯ್ ಮದುವೆ: ಹಳದಿ ಶಾಸ್ತ್ರದ ಫೋಟೋ ಹಂಚಿಕೊಂಡ ನಟಿ ಆಶಿಕಾ
    February 25, 2026 | 0
  • Untitled design 2026 02 25T200728.194
    ಬಾಲಕಿಯೊಂದಿಗೆ ಅನುಚಿತ ವರ್ತನೆ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದೂರು ದಾಖಲು
    February 25, 2026 | 0
  • Untitled design 2026 02 25T193502.300
    ರಣಜಿ ಫೈನಲ್‌ನಲ್ಲಿ ಕನ್ನಡಿಗನಿಗೆ ಡಿಚ್ಚಿ: ಜೆಕೆ ಕ್ಯಾಪ್ಟನ್‌ಗೆ ಭಾರೀ ದಂಡ ವಿಧಿಸಿದ BCCI
    February 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version