ಆ ಯುವಕ ವೊಂದರಲ್ಲಿ ರಿಕವರಿ ಏಜೆಂಟ್ ಆಗಿ ಕೆಲ್ಸ ಮಾಡ್ತಿದ್ದ. ಲೋನ್ ಕಟ್ಟದವರನ್ನ ಸಂಪರ್ಕಿಸಿ ಲೋನ್ ರಿಕವರಿ ಮಾಡೋ ಕೆಲ್ಸ ಇವ್ನದ್ದು. ಆದ್ರೆ ಅದೇ ಈಗ ಆತನಿಗೆ ಶಾಪವಾಗಿದೆ. ಲೋನ್ ರಿಕವರಿ ಮಾಡಲು ಹೋದವನು ಕಲ್ಲಿನಿಂದ ಪೆಟ್ಟು ತಿಂದು ಆಸ್ಪತ್ರೆ ಸೇರಿದ್ದ.
ಈತನ ಹೆಸ್ರು ಚಂದನ್ ಬೆಂಗಳೂರಿನ ಆಂಧ್ರಹಳ್ಳಿಯ ನಿವಾಸಿಯಾಗಿದ್ದ. ಬ್ಯಾಂಕ್ ವೊಂದರಲ್ಲಿ ಲೋನ್ ರಿಕವರಿ ಏಜೆಂಟ್ ಆಗಿ ಕೆಲಸ ಮಾಡ್ತಿದ್ದ. ಕಳೆದ ಕೆಲ ತಿಂಗಳ ಹಿಂದೆ ಇವರ ಬ್ಯಾಂಕ್‌ನಲ್ಲಿ ಕಾರು ಲೋನ್ ಪಡೆದು, ರಮೇಶ್ ಅನ್ನುವ ವ್ಯಕ್ತಿಯೊಬ್ಬ ಲೋನ್ ಕಟ್ಟದೇ ಸತಾಯಿಸುತ್ತಿದ್ದ. ಬರೋಬ್ಬರಿ ನಾಲ್ಕು ತಿಂಗಳು ಇಎಂಐ ಕಟ್ಟದೇ, ಫೋನ್ ಸಂಪರ್ಕಕ್ಕೂ ಸಿಗದೇ ಯಾಮಾರಿಸ್ತಿದ್ದ. ಆದರೆ ಬ್ಯಾಂಕ್ ಸಿಬ್ಬಂದಿ ಚಂದನ್, ರಮೇಶ್‌ಗೆ ಪದೇ ಪದೇ ಕರೆ ಮಾಡಿ ಇಎಂಐ ಕಟ್ಟುವಂತೆ ಸೂಚಿಸಿದ್ದ. ಆದ್ರೆ ಅದ್ಯಾವುದ್ದಕ್ಕೂ ರಮೇಶ್ ಕೇರ್ ಮಾಡ್ತಿರ್ಲಿಲ್ಲ. ಕೊನೆಗೆ ರಮೇಶ್ ನನ್ನ ಸಂಪರ್ಕಿಸಿದ್ದ ಚಂದನ್‌ಗೆ ಶಾಕ್ ಎದುರಾಗಿತ್ತು.
ಇದೇ ತಿಂಗಳ 1ನೇ ತಾರೀಕಿ ನಂದು ಇಎಂಐ ಹಣ ಕೊಡ್ತೀನಿ ಅಂಥ ರಮೇಶ್, ಚಂದನ್ ನನ್ನ ತನ್ನ ಮನೆ ಬಳಿ ಕರೆಸಿಕೊಂಡಿದ್ದ. ಅನ್ನಪೂರ್ಣೇಶ್ವರಿ ನಗರದ ಬಿಡಿಎ ಕಾಂಪ್ಲೆಕ್ಸ್ ಬಳಿ ಕರೆಸಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಅಷ್ಟೇ ಅಲ್ದೇ ತೀರಾ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಚಂದನ್ ಅವರ ಐಪೋನ್ ಹಾಗೂ ಇನ್ನೊಂದು ಮೊಬೈಲ್ ನ್ನ ಒಡೆದು ಹಾಕಿದ್ದಾನೆ.ತಲೆಗೆ ಕಲ್ಲಿನಿಂದ ಹೊಡೆದು, ಬೆನ್ನಿಗೂ ಹೊಡೆದು ಹಲ್ಲೆ ಮಾಡಿದ್ದಾನಂಥೆ. ಇಷ್ಟಕ್ಕೆ ಸುಮ್ಮನಾಗದ ರಮೇಶ್ ತನ್ನ ಸ್ನೇಹಿತರನ್ನು ಕರೆಸಿಕೊಂಡು ಒಟ್ಟು ನಾಲ್ಕು ಜನ ಸೇರಿ ಹಲ್ಲೆ ಮಾಡಿದ್ದಾರೆ. ಜೊತೆಗೆ ಚಂದನ್ ನ ಗಾಡಿಯನ್ನೂ ಒಡೆದು ಹಾಕ್ತೀನಿ ಅಂಥ ಬೆದರಿಸಿದ್ದಾನೆ ಅಂಥ ಚಂದನ್ ಆರೋಪಿಸಿದ್ದಾರೆ.
ಇನ್ನೂ ಗಾಡಿ ರಕ್ಷಿತಾ ಅನ್ನುವವರ ಹೆಸರಿನಲ್ಲಿದ್ದು, ರಮೇಶ್ ರಕ್ಷಿತಾ ತಂದೆ ಅನ್ನೋದು ಗೊತ್ತಾಗಿದೆ.ಈ ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಎಫ್ಐಆರ್ ಆಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ.