ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಗುಪ್ತವಾಗಿ ಹೂತುಹಾಕಿದ್ದಾಗಿ ಆರೋಪಿಸಿದ ‘ಮಾಸ್ಕ್ ಮ್ಯಾನ್’ನನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಸುದೀರ್ಘ 19 ಗಂಟೆಗಳ ವಿಚಾರಣೆಯ ಬಳಿಕ ಬಂಧಿಸಿದೆ.
ಈ ವ್ಯಕ್ತಿಯ ದೂರಿನ ಆಧಾರದ ಮೇಲೆ ಧರ್ಮಸ್ಥಳದ ಸುತ್ತಲಿನ 17 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಕೆಲವು ಸ್ಥಳಗಳಲ್ಲಿ ಮಾನವ ಅವಶೇಷಗಳು ಪತ್ತೆಯಾದರೂ, ಆತನ ಹೇಳಿಕೆಯ ಸತ್ಯಾಸತ್ಯತೆಯ ಬಗ್ಗೆ ಗೊಂದಲ ಉಳಿದಿದೆ.
ADVERTISEMENT
ADVERTISEMENT
ಶುಕ್ರವಾರ ಬೆಳಿಗ್ಗೆ 10:30 ರಿಂದ ಶನಿವಾರ ಬೆಳಗಿನ 5 ಗಂಟೆಯವರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಡೆದ ವಿಚಾರಣೆಯಲ್ಲಿ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮಹಾಂತಿ ತೀವ್ರವಾಗಿ ಪ್ರಶ್ನಿಸಿದ್ದಾರೆ. ಸುದೀರ್ಘ ವಿಚಾರಣೆಯ ಬಳಿಕ ಬಂಧಿಸಲಾಗಿದೆ.





