ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಲಕ್ಷ್ಮೀಸಾಗರ ಹಾಗೂ ದಿಗ್ಗೇನಹಳ್ಳಿ ಗ್ರಾಮಗಳ ಬಳಿ ಬಟ್ಟೆ ತೊಳೆಯಲು ಹೋಗಿದ್ದ ಮೂವರು ಮಹಿಳೆಯರು ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ದೀಪಾ(28), ದಿವ್ಯಾ(೨6) ಹಾಗೂ ಚಂದನಾ(19) ಮೃತ ಮಹಿಳೆಯರು. ಲಕ್ಷ್ಮೀ ಸಾಗರ ಗ್ರಾಮದ ಹೊಸ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ಅವಘಡ ಸಂಭವಿಸಿದೆ. ಚನ್ನಗಿರಿ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚನ್ನಗಿರಿ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಕೆರೆಯಿಂದ ಮೇಲೆತ್ತಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಶಿವಮೊಗ್ಗದಲ್ಲಿ ಕರೆಂಟ್ ಶಾಕ್‌ಗೆ ಯುವತಿ ದಾರುಣ ಸಾವು
ಬೆಂಗಳೂರಿನ ಚಾಮರಾಜಪೇಟೆಯ ಆನಂದಪುರದಲ್ಲಿ ಮಹಿಳೆಯೊಬ್ಬರು ವಿದ್ಯುತ್ ಶಾಕ್‌ಗೆ ಬಲಿಯಾದ ಕೇವಲ ಕೆಲವು ದಿನಗಳ ನಂತರ, ಶಿವಮೊಗ್ಗದಲ್ಲಿ ಕೂಡಾ ಇದೇ ರೀತಿ ದಾರುಣ ಘಟನೆ ಸಂಭವಿಸಿದೆ.
ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ 15 ವರ್ಷದ ನಿಸರ್ಗ ವಿದ್ಯುತ್ ಶಾಕ್‌ಗೆ ತುತ್ತಾಗಿ ಮೃತಪಟ್ಟಿದ್ದಾರೆ. ತಮ್ಮ ಮನೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ನೀರು ತುಂಬಿಸಲು ಮೋಟಾರ್ ಆನ್ ಮಾಡಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ.
ನಿಸರ್ಗ ತಮ್ಮ ಮನೆಯಲ್ಲಿ ನೀರು ತುಂಬಿಸಲು ಮೋಟಾರ್ ಆನ್ ಮಾಡಲು ಹೋದಾಗ, ಅಚಾನಕ್ ಅವರಿಗೆ ಕರೆಂಟ್ ಹೊಡೆದು, ತಕ್ಷಣವೇ ಕುಸಿದುಬಿದ್ದಿದ್ದಾರೆ. ಇದನ್ನು ಗಮನಿಸಿದ ಕುಟುಂಬದವರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ದಾರಿ ಮಧ್ಯೆದಲ್ಲೇ ನಿಸರ್ಗ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೀರು ಹಿಡಿಯುವಾಗ ಕರೆಂಟ್ ಶಾಕ್ ಹೊಡೆದು ಮಹಿಳೆ ದಾರುಣ ಸಾವು!
ನೀರು ಹಿಡಿಯುವಾಗ ಕರೆಂಟ್ ಶಾಕ್ ಹೊಡೆದು ಮಹಿಳೆ ದಾರುಣ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ಮಾರ್ಕೆಟ್ ರಸ್ತೆ ಆನಂದಪುರದಲ್ಲಿ ಘಟನೆ ನಡೆದಿದೆ. ಬೆಳ್ಳಗೆ 5:30ರ ವೇಳೆಗೆ ವೋಟರ್ ಸ್ಟಾರ್ಟ್ ಮಾಡುವಾಗ ಕರೆಂಟ್ ತಗುಲಿ ಮಹಿಳೆ ಸಾವು ಸಂಭವಿಸಿದೆ. ಸಾವು ಸಂಭವಿಸಿದ ಮಹಿಳೆಯನ್ನು 58 ವರ್ಷದ ಸೆಲ್ವಿ ಎಂದು ಗುರುತಿಸಲಾಗಿದೆ.
ಮನಿ ಕೆಲಸ ಮಾಡಿ ಸೆಲ್ವಿ ಮನೆ ನಡೆಸುತ್ತಿದಳು. ಹಾಗೆ ಸೆಲ್ವಿ 4 ಜನ ಮಕಳ್ಳನ್ನ ಸಾಕುತ್ತಿದ್ದಳು . 12 ವರ್ಷ ಗಳ ಹಿಂದೆ ಗಂಡನನ್ನು ಮಹಿಳೆ ಕಳೆದುಕೊಂಡಿದ್ದಳು . ಈಗ ತಂದೆ ಮತ್ತು ತಾಯಿಯನ್ನು ಕಳೆದುಕೊಂಡು 4 ಮಕ್ಕಳು ಅನಾಥರಾಗಿದ್ದಾರೆ. ಸದ್ಯ ಮಹಿಳೆಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತಾಯಿಯ ಶವದ ಎದುರು ಮಕ್ಕಳ ಕಣ್ಣೀರಿಡುತ್ತಿರುವ ಹೃದಯ ತುಂಬಿ ಬರುವಂತೆ ಮಾಡುತ್ತದೆ.
ಬೆಳಗ್ಗೆ 5:30ಗಂಟೆಗೆ ಆನಂದಪುರದ ಮಾರ್ಕೆಟ್ ರಸ್ತೆಯಲ್ಲಿ ನೀರಿನ ಮೋಟರ್ ಸ್ಟಾರ್ಟ್ ಮಾಡುವಾಗ ಸೆಲ್ವಿ ಅವರಿಗೆ ವಿದ್ಯುತ್ ಶಾಕ್ ಹೊಡೆದಿದೆ. ಸ್ಥಳೀಯರು ದಶಕಗಳಿಂದ ನೀರು ಸಂಕಷ್ಟದೊಂದಿಗೆ ಹೋರಾಡುತ್ತಿದ್ದರೂ, ಅಧಿಕಾರಿಗಳು ಪರಿಹಾರಕ್ಕೆ ಕ್ರಮ ಕೈಗೊಳ್ಳದಿದ್ದು ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ. ಸೆಲ್ವಿ ಅವರು 12 ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡು, 4 ಮಕ್ಕಳನ್ನು ಒಂಟಿಯಾಗಿ ಸಾಕುತ್ತಿದ್ದರು. ಅವರ ಮರಣದಿಂದ ಮಕ್ಕಳು ಅನಾಥರಾಗಿದ್ದಾರೆ.