ಚಿತ್ರದುರ್ಗ: ನಿಧಿಯನ್ನು ಪತ್ತೆಹಚ್ಚುವ ಗ್ಯಾಂಗ್ನ ಮೇಲೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಚಿತ್ರದುರ್ಗದ ಭೈರಾಪುರ ಮತ್ತು ಹಿರೇಕೆರೆಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಬಂಧಿತರಲ್ಲಿ ತಿಮ್ಮರಾಜು, ರಾಜಾಂಜಿನಿ, ಟಿ. ಸಣ್ಣಪ್ಪ, ಮೈಲಾರಪ್ಪ, ವೇಣು, ಕೃಷ್ಣಗಿರಿ, ಮಂಜುನಾಥ, ಎಂ. ಆನಂದ್ ಎಂಬುವವರು ತಮಿಳುನಾಡಿನವರು. ಸಲ್ಕಾಪುರಂ ಶ್ರೀನಿವಾಸುಲು, ವೆಂಕಟೇಶ್ ತೆಲಂಗಾಣ ಮೂಲದವರಾಗಿದ್ದಾರೆ. ರವಿಶ್ರೀನಿ ತಮಿಳುನಾಡಿಗೆ ಸೇರಿದ್ದಾರೆ. ಈ ಗ್ಯಾಂಗ್ ನ ನೇತೃತ್ವವನ್ನು ತಿಮ್ಮರಾಜು ಎಂಬಾತ ನೀಡುತ್ತಿದ್ದನೆಂದು ಹೇಳಲಾಗಿದೆ.
ಈ ಗ್ಯಾಂಗ್, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಸ್ಥಳೀಯರ ಸಹಾಯ ಪಡೆದು ಭೂಮಿಯೊಳಗಿನ ವಿಗ್ರಹಗಳನ್ನು ಪತ್ತೆ ಮಾಡಿ ಮಾರಾಟ ಮಾಡುತ್ತಿದ್ರು ಎನ್ನಲಾಗಿದೆ.
ಆಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬಳಸಿಕೊಂಡು ಈ ಗ್ಯಾಂಗ್, ಭೂಮಿಯೊಳಗಿನ ವಿಗ್ರಹ ಮತ್ತು ನಿಧಿಗಳನ್ನು ಪತ್ತೆ ಮಾಡುತ್ತಿದ್ದರು. ಅವರು ಬಳಸುತ್ತಿದ್ದ ಉಪಕರಣಗಳು ವಿಶೇಷವಾಗಿ ನಿರ್ದಿಷ್ಟವಾದ ವಿಗ್ರಹಗಳನ್ನು ಪತ್ತೆಹಚ್ಚಲು ನಿರ್ಮಿತವಾಗಿದ್ದವು. ಈ ಗ್ಯಾಂಗ್ನ ಸದಸ್ಯರು ವಿಭಿನ್ನ ರಾಜ್ಯಗಳಿಂದ ಆಗಮಿಸಿದ್ದ ಕಾರಣ, ಅದನ್ನು ಆರೋಪಿಗಳ ಬಂಧನ ಸಮಯದಲ್ಲಿ ಕಂಡುಹಿಡಿಯಲಾಗಿದೆ.
DYSP ರಾಜಣ್ಣ, CPI ವಸಂತ ಅಸೋದೆ, PSI ಪಾಂಡಿರಂಗ ಹಾಗೂ ಅವರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿದ್ದಾರೆ. ಮೊಳಕಾಲಗಮೂರು ಠಾಣೆಯಲ್ಲಿ ಈ ಸಂಬಂಧ FIR ದಾಖಲಾಗಿದೆ.
ಈ ಘಟನೆ ನಡೆದ ನಂತರ ಸ್ಥಳೀಯರಲ್ಲಿ ಆತಂಕದ ವಾತಾವರಣವಿದ್ದು, ಭೂಮಿಯೊಳಗಿನ ವಿಗ್ರಹಗಳ ದಂಧೆಯನ್ನು ತಡೆಗಟ್ಟಲು ಪೊಲೀಸರು ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.