ಐಟಿ ನಗರಿಯಲ್ಲಿ ಪಿಜಿಯಲ್ಲಿ ವಾಸಿಸುವ ಲಕ್ಷಾಂತರ ಯುವಕ-ಯುವತಿಯರೇ ಎಚ್ಚರಿಕೆ. ಉದ್ದಿಮೆ ಪರವಾನಗಿ ಇಲ್ಲದೇ ಆರೋಗ್ಯ ಮತ್ತು ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದ್ದ 14 ಪಿಜಿಗಳ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ದಾಳಿ ನಡೆಸಿ ಬೀಗ ಜಡಿದಿದೆ. ಮಹದೇವಪುರ, ಕೆಆರ್‌ಪುರಂ, ವೈಟ್‌ಫೀಲ್ಡ್, ಮಾರತಹಳ್ಳಿ ಪ್ರದೇಶದ ಪಿಜಿಗಳ ಮೇಲೆ ಕ್ರಮ ಕೈಗೊಂಡಿದೆ.
ಪೂರ್ವ ವಲಯದ ಆಯುಕ್ತರ ಆದೇಶದಂತೆ BBMP ಆರೋಗ್ಯ ವಿಭಾಗ ಹಾಗೂ ಜಂಟಿ ತಂಡ ರಾತ್ರೋರಾತ್ರಿ ದಾಳಿ ನಡೆಸಿ, ನಿಯಮ ಉಲ್ಲಂಘನೆ ಮಾಡಿದ ಪಿಜಿಗಳ ಬಾಗಿಲಿಗೆ ಸೀಲ್ ಹಾಕಿದೆ. ಈಗ ಈ ಪಿಜಿಗಳಲ್ಲಿರುವ ವಿದ್ಯಾರ್ಥಿಗಳು-ಉದ್ಯೋಗಿಗಳು ರಾತ್ರೋರಾತ್ರಿ ಬ್ಯಾಗ್ ಹೊತ್ತು ರಸ್ತೆಗಿಳಿದಿದ್ದಾರೆ.
ಬೀಗ ಹಾಕಿದ 14 ಪಿಜಿಗಳ ಪೂರ್ತಿ ಪಟ್ಟಿ:
- SVK PG – ಪಟ್ಟಂದೂರು ಅಗ್ರಹಾರ, ITPL ಬ್ಯಾಕ್ ಗೇಟ್
- ವಂಶಿ ಕೃಷ್ಣ PG – ಪಟ್ಟಂದೂರು ಅಗ್ರಹಾರ, ITPL ಹಿಂದಿನ ಗೇಟ್
- ಡ್ವೆಲ್ ಕೋ-ಲಿವಿಂಗ್ PG – ಲಕ್ಷ್ಮಿನಾರಾಯಣಪುರ, ನಾಗಪ್ಪ ರೆಡ್ಡಿ ಲೇಔಟ್
- ರಾಯಲ್ ಹೋಮ್ ಸ್ಟೇಸ್ PG – ಮೈತ್ರಿ ಲೇಔಟ್, ವೈಟ್‌ಫೀಲ್ಡ್
- ಡ್ರೀಮ್ ಲ್ಯಾಂಡ್ PG (ವೆಂಕಟಾಮೃತ ನಿಲಯಂ) – ಪ್ರಶಾಂತ್ ಲೇಔಟ್, ವೈಟ್‌ಫೀಲ್ಡ್
- ಝೋಲೋ ಅಸ್ಮಿ ಜೆಂಟ್ಸ್ PG – ರಾಘವೇಂದ್ರ ಲೇಔಟ್, ಮಾರತಹಳ್ಳಿ
- K.R ಜೆಂಟ್ಸ್ PG – 5ನೇ ಕ್ರಾಸ್, ರಾಮಾಂಜನೇಯ ಲೇಔಟ್, ಮಾರತಹಳ್ಳಿ
- SG ಜೆಂಟ್ಸ್ & ಲೇಡೀಸ್ PG – ಮುನಿಯಪ್ಪ ಲೇಔಟ್, ಹೊರಮಾವು
- ಸೆಂಟ್ ಮರಿಯಾ ಲೇಡೀಸ್ PG – ನಾಗಪ್ಪ ರೆಡ್ಡಿ ಲೇಔಟ್, ದೂರವಾಣಿನಗರ
- SLV ಕಂಫರ್ಟ್ಸ್ ಜೆಂಟ್ಸ್ PG – ಶರಾವತಿ ಲೇಔಟ್, ಕೆ.ಆರ್.ಪುರಂ
- ಶ್ರೀ ಗಣೇಶ ಜೆಂಟ್ಸ್ PG – ಕೃಷ್ಣ ಥಿಯೇಟರ್ ರಸ್ತೆ, ಬಸವನಪುರ
- SSV ಟವರ್ PG – ಲಕ್ಷ್ಮೀ ಸಾಗರ ಲೇಔಟ್, ಮಹದೇವಪುರ
- ಬ್ಲಿಸ್ ಕೋ-ಲಿವಿಂಗ್ PG – ಕೃಷ್ಣ ಗಾರ್ಡನ್ ಲೇಔಟ್, ಬಿ ನಾರಾಯಣಪುರ
- ವಿ.ಡಿ.ಎಸ್ ಲಕ್ಸುರಿ ಲೇಡೀಸ್ PG – ಸತ್ಯ ಬಡಾವಣೆ
ಯಾಕೆ ಬೀಗ ಹಾಕಲಾಯಿತು?
- ಉದ್ದಿಮೆ ಪರವಾನಗಿ ಇಲ್ಲ.
- ಅಗ್ನಿಶಾಮಕ ಯಂತ್ರಗಳು ಇಲ್ಲ / ಎಕ್ಸ್‌ಪೈರಿ ಆಗಿವೆ.
- ಹೆಚ್ಚುವರಿ ಮಹಡಿ ಕಟ್ಟಿ ಅನುಮತಿ ಇಲ್ಲದೇ ಬಾಡಿಗೆಗೆ ಬಿಟ್ಟಿದ್ದಾರೆ.
- ಸ್ವಚ್ಛತೆ, ಗಾಳಿ-ಬೆಳಕು, ತುರ್ತು ನಿರ್ಗಮನ ಮಾರ್ಗ ಇಲ್ಲ.
- ಒಬ್ಬರಿಗೆ 40-50 ಜನರನ್ನು ಒಂದೇ ಕೋಣೆಯಲ್ಲಿ ತುಂಬಿಸಿದ್ದಾರೆ.
BBMP ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ: “ಮುಂದಿನ ಕೆಲವೇ ದಿನಗಳಲ್ಲಿ ಇಡೀ ಬೆಂಗಳೂರಿನಲ್ಲಿ ಸಾವಿರಾರು ಪಿಜಿಗಳ ಮೇಲೆ ದಾಳಿ ನಡೆಯಲಿದೆ. ಯಾವುದೇ ಪಿಜಿ ಮಾಲೀಕರು ಪರವಾನಗಿ ಪಡೆಯದಿದ್ದರೆ ಬೀಗ ಹಾಕಿ, ದಂಡ ವಿಧಿಸಿ, ಕೇಸ್ ದಾಖಲಿಸಲಾಗುವುದು.”
ಪಿಜಿಯಲ್ಲಿ ಇರುವವರೇ ಗಮನಿಸಿ: ನಿಮ್ಮ ಪಿಜಿಗೆ ಟ್ರೇಡ್ ಲೈಸೆನ್ಸ್ ಇದೆಯೇ? ಅಗ್ನಿಶಾಮಕ ಯಂತ್ರ ಇದೆಯೇ? ಒಮ್ಮೆ ಚೆಕ್ ಮಾಡಿ. ಇಲ್ಲದಿದ್ದರೆ ಯಾವಾಗ ಬೇಕಾದರೂ ಬಾಗಿಲು ಮುಚ್ಚಬಹುದು.





