ದೊಡ್ಮನೆಯ ಯುವರಾಜ್‌ಕುಮಾರ್ ಎಕ್ಕ ಚಿತ್ರದ ರಿಲೀಸ್‌ಗೂ ಮೊದಲೇ 3ನೇ ಸಿನಿಮಾದ ಮುಹೂರ್ತ ಕಂಡಿತ್ತು. ಅಕ್ಷಯ ತೃತೀಯದಂದು ಸುಕ್ಕಾ ಸೂರಿ ಜೊತೆಗಿನ ಹೊಚ್ಚ ಹೊಸ ಪ್ರಾಜೆಕ್ಟ್‌ಗೆ ದುನಿಯಾ ವಿಜಯ್ ಕ್ಲಾಪ್ ಮಾಡಿದ್ರು. ಆದ್ರೀಗ ಆ ಸಿನಿಮಾ ಸದ್ಯಕ್ಕಿಲ್ಲ ಎನ್ನಲಾಗ್ತಿದೆ. ಹಾಗಾದ್ರೆ ವಾಟ್ ನೆಕ್ಸ್ಟ್ ಯುವ ಅಂದ್ರೆ? ರಾಬರ್ಟ್ ಡೈರೆಕ್ಟರ್ ತರುಣ್ ಹೆಸರು ಕೇಳಿಬರ್ತಿದೆ.
- ಕಾಟೇರ ಸಾರಥಿ ಜೊತೆ ಯುವ.. ಸದ್ಯಕ್ಕಿಲ್ಲ ಸೂರಿ ಪ್ರಾಜೆಕ್ಟ್!
- ಅಕ್ಷಯ ತೃತೀಯಕ್ಕೆ ದುನಿಯಾ ವಿಜಯ್ ಮಾಡಿದ್ರು ಕ್ಲಾಪ್
- ಏಳುಮಲೆ ಸಕ್ಸಸ್ ಖುಷಿಯಲ್ಲಿರೋ ಸೆನ್ಸೇಷನಲ್ ಡೈರೆಕ್ಟರ್
- ತರುಣ್ ಸುಧೀರ್ ಟ್ರ್ಯಾಕ್ ರೆಕಾರ್ಡ್.. 100% ಸಕ್ಸಸ್ ರೇಟ್
ಯುವ, ಎಕ್ಕ.. ಹೀಗೆ ತಮ್ಮ ಕರಿಯರ್‌ನ ಆರಂಭದ ಎರಡು ಸಿನಿಮಾಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ರು ದೊಡ್ಮನೆಯ ಹುಡ್ಗ ಯುವರಾಜ್‌ಕುಮಾರ್. ಅದಾದ ಬಳಿಕ ಮೂರನೇ ಸಿನಿಮಾಗೂ ಚಾಲನೆ ನೀಡಲಾಗಿತ್ತು. ಹೌದು, ಪಿಆರ್‌ಕೆ ಒಡತಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ ಹಾಗೂ ಕೆಆರ್‌ಜಿ ಹೀಗೆ ಎರಡನೇ ಚಿತ್ರ ಮಾಡಿದ ನಿರ್ಮಾಪಕರ ತಂಡವೇ ನ್ಯೂ ಮೂವಿ ಅನೌನ್ಸ್ ಮಾಡಿತ್ತು.
ತರುಣ್ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ ಹಂಡ್ರೆಡ್ ಪರ್ಸೆಂಟ್ ಸಕ್ಸಸ್ ರೇಟ್ ಇದೆ. ಇನ್ನು ಯುವ ಕೂಡ ಚೊಚ್ಚಲ ಚಿತ್ರ ಯುವದಲ್ಲಿ ಅಷ್ಟಾಗಿ ಮಾಗಿರಲಿಲ್ಲ. ಇದೀಗ ಎಕ್ಕ ಚಿತ್ರದ ವೇಳೆಗೆ ನಟನೆಯಲ್ಲಿ ಪಕ್ವತೆ ಕಾಣ್ತಿದೆ. ಯುವ ಮಾಸ್ ಹೀರೋ ಆಗಿ ನಿಲ್ಲಬಲ್ಲ ಎಫಿಶಿಯೆನ್ಸಿ ಇರೋ ಕಲಾವಿದ ಆಗಿದ್ದು, ತರುಣ್ ಅಂತಹ ಡೈರೆಕ್ಟರ್ ಸಿಗ್ತಿರೋದು, ಅವರ ಕರಿಯರ್‌ಗೆ ಮತ್ತಷ್ಟು ಪ್ಲಸ್ ಆಗಲಿದೆ.
