ಡಿಕೆ ಬ್ರದರ್ಸ್‌ನ ಕೊಂಡಾಡಿದ ರಿಯಲ್ ಸ್ಟಾರ್ ಉಪೇಂದ್ರ

‘ಕನಕಪುರ’ನ ಅಮೆರಿಕಾದಂತಿದೆ ಎಂದ ಉಪೇಂದ್ರ..!

Untitled design 2026 06 03T225126.389

ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್.. ಡೈನಾಮಿಕ್ ಲೀಡರ್ ಡಿಕೆ ಶಿವಕುಮಾರ್ ಕುರಿತು ನಮ್ಮ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಏನು ಹೇಳಿದ್ರು ಅನ್ನೋದರ ಡಿಟೇಲ್ಸ್‌ ಇಲ್ಲಿದೆ ನೋಡಿ…

2002ರಿಂದ 2010ರ ತನಕ ನಂದಿನಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ಉಪೇಂದ್ರ ಕೂಡ ಕನಕೋತ್ಸವಕ್ಕೆ ಕಳೆ ತಂದುಕೊಟ್ಟಿದ್ರು. ರೈತರಿಗಾಗಿ ಉಚಿತವಾಗಿ ಸಂಭಾವನೆ ಪಡೆಯದೆ ರಾಯಭಾಗಿ ಆಗಿದ್ದ ಉಪ್ಪಿ ಕುರಿತು ಡಿಕೆ ಸುರೇಶ್ ಸೊಗಸಾಗಿ ಇಂಟ್ರಡಕ್ಷನ್ ನೀಡಿದ್ರು. 18 ವರ್ಷಗಳ ಹಿಂದಿನ ನ್ಯೂಸ್ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಕೂಡ ನೆನೆದರು ಡಿಕೆ ಸುರೇಶ್. ಇನ್ನೂ ಈ ಉತ್ಸವದ ಕುರಿತು ಮಾತನಾಡಿದ ಉಪ್ಪಿ, ಇದಕ್ಕೆಲ್ಲಾ ಕಾರಣ, ಬ್ರ್ಯಾಂಡ್ ಅಂಬಾಸಿಡರ್‌ಗಳು ಡಿಕೆ ಬ್ರದರ್ಸ್ ಅಂದ್ರು.

ಕನಕಪುರದಲ್ಲಿರೋ ಜನರ ಪ್ರೀತಿಯಿಂದ ಡೇ & ನೈಟ್ ಕೆಲಸ ಮಾಡ್ತಾರೆ ಇವರುಗಳು ಅಂತ ಕೊಂಡಾಡಿದ ಉಪ್ಪಿ, 35 ವರ್ಷಗಳ ಹಿಂದೆ ಕಾಶಿನಾಥ್‌ರ ಅನಂತನ ಅವಾಂತರ ಚಿತ್ರಕ್ಕಾಗಿ ಮೊದಲು ಬಣ್ಣ ಹಚ್ಚಿದ್ದೇ ಕನಕಪುರದಲ್ಲಿ ಎಂದರು. ಆಗ ಕನಕಪುರ ಏನೂ ಇರಲಿಲ್ಲ ಎಂದ ಉಪೇಂದ್ರ, ಸಿಂಗಲ್ ರೋಡ್ ಇತ್ತು ಅಷ್ಟೇ. ಆದ್ರೀಗ ಬರ್ತಾ ನೋಡ್ತಿದ್ರೆ ಆಗ ನಾನು ನೋಡಿದ ಕನಕಪುರಕ್ಕೂ ಈ ಕನಕಪುರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಮೆರಿಕಾಗೆ ಬಂದಂಗೆ ಆಯ್ತು. ಅದಕ್ಕೆ ಕಾರಣ ಕರ್ತರೇ ಈ ಬಿಗ್ ಬ್ರದರ್ಸ್ ಅಂತ ಕೊಂಡಾಡಿದ್ರು. ಜೊತೆಗೆ ಹಾಡು ಹಾಡಿ, ಸ್ಟೆಪ್ ಹಾಕಿ, ಡೈಲಾಗ್ ಕೂಡ ಹೊಡೆದು ನೆರೆದಿದ್ದ ಜನರನ್ನ ರಂಜಿಸಿದ್ರು.

ಕನ್ನಡ ಱಪರ್ ಚಂದನ್ ಶೆಟ್ಟಿ ಕನಕೋತ್ಸವದಲ್ಲಿ ಯೂತ್ಸ್ ಹಾರ್ಟ್ ಬೀಟ್ ಹೆಚ್ಚಿಸಿದ್ರು. ಅಪ್ಪು-ಎನ್‌ಟಿಆರ್ ಗೆಳೆಯ ಗೆಳೆಯ ಸಾಂಗ್ ಜೊತೆ ಧಮ್ ಪವರೇ ಅಂತ ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು. ಅಲ್ಲದೆ, ಕನಕಪುರದ ಜನ ತುಂಬಾ ಅದೃಷ್ಠವಂತರು. ಇಂತಹ ರಾಜಕಾರಣಿಗಳನ್ನ ಪಡೆದ ನೀವೇ ಧನ್ಯರು ಅಂತ ಡಿಕೆ ಬ್ರದರ್ಸ್‌ಗೆ ಬಹುಪರಾಕ್ ಹೇಳಿದ್ರು.

ನವೀನ್ ಸಜ್ಜು ತಮ್ಮ ಕಂಠದಲ್ಲಿ ಜಾನಪದ ಸೊಗಡಿನ ಹಾಡುಗಳ ಸೊಬಗು ಹೆಚ್ಚಿಸಿದ್ರು. ಕನಕೋತ್ಸವಕ್ಕೆ ಜೋಶ್ ತಂದರು. ಇನ್ನೂ ಡಿಕೆ ಶಿವಕುಮಾರ್‌ ಅವರನ್ನ ಅದ್ಭುತ ಪದಗಳಿಂದ ಬಣ್ಣಿಸಿದ್ರು. ಕರ್ನಾಟಕ ರಾಜ್ಯ ರಾಜಕಾರಣದ ಬ್ರ್ಯಾಂಡ್, ಕನಕಪುರದ ರೇಷ್ಮೆ, ಶೋಮ್ಯಾನ್ ಅಂತೆಲ್ಲಾ ವರ್ಣಿಸಿದ್ರು. ಮೈಸೂರು ದಸರಾ ರೀತಿಯ ಸರ್ಕಾರಿ ಕಾರ್ಯಕ್ರಮವಾ ಈ ಕನಕೋತ್ಸವ ಅಂತ ಅಮೆರಿಕಾದಿಂದ ಕರೆ ಮಾಡಿದವರ ಕುರಿತು ಮಾತನಾಡಿದ್ರು.

ಡಿಕೆ ಶಿವಕುಮಾರ್ ಪತ್ನಿ ಉಷಾ ಅವರಿಂದ ಕೂಡ ಸ್ಟೆಪ್ ಹಾಕಿಸೋ ಮೂಲಕ ಗಮನ ಸೆಳೆದರು ಗಾಯಕ ನವೀನ್ ಸಜ್ಜು.

ನಿಮ್ಮ ಉತ್ಸಾಹ ಗಗನಕ್ಕೆ ಮುಟ್ಟಿದೆ ಎಂದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಮೊದಲ ಬಾರಿ ಕಾಂತಾರ ಮಾಡಿದಾಗ ಡಿಕೆ ಬ್ರದರ್ಸ್‌ ನನ್ನ ಕನಕೋತ್ಸವಕ್ಕೆ ಆಹ್ವಾನಿಸಿದ್ರು. ಈಗಲೂ ಕನಕೋತ್ಸವಕ್ಕೆ ಬಂದಿದ್ದೇನೆ ಅಂತ ಖುಷಿಯ ಕ್ಷಣಗಳನ್ನ ಹಂಚಿಕೊಂಡರು.

ಕಾಂತಾರ ಚಾಪ್ಟರ್-1 ಸಕ್ಸಸ್ ಸೇರಿದಂತೆ ಡಿಕೆ ಬ್ರದರ್ಸ್ ಏನೇ ಮಾಡಿದ್ರೂ ಮಾದರಿ ಆಗುವಂತೆ ಮಾಡ್ತಾರೆ ಎಂದ ರಿಷಬ್ ಶೆಟ್ರು, ಇವರೊಂಥರಾ ಜಯ-ವಿಜಯರು ಅಂತ ಮೆಚ್ಚುಗೆಯ ಮಾತುಗಳನ್ನಾಡಿದ್ರು.

ಯೂತ್ ಸದ್ಯ ಱಪ್ ಶೈಲಿಯ ಸಾಂಗ್ಸ್‌ನ ಜಾಸ್ತಿ ಇಷ್ಟ ಪಡ್ತಾರೆ. ಹಾಗಾಗಿಯೇ ಱಪರ್ ಆಲ್ ಓಕೆ ಸಾಕಷ್ಟು ಸಾಂಗ್ಸ್ ಹಾಡಿ ರಂಜಿಸಿದ್ರು. ಅದ್ರಲ್ಲೂ ದಾಸವ ಕೀರ್ತನೆಯೊಂದಕ್ಕೆ ಱಪ್ ಟಚ್ ಕೊಟ್ಟಿದ್ದು ಇಂಟರೆಸ್ಟಿಂಗ್.

ಇನ್ನೂ ಬಿಗ್‌ಬಾಸ್ ಖ್ಯಾತಿಯ ನಟಿ ನಮ್ರತಾ ಗೌಡ, ಕಿಚ್ಚು ಸ್ಟೆಪ್ ಹಾಕಿದ್ದ, ಕಿಚ್ಚನ ಮುದ್ದಿನ ಮಗಳು ಸಾನ್ವಿ ಸುದೀಪ್ ಹಾಡಿದ್ದ ಮಸ್ತ್ ಮಲೈಕಾ ಸಾಂಗ್‌ಗೆ ಸುಸ್ತಾಗುವಂತೆ ಕುಣಿದರು.

ಕನಕಪುರದಲ್ಲಿ ಫಾರ್ಮ್ ಹೌಸ್ ಮಾಡಿರೋ ನಟ ಶಿವರಾಜ್‌ಕುಮಾರ್ ಆಲ್ಮೋಸ್ಟ್ ಕನಕಪುರ ನಿವಾಸಿ ಕೂಡ ಹೌದು. ಹಾಗಾಗಿಯೇ ಕನಕಪುರ ಉತ್ಸವದಲ್ಲಿ ಪತ್ನಿ ಗೀತಾ ಶಿವರಾಜ್‌ಕುಮಾರ್ ಸಮೇತ ಭಾಗಿಯಾಗಿ, ಹಾಡು ಹಾಡಿ, ಕುಣಿದು ಜನರನ್ನ ರಂಜಿಸಿದ್ದು ವಿಶೇಷ. ಅಲ್ಲದೆ, ಡಿಕೆ ಬ್ರದರ್ಸ್ ಕುರಿತು, ಅವರ ಕಾರ್ಯವೈಖರಿಗಳನ್ನ ಕೊಂಡಾಡಿದ್ರು.

ಕ್ರೇಜಿಸ್ಟಾರ್ ರವಿಚಂದ್ರನ್ ಡಿಕೆಶಿ ಸ್ಕೂಲ್‌ಮೇಟ್. ಅವರಿಬ್ಬರ ನಡುವೆ ಅದೇ ಸ್ನೇಹ ಸಂಬಂಧವಿದೆ. ಅವರ ಕಷ್ಟ ಕಾಲದಲ್ಲಿ ಅವರಿಗೆ ಸಹಾಯಹಸ್ತ ಚಾಚಿದ್ದರಂತೆ ಡಿಕೆ.

ಒಟ್ಟಾರೆ ಡಿಕೆ ಶಿವಕುಮಾರ್ ಈ ಕನಕೋತ್ಸವದ ಮೂಲಕ ಸದ್ಯದಲ್ಲೇ ತಾನು ಸಿಎಂ ಆಗೇ ಆಗ್ತೀನಿ ಅನ್ನೋ ಸುಳಿವು ನೀಡಿದ್ರು. ತಮ್ಮ ಶಕ್ತಿ, ಸಾಮರ್ಥ್ಯ ಎಂಥದ್ದು ಅನ್ನೋದನ್ನ ಪ್ರದರ್ಶಿಸಿದ್ರು. ಇಂದಿನಿಂದ ಸಿಎಂ ಆಗಿರೋ ಅವರು, ಉತ್ತಮ ಆಡಳಿತ ನೀಡಲಿ. ಚಿತ್ರರಂಗದ ಪರವಾಗಿ ಇರಲಿ ಅನ್ನೋ ಆಶಯದೊಂದಿಗೆ ಅವರಿಗೆ ಶುಭ ಕೋರೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version