ದೊಡ್ಮನೆಯ ಯುವರಾಜ್‌ಕುಮಾರ್ ಎಕ್ಕ ಚಿತ್ರದ ರಿಲೀಸ್‌ಗೂ ಮೊದಲೇ 3ನೇ ಸಿನಿಮಾದ ಮುಹೂರ್ತ ಕಂಡಿತ್ತು. ಅಕ್ಷಯ ತೃತೀಯದಂದು ಸುಕ್ಕಾ ಸೂರಿ ಜೊತೆಗಿನ ಹೊಚ್ಚ ಹೊಸ ಪ್ರಾಜೆಕ್ಟ್‌ಗೆ ದುನಿಯಾ ವಿಜಯ್ ಕ್ಲಾಪ್ ಮಾಡಿದ್ರು. ಆದ್ರೀಗ ಆ ಸಿನಿಮಾ ಸದ್ಯಕ್ಕಿಲ್ಲ ಎನ್ನಲಾಗ್ತಿದೆ. ಹಾಗಾದ್ರೆ ವಾಟ್ ನೆಕ್ಸ್ಟ್ ಯುವ ಅಂದ್ರೆ? ರಾಬರ್ಟ್ ಡೈರೆಕ್ಟರ್ ತರುಣ್ ಹೆಸರು ಕೇಳಿಬರ್ತಿದೆ.
- ಕಾಟೇರ ಸಾರಥಿ ಜೊತೆ ಯುವ.. ಸದ್ಯಕ್ಕಿಲ್ಲ ಸೂರಿ ಪ್ರಾಜೆಕ್ಟ್!
- ಅಕ್ಷಯ ತೃತೀಯಕ್ಕೆ ದುನಿಯಾ ವಿಜಯ್ ಮಾಡಿದ್ರು ಕ್ಲಾಪ್
- ಏಳುಮಲೆ ಸಕ್ಸಸ್ ಖುಷಿಯಲ್ಲಿರೋ ಸೆನ್ಸೇಷನಲ್ ಡೈರೆಕ್ಟರ್
- ತರುಣ್ ಸುಧೀರ್ ಟ್ರ್ಯಾಕ್ ರೆಕಾರ್ಡ್.. 100% ಸಕ್ಸಸ್ ರೇಟ್
ಯುವ, ಎಕ್ಕ.. ಹೀಗೆ ತಮ್ಮ ಕರಿಯರ್‌ನ ಆರಂಭದ ಎರಡು ಸಿನಿಮಾಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ರು ದೊಡ್ಮನೆಯ ಹುಡ್ಗ ಯುವರಾಜ್‌ಕುಮಾರ್. ಅದಾದ ಬಳಿಕ ಮೂರನೇ ಸಿನಿಮಾಗೂ ಚಾಲನೆ ನೀಡಲಾಗಿತ್ತು. ಹೌದು, ಪಿಆರ್‌ಕೆ ಒಡತಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ ಹಾಗೂ ಕೆಆರ್‌ಜಿ ಹೀಗೆ ಎರಡನೇ ಚಿತ್ರ ಮಾಡಿದ ನಿರ್ಮಾಪಕರ ತಂಡವೇ ನ್ಯೂ ಮೂವಿ ಅನೌನ್ಸ್ ಮಾಡಿತ್ತು.
ಸುಕ್ಕಾ ಸೂರಿ ನಿರ್ದೇಶನದ ಆ ಹೊಚ್ಚ ಹೊಸ ಸಿನಿಮಾ, ಅಕ್ಷಯ ತೃತೀಯದ ಶುಭದಿನದಂದು ಸೆಟ್ಟೇರಿತ್ತು. ಶೇಷಾದ್ರಿಪುರಂನಲ್ಲಿರೋ ಸುಬ್ರಮಣ್ಯಸ್ವಾಮಿ ಆಲಯದಲ್ಲಿ ಮುಹೂರ್ತ ಕಂಡ ಆ ಚಿತ್ರಕ್ಕೆ ದುನಿಯಾ ವಿಜಯ್ ಮಗಳು ರಿತನ್ಯಾ ನಾಯಕನಟಿ ಆದ್ದರಿಂದ ಸ್ವತಃ ದುನಿಯಾ ವಿಜಯ್ ಅವರೇ ಬಂದು ಕ್ಲಾಪ್ ಮಾಡಿದ್ರು. ಆದ್ರೀಗ ಕಾರಣಾಂತಗಳಿಂದ ಆ ಚಿತ್ರ ನಿಂತಿದೆ ಎನ್ನಲಾಗ್ತಿದೆ. ಹಾಗಾದ್ರೆ ವಾಟ್ ನೆಕ್ಸ್ಟ್ ಯುವ ಅಂತಿದ್ದಾರೆ ಫ್ಯಾನ್ಸ್ ಹಾಗೂ ಚಿತ್ರಪ್ರೇಮಿಗಳು.
ಅದಕ್ಕೀಗ ಗ್ಯಾರಂಟಿ ಪಿಚ್ಚರ್ ಬಳಿ ಅಧಿಕೃತ ಮಾಹಿತಿ ಇದ್ದು, ಸದ್ಯ ಯುವರಾಜ್‌ಕುಮಾರ್‌ಗೆ ಸೆನ್ಸೇಷನಲ್ ಡೈರೆಕ್ಟರ್ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ. ಹೌದು, ಚೌಕ, ರಾಬರ್ಟ್ ಹಾಗೂ ಕಾಟೇರ ಹೀಗೆ ಹ್ಯಾಟ್ರಿಕ್ ಹಿಟ್ ಸಿನಿಮಾಗಳಿಂದ ತಮ್ಮ ನಿರ್ದೇಶನದ ತಾಕತ್ತು ಪ್ರದರ್ಶಿಸಿರೋ ತರುಣ್, ಅದ್ಭುತ ಫಿಲ್ಮ್ ಮೇಕರ್ ಅಂತ ಪ್ರೂವ್ ಮಾಡಿಕೊಂಡಿದ್ದಾರೆ. ದರ್ಶನ್‌ಗೆ ಬ್ಯಾಕ್ ಟು ಬ್ಯಾಕ್ ಎರಡು ಹಂಡ್ರೆಡ್ ಕ್ರೋರ್ ಸಿನಿಮಾಗಳನ್ನ ನೀಡಿದ ತರುಣ್, ಮುಂದಿನ ಚಿತ್ರವನ್ನು ಯುವರಾಜ್ ಜೊತೆ ಮಾಡಲಿದ್ದಾರಂತೆ.
ನಿರ್ಮಾಣದ ವಿಷಯದಲ್ಲೂ ಗಟ್ಟಿ ಕಥೆಗಳ ಮೂಲಕ ಕ್ವಾಲಿಟಿ ಚಿತ್ರಗಳನ್ನ ನೀಡುವ ಮೇಕರ್ ಅನ್ನೋದನ್ನ ತರುಣ್ ಜನಕ್ಕೆ ಮನದಟ್ಟು ಮಾಡಿದ್ದಾರೆ. ಗುರು ಶಿಷ್ಯರು ಚಿತ್ರದ ನಂತ್ರ ಇದೀಗ ಏಳುಮಲೆಗೆ ಎಲ್ಲೆಡೆಯಿಂದ ಅದ್ಭುತ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ಹರಿದುಬರ್ತಿವೆ. ಏಳುಮಲೆ ಸಕ್ಸಸ್ ಅಲೆಯಲ್ಲಿರೋ ತರುಣ್, ದೊಡ್ಮನೆ ಹುಡ್ಗಗೆ ಸಿನಿಮಾ ಮಾಡ್ತಾರೆ ಅನ್ನೋದು ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ.
ತರುಣ್ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ ಹಂಡ್ರೆಡ್ ಪರ್ಸೆಂಟ್ ಸಕ್ಸಸ್ ರೇಟ್ ಇದೆ. ಇನ್ನು ಯುವ ಕೂಡ ಚೊಚ್ಚಲ ಚಿತ್ರ ಯುವದಲ್ಲಿ ಅಷ್ಟಾಗಿ ಮಾಗಿರಲಿಲ್ಲ. ಇದೀಗ ಎಕ್ಕ ಚಿತ್ರದ ವೇಳೆಗೆ ನಟನೆಯಲ್ಲಿ ಪಕ್ವತೆ ಕಾಣ್ತಿದೆ. ಯುವ ಮಾಸ್ ಹೀರೋ ಆಗಿ ನಿಲ್ಲಬಲ್ಲ ಎಫಿಶಿಯೆನ್ಸಿ ಇರೋ ಕಲಾವಿದ ಆಗಿದ್ದು, ತರುಣ್ ಅಂತಹ ಡೈರೆಕ್ಟರ್ ಸಿಗ್ತಿರೋದು, ಅವರ ಕರಿಯರ್‌ಗೆ ಮತ್ತಷ್ಟು ಪ್ಲಸ್ ಆಗಲಿದೆ.





