ರಾಕಿಂಗ್ ಸ್ಟಾರ್ ಯಶ್ ಅವ್ರನ್ನ ಕಿಂಗ್ ಆಫ್ ಸ್ಯಾಂಡಲ್‌ವುಡ್ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಸ್ಯಾಂಡಲ್‌ವುಡ್‌ಗೆ ನ್ಯಾಷನಲ್ ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ವೇದಿಕೆ ಮಾಡಿಸಿಕೊಟ್ಟವರು ಯಶ್. ಬರ್ತ್ ಡೇಗೆ ಇನ್ನೊಂದೇ ದಿನ ಬಾಕಿ ಇದ್ದು, ರಾಜ್ಯದ ಮೂಲೆ ಮೂಲೆಗಳಲ್ಲಿ ರಾರಾಜಿಸ್ತಿವೆ ಎಲ್‌ಇಡಿ ಹಾಗೂ ಹೋರ್ಡಿಂಗ್ಸ್. ಅಷ್ಟೇ ಅಲ್ಲ, ಕನ್ನಡದಿಂದಲೇ ಹಾಲಿವುಡ್ ಸ್ಟ್ಯಾಂಡರ್ಡ್ ಟಾಕ್ಸಿಕ್ ಮೂವಿ ಸೃಷ್ಠಿಸಿರೋ ರಾಕಿಭಾಯ್, ಟಾಕ್ಸಿಕ್ ವರ್ಲ್ಡ್‌ನ ರಾ ಕಿಂಗ್ ಆಗಿ ರಾರಾಜಿಸಲಿದ್ದಾರೆ.
ಟಾಕ್ಸಿಕ್..ಭಾರತೀಯ ಚಿತ್ರರಂಗದ ಈ ವರ್ಷದ ಬಿಗ್ಗೆಸ್ಟ್ ವೆಂಚರ್. ಅಷ್ಟೇ ಅಲ್ಲ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಕೂಡ ಹೌದು. ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಕಥೆ ಬರೆದು, ಲೀಡ್‌ನಲ್ಲಿ ನಟಿಸಿ, ನಿರ್ಮಾಣ ಕೂಡ ಮಾಡ್ತಿರೋ ಸಿನಿಮಾ. ಕೆಜಿಎಫ್ ಚಿತ್ರಗಳಿಂದ ಕನ್ನಡ ಚಿತ್ರರಂಗಕ್ಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನ ಪರಿಚಯಿಸಿದ್ದ ರಾಕಿಭಾಯ್, ಈ ಹಿಂದೆ ಪ್ರಾಮಿಸ್ ಮಾಡಿದಂತೆ ಕನ್ನಡದಿಂದಲೇ ಟಾಕ್ಸಿಕ್ ಅನ್ನೋ ಹಾಲಿವುಡ್ ಮೂವಿಯನ್ನ ತಯಾರಿಸಿದ್ದಾರೆ.

ಧುರಂಧರ್‌ಗೆ ಟಕ್ಕರ್..2500 ಹಿಂದಿ ಸ್ಕ್ರೀನ್ಸ್‌ಗೆ ಟಾಕ್ಸಿಕ್
ರಾಕಿಂಗ್ ಪ್ರಾಮಿಸ್..ಕನ್ನಡದಿಂದ್ಲೇ ಹಾಲಿವುಡ್ ಮೂವಿ

ನ್ಯಾಷನಲ್ ಅವಾರ್ಡ್ ವಿನ್ನರ್ ಡೈರೆಕ್ಟರ್ ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಯಶ್ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೂಡಿ ಮಾಡ್ತಿರೋ ಸಿನಿಮಾ ಟಾಕ್ಸಿಕ್. ಈ ಸಿನಿಮಾ ಇದೇ ಮಾರ್ಚ್ 19ಕ್ಕೆ ವರ್ಲ್ಡ್‌ವೈಡ್ ಥಿಯೇಟರ್‌ಗೆ ಎಂಟ್ರಿ ಕೊಡಲಿದೆ. ಆದ್ರೆ ಅಂದು ಬಾಲಿವುಡ್‌ನ ಲೇಟೆಸ್ಟ್ ಸೆನ್ಸೇಷನಲ್ ಬ್ಲಾಕ್‌ಬಸ್ಟರ್ ಧುರಂಧರ್ ಚಿತ್ರದ ಸೀಕ್ವೆಲ್ ಬರ್ತಿದೆ. ಹೌದು.. 2025ರಲ್ಲಿ ತೆರೆಕಂಡ ರಣ್‌ವೀರ್ ಸಿಂಗ್ ನಟನೆಯ ಧುರಂಧರ್ ಇಂದಿಗೂ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸ್ತಿದೆ. 1215 ಕೋಟಿ ಗಳಿಸಿರೋ ಚಿತ್ರ, ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ.

ಅಂತಹ ಬಿಗ್ಗೆಸ್ಟ್ ಹಿಟ್ ಮೂವಿಯ ಸೀಕ್ವೆಲ್ ಧುರಂಧರ್-2 ಎದುರು ಟಾಕ್ಸಿಕ್ ಬರ್ತಿದೆ ಅಂದ್ರೆ ಯಶ್ ಅವ್ರ ಕಾನ್ಫಿಡೆನ್ಸ್ ಲೆವೆಲ್ ಮೆಚ್ಚಲೇಬೇಕು. ಯಾಕಂದ್ರೆ ಯಶ್ ಮಾಡಿರೋ ಪ್ರಾಡಕ್ಟ್ ಮೇಲೆ ಅವರಿಗೆ ಬಲವಾದ ನಂಬಿಕೆ ಇದೆ. ಸದ್ಯ ಬಿಟೌನ್‌ನಲ್ಲಿ ಇಂಡಿಯನ್ ಸಿನಿದುನಿಯಾದ ಹಿಸ್ಟರಿಯಲ್ಲೇ ಟಾಕ್ಸಿಕ್ ಅಂತಹ ಮೇಕಿಂಗ್‌ನ ಯಾರೂ ಮಾಡಿಲ್ಲ ಅನ್ನೋ ಮಾತುಗಳು ಶುರುವಾಗಿವೆ. ಅದನ್ನ ಹುಮಾ ಖುರೇಷಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ರು.

ಯಶ್ ಗೆಳೆಯರಿಂದ 200 LED..100 ಹೋರ್ಡಿಂಗ್ಸ್..!
ಜ-8ಕ್ಕೆ ಟೀಸರ್..ಜಗಮಗಿಸುತ್ತೆ ಟಾಕ್ಸಿಕ್ ಪ್ರೀ- ಇವೆಂಟ್
ರಾಕಿಂಗ್ ಸ್ಟಾರ್ ಯಶ್ ಅವರ ಬರ್ತ್ ಡೇ ಟೀಸರ್ ಬಿಟ್ರೆ ಇಲ್ಲಿಯವರೆಗೂ ಏನೂ ಕಂಟೆಂಟ್ ರಿವೀಲ್ ಆಗಿರಲಿಲ್ಲ. ಆದ್ರೀಗ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗ್ತಿದ್ದಂತೆ ಚಿತ್ರದ ಒಂದೊಂದೇ ಕ್ಯಾರೆಕ್ಟರ್‌ಗಳು ರಿವೀಲ್ ಆಗ್ತಾ ಬರ್ತಿವೆ. ಗಂಗಾ ಪಾತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ, ನದಿಯಾ ರೋಲ್‌ನಲ್ಲಿ ಕಿಯಾರಾ ಅಡ್ವಾಣಿ, ರೆಬೆಕಾ ಆಗಿ ತಾರಾ ಸುತಾರಿಯಾ, ಕ್ವೀನ್ ಎಲಿಜಬೆತ್ ಆಗಿ ಹುಮಾ ಖುರೇಷಿ, ಮೆಲಿಸ್ಸಾ ಪಾತ್ರದಲ್ಲಿ ನಮ್ಮ ಕನ್ನಡದ ರುಕ್ಮಿಣಿ ವಸಂತ್ ಫಸ್ಟ್‌ಲುಕ್‌ಗಳು ಇಲ್ಲಿಯ ತನಕ ರಿವೀಲ್ ಆಗಿವೆ. ಆ ಪೋಸ್ಟರ್‌ಗಳೇ ಒಂದೊಂದು ಕಥೆ ಹೇಳ್ತಿರೋದು ಇಂಟರೆಸ್ಟಿಂಗ್.

ಅಂದಹಾಗೆ ಜನವರಿ 8ಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ. ತಮ್ಮ ನೆಚ್ಚಿನ ನಟ ಯಶ್ ಬರ್ತ್ ಡೇನ ತುಂಬಾ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡೋಣ ಅಂತ ಫ್ಯಾನ್ಸ್ ಬಹಳ ದಿನಗಳಿಂದ ಕಾತರರಾಗಿದ್ದರು. ಕೆಜಿಎಫ್ ಚಾಪ್ಟರ್-1 ಬಳಿಕ ನಾಯಂಡಹಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಪ್ಯಾನ್ ಇಂಡಿಯಾ ಫ್ಯಾನ್ಸ್‌ನ ಭೇಟಿ ಆಗಿದ್ರು. ಕೇಕ್ ಕತ್ತರಿಸಿ ಅವ್ರ ಖುಷಿಯಲ್ಲಿ ಭಾಗಿಯಾಗಿ, ಆ ಅಭಿಮಾನವನ್ನ ಸ್ವೀಕರಿಸಿದ್ರು ಯಶ್. ಆದ್ರೀಗ ಈ ವರ್ಷ ಟಾಕ್ಸಿಕ್ ಚಿತ್ರದ ಕೆಲಸಗಳ ಒತ್ತಡದಿಂದಾಗಿ ಅಭಿಮಾನಿಗಳನ್ನ ಭೇಟಿ ಆಗ್ತಿಲ್ಲ ರಾಕಿಭಾಯ್.
ಜನವರಿ 8ರಂದು ನಟ ಯಶ್ ಬರ್ತ್ ಡೇ ಸೆಲೆಬ್ರೇಷನ್ ಫ್ಯಾನ್ಸ್ ಜೊತೆ ನಡೆಯುತ್ತಿಲ್ಲ. ಬದಲಿಗೆ ಟಾಕ್ಸಿಕ್ ವರ್ಲ್ಡ್‌ನ ಪರಿಚಯಿಸೋ ಒಂದು ಟೀಸರ್ ಝಲಕ್ ಬಿಡುಗಡೆ ಆಗಲಿದೆ. ಆದ್ರೆ ಮಾರ್ಚ್ 19ಕ್ಕೆ ಟಾಕ್ಸಿಕ್ ತೆರೆಗಪ್ಪಳಿಸೋಕೂ ಮೊದಲೇ ಒಂದು ಗ್ರ್ಯಾಂಡ್ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ. ಅದು ನಮ್ಮ ಬೆಂಗಳೂರಿನಲ್ಲೇ ನಡೆಯಲಿದ್ದು, ಇಡೀ ಟಾಕ್ಸಿಕ್ ಚಿತ್ರತಂಡ ವೇದಿಕೆ ಮೇಲೆ ಉಪಸ್ಥಿತಿ ಇರಲಿದೆ.

ಆದ್ರೀಗ ಚಕ್ಲಿ ಚೇತನ್ ಹಾಗೂ ಯಶ್ ಅವರ ಆಪ್ತ ಗೆಳೆಯರ ಬಳಗದಿಂದ ಕರುನಾಡಿನ ಮೂಲೆ ಮೂಲೆಗಳಲ್ಲಿ ರಾಕಿಭಾಯ್ ಜನುಮ ದಿನಕ್ಕೆ ಶುಭ ಕೋರುವ 200ಕ್ಕೂ ಅಧಿಕ ಎಲ್‌ಇಡಿ, 100ಕ್ಕೂ ಅಧಿಕ ದೊಡ್ಡ ಹೋರ್ಡಿಂಗ್ಸ್ ಹಾಕಿಸಲಾಗಿದೆ. ಮುಂಗಾರುಮಳೆ ಖ್ಯಾತಿಯ ಈ ಕೃಷ್ಣಪ್ಪ ಅವರು ಕೂಡ ಸಾಕಷ್ಟು ಫ್ಲೆಕ್ಸ್ ಹಾಕಿಸಿದ್ದು, ಇದು ಬರೀ ಯಶ್ ಅವ್ರ ಆಪ್ತ ವಲಯವಷ್ಟೇ. ಇನ್ನು ರಾಕಿಂಗ್ ಸ್ಟಾರ್ ಫ್ಯಾನ್ಸ್ ಪ್ರತಿ ಜಿಲ್ಲೆಗಳಲ್ಲೂ ಯಶ್ ಬರ್ತ್ ಡೇನ ಹಬ್ಬದಂತೆ ಸೆಲೆಬ್ರೇಟ್ ಮಾಡಲಿದ್ದಾರೆ.
ಒಟ್ಟಾರೆ ಹಾಲಿವುಡ್ ಮಂದಿ ಕೂಡ ಹುಬ್ಬೇರಿಸೋ ನೋಡುವಂತಹ ಮೇಕಿಂಗ್, ಕಥೆ, ಪಾತ್ರಗಳಿಂದ ಟಾಕ್ಸಿಕ್ ಸಿನಿಮಾನ ಕಟ್ಟಿದ್ದಾರೆ ಯಶ್. ಅಲ್ಲಿಂದಲೇ ಎಲ್ಲಾ ತಂತ್ರಜ್ಞರನ್ನ ಕರೆಸಿ ಸಿನಿಮಾ ಮಾಡಿದ್ದಾರೆ. ಇದು ಕನ್ನಡದ ಜೊತೆ ಇಂಗ್ಲಿಷ್‌ನಲ್ಲೂ ಏಕಕಾಲದಲ್ಲಿ ತಯಾರಾಗಿದ್ದು, ಉಳಿದಂತೆ ವಿಶ್ವದ ಪ್ರಮುಖ ಭಾಷೆಗಳಿಗೆ ವಾಯ್ಸ್ ಡಬ್ ಆಗಿ ಬೆಳ್ಳಿತೆರೆ ಬೆಳಗಲಿದೆ. ಕನ್ನಡದಿಗರು ಕೂಡ 1250 ಕೋಟಿ ಬ್ಯುಸಿನೆಸ್ ಮಾಡಬಹುದು ಅನ್ನೋದನ್ನ ತೋರಿಸಿಕೊಟ್ಟಿದ್ದ ರಾಕಿಭಾಯ್, ಈ ಬಾರಿ ವರ್ಲ್ಡ್ ಈಸ್ ಮೈ ಟೆರಿಟರಿ ಅಂತ ಬರ್ತಿರೋದು ರೋಮಾಂಚಕ ವಿಷಯ.





