ಇಷ್ಟು ದಿನ ಟ್ರೆಂಡ್ ಮಾಸ್ಟರ್ ಆಗಿದ್ದ ರಾಕಿಭಾಯ್ ಯಶ್, ಇದೀಗ ಈಗ ಟ್ರೇಡ್‌ಗೆ ಕೇರ್ ಆಫ್ ಅಡ್ರೆಸ್ ಆಗಿದ್ದಾರೆ. ಹಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ನಿದ್ದೆ ಕೆಡುವಂತೆ ಮಾಡ್ತಿದ್ದಾರೆ ನಮ್ಮ ಹೆಮ್ಮೆಯ ಕನ್ನಡಿಗ. ಟಾಕ್ಸಿಕ್ ಆಂಧ್ರ-ತೆಲಂಗಾಣ ರೈಟ್ಸ್ ಬಳಿಕ ಓವರ್‌ಸೀಸ್ ರೈಟ್ಸ್ ಕೂಡ ಸೋಲ್ಡ್ ಔಟ್ ಆಗಿದೆ. ಎಷ್ಟು ಕೋಟಿಗೆ ಮಾರಾಟವಾಯ್ತು ಅಂತ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ.
ಅಣ್ತಮ್ಮಾ ಇಲ್ಲಿ ಯಾರನ್ನ ಯಾರೂ ಹೀರೋ ಮಾಡಲ್ಲ. ನಮಗೆ ನಾವೇ ಹೀರೋ ಆಗ್ಬೇಕು ಅನ್ನೋ ಮಾತು ಹೇಳಿದ್ದ ರಾಕಿಂಗ್ ಸ್ಟಾರ್ ಯಶ್, ಅದ್ರಂತೆ ಬಹುದೊಡ್ಡ ಸೂಪರ್ ಸ್ಟಾರ್ ಆಗಿ ನಿಂತಿದ್ದಾರೆ. ಯಾವುದೇ ಗಾಡ್‌ಫಾದರ್ ಇಲ್ಲದೆ, ಸಿನಿಮಾ ಬ್ಯಾಗ್ರೌಂಡ್ ಇಲ್ಲದೆ, ಹಣ, ಇನ್‌ಫ್ಲುಯೆನ್ಸ್ ಇಲ್ಲದೆ ಸ್ವಂತ ಟ್ಯಾಲೆಂಟ್‌ನಿಂದ ಕೋಟೆ ಕಟ್ಟಿದವರು ಯಶ್. ಇವ್ರು ಅದೆಷ್ಟೋ ಮಂದಿ ಸಿನಿಮೋತ್ಸಾಹಿಗಳಿಗೆ ರೋಲ್ ಮಾಡೆಲ್. ಯಾಕಂದ್ರೆ ಸೆಲ್ಫ್ ಮೇಡ್ ಶಹಜಾದ. ಸ್ವಂತಿಕೆಯಿಂದ ಮೇಲೆ ಬಂದವ್ರಿಗೆ ಸ್ವಾಭಿಮಾನ ಕೂಡ ಕೊಂಚ ಜಾಸ್ತಿ.

ಓ ಮೈ ಗಾಡ್..105 ಕೋಟಿಗೆ ಟಾಕ್ಸಿಕ್ ಓವರ್‌ಸೀಸ್ ರೈಟ್ಸ್
ಸಲಾಂ ‘ರಾಯ’..ನೀವು ಸ್ಯಾಂಡಲ್‌ವುಡ್ ಕಾಯೋ ದೈವ..!

ಟಾಕ್ಸಿಕ್ ಚಿತ್ರದಿಂದ ಹಾಲಿವುಡ್ ಮಂದಿಯ ನಿದ್ದೆ ಕೆಡುವಂತೆ ಮಾಡ್ತಿರೋ ಯಶ್, ಅಕ್ಷರಶಃ ಕನ್ನಡದಿಂದಲೇ ಹಾಲಿವುಡ್ ಶೈಲಿಯ ಸಿನಿಮಾ ತಯಾರಿಸಿದ್ದಾರೆ. ರಾಯನಾಗಿ ಅಬ್ಬರಿಸಿ, ಆರ್ಭಟಿಸುತ್ತಿರೋ ಯಶ್ ನಮ್ಮ ಕನ್ನಡ ಚಿತ್ರರಂಗ ಕಾಯುವ ದೈವ ಅನಿಸಿಕೊಳ್ತಿದ್ದಾರೆ. ಸಿಂಗಲ್ ಟೀಸರ್ ಇಡೀ ವಿಶ್ವ ಸಿನಿದುನಿಯಾ ಪತರಗುಟ್ಟುವಂತೆ ಮಾಡಿದೆ. ಅದು ಯಶ್ ಅನ್ನೋ ಬ್ರ್ಯಾಂಡ್‌ಗಿರೋ ವ್ಯಾಲ್ಯೂ. ಅವ್ರ ಸ್ವ್ಯಾಗ್, ಖದರ್, ನಟನಾ ಗಮ್ಮತ್ತಿಗೆ ಸೋಲದವರೇ ಇಲ್ಲ.
ಸಾಮಾನ್ಯವಾಗಿ ಸ್ಟಾರ್‌ಗಳು ತಮ್ಮ ಜೀವಮಾನದಲ್ಲಿ ಒಂದು ನೂರು ಕೋಟಿ ರೂಪಾಯಿ ಬಜೆಟ್ ಸಿನಿಮಾ ಮಾಡ್ಬೇಕು ಅನ್ನೋ ಕನಸಿರುತ್ತೆ. ಅಷ್ಟೇ ಯಾಕೆ..? ತಾವು ಮಾಡಿದ ಯಾವುದಾದರು ಒಂದು ಚಿತ್ರ ನೂರು ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಗಳಿಸಿದ್ರೆ ತಮ್ಮ ಜೀವನ ಪಾವನ ಆಗುತ್ತೆ ಅಂದುಕೊಳ್ತಾರೆ. ಆದ್ರೆ ಇಲ್ಲೊಬ್ಬ ತನ್ನ ಸಿನಿಮಾದ ವಿದೇಶಿ ಡಿಸ್ಟ್ರಿಬ್ಯೂಷನ್ ರೈಟ್ಸ್‌ನ ಬರೋಬ್ಬರಿ 105 ಕೋಟಿಗೆ ಡೀಲ್ ಕುದುರಿಸಿದ್ದಾನೆ. ಅದು ಬೇರಾರೂ ಅಲ್ಲ, ಒನ್ ಅಂಡ್ ಓನ್ಲಿ ರಾಕಿಂಗ್ ಸ್ಟಾರ್ ಯಶ್.

100 ಕೋಟಿ ಸಿನಿಮಾ ಮಾಡೋದು ಸ್ಟಾರ್ಸ್‌ಗೆ ಬಿಗ್ ಡ್ರೀಮ್
ಫಾರಿನ್ ಡಿಸ್ಟ್ರಿಬ್ಯೂಷನ್ 105Cr ಡೀಲ್ ಕುದುರಿಸಿದ ಯಶ್..!
ಇತ್ತೀಚೆಗೆ ಆಂಧ್ರ ಹಾಗೂ ತೆಲಂಗಾಣ ಟಾಕ್ಸಿಕ್ ಡಿಸ್ಟ್ರಿಬ್ಯೂಷನ್ ರೈಟ್ಸ್‌ನ 120 ಕೋಟಿ ಬೃಹತ್ ಮೊತ್ತಕ್ಕೆ ಸೋಲ್ಡ್ ಔಟ್ ಮಾಡಲಾಗಿತ್ತು. ಆದ್ರೀಗ ಓವರ್‌ಸೀಸ್ ಹಕ್ಕುಗಳನ್ನ ಪ್ರತಿಷ್ಠಿತ PHF ಬ್ಯಾನರ್ ತನ್ನದಾಗಿಸಿಕೊಂಡಿದೆ. ಅದೂ 105 ಕೋಟಿ ದಾಖಲೆ ಮೊತ್ತಕ್ಕೆ ಅನ್ನೋದು ಎಲ್ಲರ ಹುಬ್ಬೇರಿಸಿದೆ. ಅಂದಹಾಗೆ ಟಾಕ್ಸಿಕ್ ವಿದೇಶಿ ವಿತರಣಾ ಹಕ್ಕುಗಳು ಬರೀ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯದ್ದು ಮಾತ್ರ ಇಷ್ಟು ಬೃಹತ್ ಮೊತ್ತಕ್ಕೆ ಮಾರಾಟವಾಗಿದೆ. ಇಂಗ್ಲಿಷ್ ವರ್ಷನ್ ಟಾಕ್ಸಿಕ್ ವಿತರಣಾ ಹಕ್ಕುಗಳು ಇನ್ನೂ ಮಾತುಕತೆ ಹಂತದಲ್ಲಿದೆ.
ಯಶ್ ನಿಜಕ್ಕೂ ಯಶಸ್ಸಿಗೆ ಕೇರ್ ಆಫ್ ಅಡ್ರೆಸ್ ಅನ್ನೋದು ಈ ಬೆಳವಣಿಗೆಯಿಂದ ಗೊತ್ತಾಗ್ತಿದೆ. ಸುಮಾರು 600 ಕೋಟಿ ಬಜೆಟ್ ಹಾಕಿ ತಯಾರಿಸಿರೋ ಟಾಕ್ಸಿಕ್, ಪ್ರೀ ರಿಲೀಸ್ ಬ್ಯುಸಿನೆಸ್‌ನಿಂದಲೇ 620ಕೋಟಿ ಗಳಿಸಲಿದೆ ಅಂತ ಅಂದಾಜಿಸಲಾಗಿದೆ. ಈಗಾಗ್ಲೇ 225 ಕೋಟಿ ಬ್ಯುಸಿನೆಸ್ ಮಾಡಿರೋ ಟಾಕ್ಸಿಕ್, ಬಾಕ್ಸ್ ಆಫೀಸ್ ಪಾಲಿಗೆ ನಿಜಕ್ಕೂ ಸುನಾಮಿ ಸುಂಟರಗಾಳಿಯಾಗೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಮಾರ್ಚ್ 19ರ ನಂತ್ರ ಯಶ್ ವರ್ಲ್ಡ್ ಈಸ್ ಮೈ ಟೆರಿಟರಿ ಅನ್ನೋದು ಗ್ಯಾರಂಟಿ.





