ಶೋಕಸಾಗರದಲ್ಲಿರೋ ಹರೀಶ್ ಕುಟುಂಬಕ್ಕೆ ಯಶ್, ಧ್ರುವ ಸರ್ಜಾ ಆಸರೆ ಆಗಿದ್ದಾರೆ. ಆರ್ಥಿಕ ನೆರವಿನ ಜೊತೆ ಮಾನಸಿಕ ಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ಕೊಹ್ಲಿಯಂತೆ ದೊಡ್ಡ ಕ್ರಿಕೆಟರ್ ಆಗುವ ಕನಸು ಕಂಡಿರೋ ಹರೀಶ್ ಮಗನನ್ನ ಯಶ್ ಮುಡಿಗೆ ಹಾಕಿದ ರಾಯ್ ಪತ್ನಿ ಹೇಳಿದ್ದೇನು..? ಅಪ್ಪನ ಅಗಲಿಕೆಯ ನೋವಲ್ಲಿ ರಾಯ್ ಮಗನ ಶಪಥ ಏನಾಗಿತ್ತು..? ರಾಕಿಂಗ್ ಸ್ಟಾರ್ ಮಾಡಿದ್ದೇನು ಅಂತೀರಾ..? ಇಲ್ಲಿದೆ ನೋಡಿ.
- ಹರೀಶ್ ರಾಯ್ ನಿಧನ.. ಮಿಡಿದ ಯಶ್-ಧ್ರುವ ಹೃದಯ
- ಮನೆಯಲ್ಲಿ ಸೂತಕದ ಛಾಯೆ.. ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು..!!
- ಇಬ್ರು ಮಕ್ಕಳ ಕೈಗಳನ್ನ ಯಶ್ ಕೈಗಿಟ್ಟ ಹರೀಶ್ ರಾಯ್ ಪತ್ನಿ
- ಶೂಟಿಂಗ್ ಬಿಟ್ಟು ದಿಢೀರ್ ಅಂತ ಓಡೋಡಿ ಬಂದ ಯಶ್
ಯೆಸ್.. ಜವರಾಯನ ದರ್ಪಕ್ಕೆ ಇನ್ನಿಲ್ಲವಾದ ಹರೀಶ್ ರಾಯ್‌ಗಾಗಿ ಇಡೀ ಚಿತ್ರರಂಗ ಕಂಬನಿ ಮಿಡಿಯುತ್ತೆ. ಚಿತ್ರರಂಗದ ಸಾಕಷ್ಟು ಮಂದಿ ಸ್ಟಾರ್‌ಗಳು, ತಂತ್ರಜ್ಞರು ಹಾಗೂ ಹರೀಶ್ ರಾಯ್ ಸಹ ಕಲಾವಿದರು ಬಂದು ಅಂತಿಮ ದರ್ಶನ ಪಡೆಯುತ್ತಾರೆ. ಕಿದ್ವಾಯಿ ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನ ಬೆಂಗಳೂರಿನಲ್ಲಿದ್ದ ಹರೀಶ್ ರಾಯ್‌ರ ಅಂಜನಾಪುರದ ನಿವಾಸಕ್ಕೆ ಕೊಂಡೊಯ್ಯಲಾಗುತ್ತೆ.
ಚಿತ್ರರಂಗ ಒಬ್ಬ ಅದ್ಭುತ ಕಲಾವಿದನನ್ನ ಕಳೆದುಕೊಳ್ಳುತ್ತೆ. ಆದ್ರೆ ಹರೀಶ್ ರಾಯ್ ಕುಟುಂಬಕ್ಕೆ ಅವರೊಬ್ಬರೇ ಆಧಾರಸ್ತಂಭ ಆಗಿರ್ತಾರೆ. ಪತ್ನಿ ಹಾಗೂ ಇನ್ನೂ ಓದು ಮುಗಿಯದ ಒಬ್ಬರು ಗಂಡು ಮಕ್ಕಳ ಜವಾಬ್ದಾರಿ ಇವರ ಮೇಲೆಯೇ ಇತ್ತು. ಆದ್ರೆ ಯಾವಾಗ ಕ್ಯಾನ್ಸರ್‌ಗೆ ತುತ್ತಾದರೋ ಆಗ ಮನೆಯ ಜವಾಬ್ದಾರಿ ಜೊತೆ ತನ್ನ ಆಸ್ಪತ್ರೆ ಖರ್ಚು ವೆಚ್ಚುಗಳು ಮತ್ತಷ್ಟು ಭಾರವಾಗಿದ್ದವು. ಆದಾಗ್ಯೂ ಕೂಡ ಜೀವನ ಸಾಗಿಸ್ತಿದ್ದ ಹರೀಶ್ ರಾಯ್ ಕುಟುಂಬಕ್ಕೆ ಈಗ ಅಕ್ಷರಶಃ ಬರಸಿಡಿಲು ಬಡಿದಂತಾಗಿದೆ.
ಮನೆಯ ಯಜಮಾನನನ್ನು ಕಳೆದುಕೊಂಡ ಪತ್ನಿಗೆ ದಿಕ್ಕು ತೋಚದಂತಾಗಿದೆ. ಇತ್ತ ಅಪ್ಪನೇ ಪ್ರಪಂಚ ಅಂದುಕೊಂಡಿದ್ದ ಮಕ್ಕಳಿಗೆ ಮುಂದೇನು ಮಾಡಬೇಕು ಅನ್ನೋದ್ರ ಅರಿವಿಲ್ಲದಂತಾಗಿದೆ. ಹೀಗಿರುವಾಗ ಅವ್ರ ಕುಟುಂಬಕ್ಕೆ ಆಸರೆ ಆಗ್ತಿರೋದು ರಾಕಿಂಗ್ ಸ್ಟಾರ್ ಯಶ್ ಅಂದ್ರೆ ತಪ್ಪಾಗಲ್ಲ. ಹೌದು.. ಕೆಜಿಎಫ್ ಸಿನಿಮಾದಲ್ಲಿ ಮುಂಬೈ ಸೇರಿದ್ದ ರಾಕಿಗೆ ಆಸೆಯಾಗಿದ್ರು ಚಾಚಾ ಪಾತ್ರಧಾರಿ ಹರೀಶ್ ರಾಯ್. ಅಂದು ಅದು ಸಿನಿಮಾ ಆದ್ರೂ, ಇಂದು ಅಕ್ಷರಶಃ ಚಾಚಾ ಹರೀಶ್ ರಾಯ್ ಕುಟುಂಬದಲ್ಲಿ ಯಶ್ ಭರವಸೆಯ ಆಶಾಕಿರಣ ಮೂಡಿಸಿದ್ದಾರೆ.





