ರಾಮಾಯಣ ಸಿನಿಮಾಗೆ ಸಂಭಾವನೆ ತಗೊಳ್ಳದೇನೇ ಲಂಕೇಶ್ವರನ ಪಾತ್ರಕ್ಕೆ ಜೀವ ತುಂಬಿದ್ದಾರಂತೆ ರಾಕಿಂಗ್ ಸ್ಟಾರ್ ಯಶ್. ಅರೇ ನೂರಾರು ಕೋಟಿ ರೆಮ್ಯುನರೇಷನ್ ಪಡೆಯೋ ರಾಕಿಭಾಯ್ ಫ್ರೀ ಆಗಿ ಮಾಡಿದ್ದಾದ್ರೂ ಏಕೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಇದ್ದೇ ಇರುತ್ತೆ. ಅದಕ್ಕೆ ಹುಬ್ಬೇರಿಸೋ ಅಂತಹ ಉತ್ತರ ನಿಮಗಾಗಿ ಕಾಯ್ತಿದೆ.
ಸಂಭಾವನೆ ಪಡೆಯದೆ ರಾಮಾಯಣದಲ್ಲಿ ನಟಿಸಿದ್ಯಾಕೆ ಯಶ್?
ನೂರಾರು ಕೋಟಿ ರೆಮ್ಯುನರೇಷನ್ ಕೈ ಬಿಟ್ರಾ ರಾಕಿಂಗ್ ಸ್ಟಾರ್?
ಟಾಕ್ಸಿಕ್ ಬೆನ್ನಲ್ಲೇ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ನಟನೆಯ ರಾಮಾಯಣ ಚಿತ್ರ ಸಖತ್ ಸಂಚಲನ ಮೂಡಿಸುತ್ತಿದೆ. ಅದಕ್ಕೆ ಕಾರಣ ರಾಕಿಂಗ್ ಸ್ಟಾರ್ ಯಶ್ ಒಂದು ರೂಪಾಯಿ ಕೂಡ ಸಂಭಾವನೆ ಪಡೆಯದೆ ಲಂಕೇಶ್ವರನ ಪಾತ್ರಕ್ಕೆ ಜೀವ ತುಂಬಿರುವುದು. ಅರೇ.. ರೆಮ್ಯುನರೇಷನ್ ಇಲ್ಲದೇನೇ ಅಭಿನಯಿಸಿದ್ರಾ ಯಶ್..? ಅಂತಹ ನಿರ್ಧಾರವಾದ್ರೂ ಯಾಕೆ ತಗೊಂಡ್ರು ಅನ್ನೋ ಕ್ಯೂರಿಯಾಸಿಟಿ ಎಲ್ಲರಿಗೂ ಇದ್ದೇ ಇರುತ್ತೆ.
ಹೌದು.. ನಾಲ್ಕು ಸಾವಿರ ಕೋಟಿ ರೂಪಾಯಿಗಳಲ್ಲಿ, ಎರಡೆರಡು ಭಾಗಗಳಲ್ಲಿ ತಯಾರಾಗ್ತಿರೋ ಮಹಾದೃಶ್ಯಕಾವ್ಯ ರಾಮಾಯಣ ಸಿನಿಮಾದಲ್ಲಿ ಕಲಾವಿದೆ ಸಂಭಾವನೆಗೆ ಅಂತಲೇ ಸಾವಿರಾರು ಕೋಟಿ ಖರ್ಚು ಮಾಡಿದ್ದಾರೆ ನಿರ್ಮಾಪಕ ನಮಿತ್ ಮಲ್ಹೋತ್ರಾ. ಆದ್ರೆ ಯಶ್‌ಗೆ ಮಾತ್ರ ಹಣ ನೀಡದೆ ಕೆಲಸ ಮಾಡಿಸಿಕೊಂಡ್ರಾ ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಅಂದಹಾಗೆ ಯಶ್ ರಾಮಾಯಣ ಚಿತ್ರದ ನಟನಷ್ಟೇ ಅಲ್ಲ.. ಸಹ ನಿರ್ಮಾಪಕ ಕೂಡ ಹೌದು ಅನ್ನೋದನ್ನ ಮರೆಯೋ ಹಾಗಿಲ್ಲ.
ಸಂಭಾವನೆ ಬದಲಿಗೆ ಸೌತ್ ಇಂಡಿಯಾ ಡಿಸ್ಟ್ರಿಬ್ಯೂಷನ್ ರೈಟ್ಸ್
ಇದು ಮಾನ್‌ಸ್ಟರ್ ಯಶ್ ಬಾಕ್ಸ್ ಆಫೀಸ್ ಮಾಸ್ಟರ್‌ಪ್ಲ್ಯಾನ್
ಯಶ್ ಏನೇ ಮಾಡಿದ್ರೂ ಪ್ಲಾನ್ಡ್ ಆಗಿಯೇ ಮಾಡ್ತಾರೆ. ನಿತೇಶ್ ತಿವಾರಿ ನಿರ್ದೇಶನದ ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ನಟನೆಯ ರಾಮಾಯಣ ಚಿತ್ರದಲ್ಲಿ ನಟಿಸೋಕೆ ಯಶ್ ಸಂಭಾವನೆ ಬದಲಿಗೆ ಬೇರೆಯದ್ದೇ ವ್ಯವಹಾರ ಕುದುರಿಸಿದ್ದಾರೆ ಎನ್ನಲಾಗ್ತಿದೆ. ಯೆಸ್.. ರೆಮ್ಯುನರೇಷನ್ ಬದಲಿಗೆ ರಾಮಾಯಣ ಸಿನಿಮಾದ ಕಂಪ್ಲೀಟ್ ಸೌತ್ ಇಂಡಿಯಾ ಡಿಸ್ಟ್ರಿಬ್ಯೂಷನ್ ಪಡೆಯಲಿದ್ದಾರಂತೆ. ಅದು ಕನ್ನಡದಿಂದ ಹಿಡಿದು, ತೆಲುಗು, ತಮಿಳು, ಮಲಯಾಳಂ ವರ್ಷನ್‌ಗಳ ರಾಮಾಯಣ ಕೂಡ ಅದರಲ್ಲಿ ಸೇರಿರಲಿದೆ ಅನ್ನೋದು ನ್ಯೂ ಟಾಕ್.





