ಚಿತ್ರರಂಗದಲ್ಲಿ ಹೆಸರು ಮಾಡೋದು ಸುಲಭ ಅಂತ ಯೋಚಿಸುವವರಿಗೆ…ವಿನಯ್ ಕಶ್ಯಪ್ ಕಥೆ ಒಂದು ರಿಯಲ್ ರಿಯಾಲಿಟಿ ಚೆಕ್. ಇಂದಿನ ದಿನದಲ್ಲಿ ಕಿರುತೆರೆಯಲ್ಲಿ ಭರವಸೆ ನಟನಾಗಿ ಗುರುತಿಸಿಕೊಂಡಿರುವ ವಿನಯ್… ಒಮ್ಮೆ ಸುರಕ್ಷಿತ ಐಟಿ ಉದ್ಯೋಗದಲ್ಲಿದ್ದ ಸಾಮಾನ್ಯ ಯುವಕ. ಆದರೆ ಹೃದಯದಲ್ಲಿ ಹೊತ್ತಿ ಉರಿಯುತ್ತಿದ್ದ ಕನಸು ಒಂದೇ ಕ್ಯಾಮೆರಾ ಮುಂದೆ ಮಿಂಚಬೇಕು ಎನ್ನುವುದು.
ಆ ಕನಸಿಗಾಗಿ ಅವರು ತೆಗೆದುಕೊಂಡ ನಿರ್ಧಾರವೇ ದೊಡ್ಡ ರಿಸ್ಕ್. ಸ್ಟೇಬಲ್ ಸ್ಯಾಲರಿ, ಕಂಫರ್ಟ್ ಲೈಫ್ ಎಲ್ಲವನ್ನೂ ಬಿಟ್ಟು… ಕೈಯಲ್ಲಿ ಕನಸು ಮಾತ್ರ ಹಿಡಿದು ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟರು. ಆದರೆ ಇಂಡಸ್ಟ್ರಿ ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಲಿಲ್ಲ. ದಿನಗಟ್ಟಲೆ ಆಡಿಷನ್‌ಗಳು, ರಿಜೆಕ್ಷನ್‌ಗಳ ನೋವು, ಅವಕಾಶ ಸಿಗದೇ ಕಾಯುವ ಕ್ಷಣಗಳು ಇದೇ ಅವರ ಸ್ಟ್ರಗಲ್ ಡೇಸ್.
ಒಂದು ಪಾತ್ರಕ್ಕಾಗಿ ಹಲವು ಬಾರಿ ಪ್ರಯತ್ನ… ಕೆಲವೊಮ್ಮೆ ಅವಕಾಶ ಕೈ ತಪ್ಪಿದ ನೋವು…ಕೆಲವೊಮ್ಮೆ ಸೆಟ್‌ಗೂ ಹೋಗಿ ಮತ್ತೆ ಹಿಂದಿರುಗಿದ ನಿರಾಸೆ. ಆದರೆ ಒಂದೇ ಒಂದು ವಿಷಯ ಅವರು ಬಿಡಲಿಲ್ಲ ತಮ್ಮ ಪ್ಯಾಶನ್. ಇದೇ ಹಠ, ಇದೇ ಜಿದ್ದು ಅವರು ಇಂದಿನ ಸ್ಥಾನಕ್ಕೆ ತಂದು ನಿಲ್ಲಿಸಿದೆ.
ಕಿರುಪಾತ್ರಗಳಿಂದ ಶುರುವಾದ ಈ ಜರ್ನಿ… ನಿಧಾನವಾಗಿ ದೊಡ್ಡ ಅವಕಾಶಗಳತ್ತ ಸಾಗಿತು. ‘ಸೇವಂತಿ’ ಮೂಲಕ ಸಿಕ್ಕ ಗುರುತು… ‘ಅರಮನೆ’ಯಲ್ಲಿ ತೋರಿದ ವೈವಿಧ್ಯತೆ… ಈಗ ‘ಕರ್ಣ’ನಲ್ಲಿ ಸಿಕ್ಕ ಪವರ್‌ಫುಲ್ ಪಾತ್ರ ಇವೆಲ್ಲವೂ ಅವರ ಹಾರ್ಡ್ ವರ್ಕ್‌ಗೆ ಸಿಕ್ಕ ಪ್ರತಿಫಲ. ಸದ್ಯ ‘ಕರ್ಣ’ ಧಾರಾವಾಹಿಯಲ್ಲಿ ‘ಸಂಜಯ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿಶೇಷವಾಗಿ ನೆಗೆಟಿವ್ ಷೇಡ್ ಹೊಂದಿದ ಈ ಪಾತ್ರದಲ್ಲಿ ಅವರು ತೋರಿಸಿದ ಅಭಿನಯವು ಅವರ ಕರಿಯರ್‌ನಲ್ಲಿ ಮಹತ್ವದ ಘಟ್ಟವೆಂದು ಹೇಳಲಾಗುತ್ತಿದೆ.
ಇಂದು ವಿನಯ್ ಕಶ್ಯಪ್ ಕೇವಲ ನಟನಲ್ಲ… ಸ್ಟ್ರಗಲ್‌ನಿಂದ ಬಂದ ಸ್ಟ್ರಾಂಗ್ ಪರ್ಫಾರ್ಮರ್. ಪಾಸಿಟಿವ್, ನೆಗೆಟಿವ್, ಎಮೋಶನಲ್ ಯಾವ ಪಾತ್ರವಾದರೂ ನೈಸರ್ಗಿಕವಾಗಿ ಜೀವ ತುಂಬುವ ನಟ. ‘ಗದಾಯುದ್ಧ’ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲೂ ತಮ್ಮ ಗುರುತು ಮೂಡಿಸಲು ಸಜ್ಜಾಗಿದ್ದಾರೆ..
ಸ್ಟೇಬಲ್ ಜಾಬ್ ಬಿಟ್ಟು, ಅನಿಶ್ಚಿತ ಭವಿಷ್ಯವನ್ನು ಅಪ್ಪಿಕೊಂಡು… ಹಂತ ಹಂತವಾಗಿ ತಮ್ಮದೇ ಜಾಗ ನಿರ್ಮಿಸಿಕೊಂಡಿರುವ ವಿನಯ್ ಕಥೆ… ಕನಸು ಕಂಡವರಿಗೆ ಒಂದು ಇನ್‌ಸ್ಪಿರೇಶನ್. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಅವರು ಮಿಂಚುವ ಸಾಧ್ಯತೆ ಹೆಚ್ಚಿದೆ.
ಇಂದು ಅವರು ಸ್ಟಾರ್ ಆಗಿರಬಹುದು… ಆದರೆ ಅದರ ಹಿಂದೆ ಇದೆ ಕಣ್ಣೀರಿನ ಹಾದಿ, ಹೋರಾಟದ ಕಥೆ, ಮತ್ತು ಅವರ ಪ್ಯಾಶನ್
ಕೀರ್ತಿ ಪಾಟೀಲ್,ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್,
