DKD ಕಂಟೆಸ್ಟೆಂಟ್ಸ್, ಮಾಸ್ಟರ್ಸ್‌ಗೆ ಶಿವಣ್ಣ ಬಂಪರ್ ಆಫರ್..!

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್

Untitled design 2026 03 25T190929.520

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಇಲ್ಲಿ ನಾಟ್ಯ ಸಾರ್ವಭೌಮ ಡಾ. ಶಿವರಾಜ್‌ಕುಮಾರ್ ತಮ್ಮ ಕಂಟೆಸ್ಟೆಂಟ್ಸ್‌ ಹಾಗೂ ಡ್ಯಾನ್ಸ್ ಕೊರಿಯೋಗ್ರಾಫರ್‌‌ಗಳಿಗೆ ವೈಯಕ್ತಿಕವಾಗಿ ಬಂಪರ್ ಆಫರ್ ನೀಡಿದ್ದಾರೆ. ಇದು ಕಲೆಯ ಬೆಲೆ ಗೊತ್ತಿರೋ ಕಲಾರಾಧಕರಿಗೆ ಮಾತ್ರ ಸಾಧ್ಯವಾಗುವ ಕಾರ್ಯ. ಇಷ್ಟಕ್ಕೂ ಶಿವಣ್ಣನ ಆಫರ್ ಏನು..? ಡಿಕೆಡಿ ಫಿನಾಲೆ ಯಾವಾಗ ಅನ್ನೋದಕ್ಕೆ ಈ ಸ್ಟೋರಿ ನೋಡಿ…

2025-26ನೇ ಸಾಲಿನ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಶುರುವಾಗಿದೆ. ಈಗಾಗ್ಲೇ ಸಿದ್ದೇಗೌಡ-ದೀಶಲ್ ಫಿನಾಲೆಗೆ ಟಿಕೆಟ್ ಕೂಡ ಪಡೆದು ಆಗಿದೆ. ಇದೇ ಏಪ್ರಿಲ್ 5ರಂದು ರಾಮನಗರದಲ್ಲಿ ಫಿನಾಲೆ ಲೈವ್ ನಡೆಯಲಿದೆ. ಅದಕ್ಕಾಗಿ ಬೃಹತ್ ವೇದಿಕೆ, ಕಂಟೆಸ್ಟೆಂಟ್ಸ್ ಭರ್ಜರಿ ರಿಹರ್ಸಲ್ಸ್ ಕೂಡ ನಡೀತಿದೆ.

ಅನುಶ್ರೀ ನಡೆಸಿಕೊಡೋ ಝೀ ಕನ್ನಡದ ಬಹುದೊಡ್ಡ ಶೋ ಆಗಿರೋ ಈ ಡಿಕೆಡಿಯಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ನಮ್ಮ ಕರುನಾಡ ಚಕ್ರವರ್ತಿ ಡಾ ಶಿವರಾಜ್‌‌ಕುಮಾರ್. ಅವರ ಜೊತೆ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್, ಅರ್ಜುನ್ ಜನ್ಯ, ವಿಜಯ್ ರಾಘವೇಂದ್ರ ಕೂಡ ತೀರ್ಪುಗಾರರಾಗಿದ್ದಾರೆ. ಅದ್ರಲ್ಲೂ ಡ್ಯಾನ್ಸ್‌ಗೆ ಕೇರ್ ಆಫ್ ಅಡ್ರೆಸ್ ಆಗಿರೋ ನಾಟ್ಯಸಾರ್ವಭೌಮ ಶಿವಣ್ಣನಿಗೆ ಡ್ಯಾನ್ಸ್ ಜೊತೆ ಡ್ಯಾನ್ಸರ್ಸ್ ಅಂದ್ರೂ ಪಂಚಪ್ರಾಣ. ಅಷ್ಟೇ ಅಲ್ಲ, ಡ್ಯಾನ್ಸ್ ಕೊರಿಯೋಗ್ರಾಫರ್‌‌ಗಳು ಅಂದ್ರೆ ಎಲ್ಲಿಲ್ಲದ ಅಭಿಮಾನ, ಪ್ರೀತಿ.

ಇದೀಗ ಸೆಮಿ ಫೈನಲ್ ವೇದಿಕೆಯಲ್ಲಿ ಶಿವಣ್ಣ ಎಲ್ಲಾ ಡಿಕೆಡಿ ಕಂಟೆಸ್ಟೆಂಟ್‌‌ಗಳು ಹಾಗೂ ಡ್ಯಾನ್ಸ್ ಮಾಸ್ಟರ್‌‌ಗಳಿಗೆ ಒಂದೊಳ್ಳೆ ಆಫರ್ ಘೋಷಿಸಿದ್ದಾರೆ. ಅದನ್ನ ಕೇಳಿ ಇಡೀ ಡಿಕೆಡಿ ಸೆಟ್ ದಿಲ್‌ಖುಷ್ ಆಗಿದೆ. ಡ್ಯಾನ್ಸರ್ಸ್‌‌ಗೆ ತಲಾ 50 ಸಾವಿರ ಹಾಗೂ ಡ್ಯಾನ್ಸ್ ಮಾಸ್ಟರ್‌‌ಗಳಿಗೆ ತಲಾ ಒಂದು ಲಕ್ಷ ತಮ್ಮ ಕೈಯಿಂದ ವೈಯಕ್ತಿಕವಾಗಿ ನೀಡಲು ಮುಂದಾಗಿದ್ದಾರೆ ಶಿವಣ್ಣ. ಇದು ಕಲೆಯನ್ನ ಅರಿತಿರೋ ಒಬ್ಬ ನಿಜವಾದ ಕಲಾರಾಧಕನ ಕಲಾ ಪೋಷಣೆಯ ಕೈಗನ್ನಡಿ ಅಂದ್ರೆ ತಪ್ಪಾಗಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version