ಸ್ಯಾಂಡಲ್‌ವುಡ್‌ನ ದೊಡ್ಮನೆ ಹಾಗೂ ತೂಗುದೀಪ ಶ್ರೀನಿವಾಸ್ ಫ್ಯಾಮಿಲಿಗಳ ನಡುವೆ ಏನೂ ಇಲ್ಲ ಅಂದ್ರೂ, ಅವ್ರ ಫ್ಯಾನ್ಸ್ ನಡುವೆ ಒಂದು ದೊಡ್ಡ ಕಂದಕ ಉಂಟಾಗಿದೆ. ಆದ್ರಗ ದರ್ಶನ್ ಮರ್ಡರ್ ಕೇಸ್‌ವೊಂದರಲ್ಲಿ ಜೈಲಲ್ಲಿರೋದು ಎಲ್ರಿಗೂ ಗೊತ್ತೇಯಿದೆ. ಹೀಗಿರುವಾಗ ವಿಜಯಲಕ್ಷ್ಮೀ ದರ್ಶನ್‌ಗೆ ಕೆಟ್ಟದಾಗಿ ಕಾಮೆಂಟ್ಸ್ ಮಾಡಿದವ್ರ ವಿರುದ್ಧ ಕಿಡಿ ಕಾರಿರೋ ದೊಡ್ಮನೆ ಫ್ಯಾನ್ಸ್, ಆಕೆಯ ಬೆನ್ನಿಗೆ ನಿಂತಿದ್ದಾರೆ.
- ದಚ್ಚು ಪತ್ನಿಗೆ ಕೆಟ್ಟ ಕಮೆಂಟ್ಸ್..
- ವಿಜಯಲಕ್ಷ್ಮೀ ಪರ ದೊಡ್ಮನೆ ಫ್ಯಾನ್ಸ್
- ಡಿಪಿ ಬದಲಿಸಿ ಎಡವಟ್ ಕೆಲಸ ಮಾಡಿದ್ರೆ ಸುಮ್ಮನಿರಬೇಕಾ..?
- ಜೈಲಲ್ಲಿ ದರ್ಶನ್.. ನೋವಲ್ಲಿ ದಾಸನ ಪತ್ನಿ ವಿಜಯಲಕ್ಷ್ಮೀ..!
- ಈ ಸ್ಟಾರ್ ಫ್ಯಾನ್ಸ್ ವಾರ್‌ಗೆ ಬ್ರೇಕ್ ಬೀಳೋದು ಯಾವಾಗ?
ನಟ ದರ್ಶನ್‌ರನ್ನ ಎಷ್ಟು ಪ್ರೀತಿಸ್ತಾರೋ, ಎಷ್ಟು ಗೌರವಿಸ್ತಾರೋ, ಅಷ್ಟೇ ಮೊತ್ತದ ಅಭಿಮಾನ, ಅವರ ಪತ್ನಿ ವಿಜಯಲಕ್ಷ್ಮೀ ಮೇಲೂ ತೋರಿಸ್ತಾರೆ ಅಭಿಮಾನಿ ದೇವರುಗಳು. ಯಾವುದೇ ಸ್ಟಾರ್‌ಗೆ ಆಗಲಿ, ಅವರದ್ದೇ ಆದ ಅಭಿಮಾನಿ ಬಳಗ ಇದ್ದೇ ಇರುತ್ತೆ. ಆದ್ರೆ ಡಿಬಾಸ್‌ಗೆ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಬಹುದೊಡ್ಡ ಕಟ್ಟಾಭಿಮಾನಿಗಳ ದಂಡಿದೆ.
ಸದ್ಯ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ ದರ್ಶನ್. ಪತಿಯ ದರ್ಶನವಿಲ್ಲದೆ ತುಂಬಾ ಕೊರಗಿ, ಸೊರಗಿ ಕೂಡ ಹೋಗಿದ್ದಾರೆ ದಚ್ಚು ಪತ್ನಿ ವಿಜಯಲಕ್ಷ್ಮೀ ದರ್ಶನ್. ಒಂದ್ಕಡೆ ಮನೆಯ ಯಜಮಾನ, ಕುಟುಂಬದ ಒಡೆಯ ದರ್ಶನ್ ಒಲ್ಲ ಅನ್ನೋ ಕೊರಗು. ಮತ್ತೊಂದ್ಕಡೆ ಯಾರ ಕೈ ಕಾಳು ಹಿಡಿದು ಆತನನ್ನ ಹೊರಗೆ ತರಬೇಕೋ ಏನೋ ಅಂತ ಗೊತ್ತಾಗದೆ ಒದ್ದಾಡ್ತಿರೋ ಆ ಜೀವಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕೆಲ ಕಿಡಿಗೇಡಿಗಳು ಕೆಟ್ಟದಾಗಿ ಕಾಮೆಂಟ್ ಮಾಡ್ತಿದ್ದಾರೆ.
ಹಬ್ಬದಲ್ಲಿ ದರ್ಶನ್ ಹೊರಗೆ ಇಲ್ಲದಿದ್ರೂ ಆತನ ನೆನಪಲ್ಲಿ ಒಂದು ಫೋಟೋ ಹಂಚಿಕೊಂಡಿದ್ರು ವಿಜಯಲಕ್ಷ್ಮೀ. ಅದಕ್ಕೆಲ್ಲಾ ಮನಸೋಯಿಚ್ಚೆ ಕೆಟ್ಟ, ಕೊಳಕ ಕಾಮೆಂಟ್ ಮಾಡೋರಿಗೆ ಏನನ್ನಬೇಕೋ ಗೊತ್ತಿಲ್ಲ. ಸದ್ಯ ವಿಜಯಲಕ್ಷ್ಮೀ ಅವರಿಗೆ ಕೆಟ್ಟ ಕೆಟ್ಟದಾಗಿ ಕಾಮೆಂಟ್‌ಗಳನ್ನ ಮಾಡೋರ ವಿರುದ್ಧ ಸ್ವತಃ ದೊಡ್ಮನೆ ಅಭಿಮಾನಿಗಳೇ ಕಿಡಿಕಾರಿದ್ದಾರೆ. ಯಾರೇ ಆಗಿರಲಿ ಅವರು, ಒದ್ದು ಒಳಗೆ ಹಾಕಲಿ ಅಂತ ಪೊಲೀಸರಲ್ಲೂ ಮನವಿ ಮಾಡಿದ್ದಾರೆ ರಾಜವಂಶ ಅಭಿಮಾನಿ ಕನ್ನಡಿಗ ಯೋಗಿ.
ಅಂದಹಾಗೆ ಇತ್ತೀಚೆಗೆ ನಟಿ ರಮ್ಯಾ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡಿದ ಸೋಶಿಯಲ್ ಮೀಡಿಯಾ ಕಿಡಿಗೇಡಿಗಳಿಗೆ ಖಾಕಿ ಲಾಠಿ ರುಚಿ ತೋರಿಸಿತ್ತು. ಅವರೆಲ್ಲಾ ನಟ ದರ್ಶನ್ ಹಾಗೂ ಧನ್ವೀರ್ ಗೌಡ ಫ್ಯಾನ್ಸ್ ಅಂತಲೂ ಖಾಕಿ ಮುಂದೆ ಒಪ್ಪಿಕೊಂಡಿದ್ದಾಯ್ತು. ಆದ್ರೀಗ ದೊಡ್ಮನೆ ಹೀರೋಗಳ ಡಿಪಿ ಬಳಸಿ, ಕೆಲ ಕಿಡಿಗೇಡಿಗಳು ವಿಜಯಲಕ್ಷ್ಮೀ ಅವರಿಗೆ ಕಮೆಂಟ್ ಮಾಡಿ, ಅದನ್ನ ದೊಡ್ಮನೆ ಫ್ಯಾನ್ಸ್ ಅಂತ ಬಿಂಬಿಸೋಕೆ ಹೊರಟಿದ್ದಾರೆ. ಹಾಗಾಗಿ ಕನ್ನಡಿಗ ಯೋಗಿ ವಿಡಿಯೋ ಮೂಲಕ ಅದ್ಯಾರೇ ಆಗಿರಲಿ, ಶಿಕ್ಷೆಯಾಗಲಿ ಅಂತ ನೇರಾನೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸಾದ್ ಅನ್ನೋ ವ್ಯಕ್ತಿ ಮಾಡಿದ್ದ ವಿಡಿಯೋಗೆ ಕೌಂಟರ್ ವಿಡಿಯೋ ಮಾಡಿದ್ದಾರೆ.
ಈ ಹಿಂದೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನ ಕೆಟ್ಟದಾಗಿ ಟ್ರೋಲ್ ಮಾಡಿದವರ ವಿರುದ್ಧ ಯಾರೂ ಕ್ರಮ ಕೈಗೊಳ್ಳಲಿಲ್ಲ. ದರ್ಶನ್ ಫ್ಯಾನ್ಸ್ ಆಗ ಅಶ್ವಿನಿ ಪರ ಮಾತಾಡಲೂ ಇಲ್ಲ. ಆದ್ರೀಗ ಕಷ್ಟದಲ್ಲಿರೋ ವಿಜಯಲಕ್ಷ್ಮೀ ವಿರುದ್ಧ ಕಾಮೆಂಟ್ ಮಾಡಿರೋರ ವಿರುದ್ಧವೇ ದೊಡ್ಮನೆ ಫ್ಯಾನ್ಸ್ ಮಾತಾಡ್ತಿರೋದು ಒಂಥರಾ ಒಳ್ಳೆಯ ಬೆಳವಣಿಗೆ.
ಈ ಸಾಮರಸ್ಯ ಇನ್ಮೇಲೆ ಆದ್ರೂ ಬರಲಿ. ಆದ್ರೆ ಡಿಪಿ ಫೋಟೋಗಳನ್ನ ಹಾಕಿ ಸ್ಟಾರ್ ಫ್ಯಾನ್ಸ್ ನಡುವೆ ತಂಟೆ-ತಕರಾರು ತಂದಿಡೋ ಕಿಡಿಕೇಡಿಗಳನ್ನ ಮಟ್ಟ ಹಾಕಬೇಕಿದೆ. ಪೊಲೀಸ್ ಇಲಾಖೆ ಈ ಮೂಲಕ ಎಚ್ಚೆತ್ತುಕೊಳ್ಳಬೇಕಿದೆ. ತಪ್ಪು ಮಾಡಿದವರಿಗೆ ಲಾ ಅಂಡ್ ಆರ್ಡರ್ ಸ್ಟ್ರಿಕ್ಟ್ ಇದೆ ಅನ್ನೋದರ ಮನವರಿಕೆ ಮಾಡಿಕೊಡಬೇಕಿದೆ.