ಮಂಗಳೂರು: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಮಂಗಳೂರಿನ ಶ್ರೀ ಕ್ಷೇತ್ರ ಮಂದಾರ ಬೈಲಿನ ರಕ್ತೇಶ್ವರಿ ದೈವದ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಹರಕೆ ಸಲ್ಲಿಸಿದ್ದಾರೆ. ನಟ ದರ್ಶನ್ ಗೆ ಪ್ರದೋಶ್ ಮಾಫಿ ಸಾಕ್ಷಿ ಕಂಟಕವಾಗ್ತಿರೋ ಹಿನ್ನೆಲೆ ದೈವದ ಮೊರೆ ಹೋಗಿದ್ದಾರೆ.
ಮಂಗಳೂರಿನ ಶ್ರೀ ಕ್ಷೇತ್ರ ಮಂದಾರ ಬೈಲು ಕರಾವಳಿಯ ಪ್ರಮುಖ ದೈವ ಕ್ಷೇತ್ರಗಳಲ್ಲಿ ಒಂದಾಗಿದೆ. ಇಲ್ಲಿಗೆ ಆಗಮಿಸಿದ ವಿಜಯಲಕ್ಷ್ಮಿ ಅವರು ರಕ್ತೇಶ್ವರಿ ದೈವಕ್ಕೆ ವಿಶೇಷ ಪೂಜೆ ಸಲ್ಲಿಸಿ, ಹರಕೆ ನೆರವೇರಿಸಿದ್ದಾರೆ. ಇದೇ ವೇಳೆ ಗುಳಿಗ ದೈವದ ಸನ್ನಿಧಿಯಲ್ಲಿ ವಿಶೇಷವಾಗಿ ಗುಳಿಗ ಸೇವೆ ಮಾಡಿಸಿದ್ದಾರೆ ಎನ್ನಲಾಗಿದೆ. ತಮ್ಮ ಕುಟುಂಬದ ಸಂಕಷ್ಟಗಳು ದೂರವಾಗಿ, ದರ್ಶನ್ ಅವರಿಗೆ ಒಳಿತಾಗಲಿ ಎಂಬ ಆಶಯದಿಂದ ಅವರು ಪೂಜೆ ಹಾಗೂ ಹರಕೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.
ಕರಾವಳಿ ಭಾಗದಲ್ಲಿ ದೈವಾರಾಧನೆಗೆ ವಿಶೇಷವಾದ ಸ್ಥಾನವಿದೆ. ನಂಬಿಕೆ ಮತ್ತು ಸಂಪ್ರದಾಯದ ಭಾಗವಾಗಿ ಹಲವು ಭಕ್ತರು ತಮ್ಮ ಕುಟುಂಬದ ಸಂಕಷ್ಟಗಳು ನಿವಾರಣೆಯಾಗಲಿ, ಅವರು ಅಂದುಕೊಂಡಿದ್ದು ಈಡೇರಲಿ ಎಂದು ದೈವಗಳ ಸನ್ನಿಧಿಯಲ್ಲಿ ಹರಕೆಗಳನ್ನು ಸಲ್ಲಿಸುತ್ತಾರೆ. ಇದೇ ನಂಬಿಕೆಯ ಹಿನ್ನೆಲೆ ವಿಜಯಲಕ್ಷ್ಮಿ ಕೂಡ ಮಂದಾರ ಬೈಲು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ ಗುಳಿಗ ದೈವದ ಸನ್ನಿಧಿಯಲ್ಲಿ ಗುಳಿಗ ಸೇವೆ ಮಾಡಿಸಿರುವುದು ಇದೀಗ ಗಮನ ಸೆಳೆದಿದೆ.
ದರ್ಶನ್ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸಾಕ್ಷ್ಯಗಳು ಹಾಗೂ ನ್ಯಾಯಾಲಯದ ಮುಂದಿನ ಪ್ರಕ್ರಿಯೆಗಳು ಮಹತ್ವ ಪಡೆದುಕೊಂಡಿವೆ. ಇದೇ ಹಿನ್ನೆಲೆಯಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಪ್ರಕರಣಕ್ಕೆ ಸಂಬಂಧಿಸಿದ ಬೆಳವಣಿಗೆಗಳು ದರ್ಶನ್ ಅವರಿಗೆ ಕಂಟಕವಾಗಬಹುದು ಎಂಬ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ವಿಜಯಲಕ್ಷ್ಮಿ ಅವರು ಈ ದೈವದ ಮೊರೆ ಹೋಗಿದ್ದಾರೆ. ಮಂದಾರ ಬೈಲಿನಲ್ಲಿ ನಡೆದ ಪೂಜೆ ಹಾಗೂ ಗುಳಿಗ ಸೇವೆಯ ಸಂದರ್ಭದಲ್ಲಿ ವಿಜಯಲಕ್ಷ್ಮಿ ದರ್ಶನ್ ಅವರು ಕುಟುಂಬದ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ.





