ವಿಜಯ್ ಸೇತುಪತಿ ಮೀಟ್ಸ್ ಸ್ಯಾಂಡಲ್ವುಡ್ ವಿಜಯ್ ಕುಮಾರ್. ಯೆಸ್.. ಇಬ್ಬರು ಮೋಸ್ಟ್ ವರ್ಸಟೈಲ್ ಆ್ಯಕ್ಟರ್ಗಳು ಒಟ್ಟಿಗೆ ಬೆಳ್ಳಿಪರದೆ ಬೆಳಗುವುದಕ್ಕೆ ಸಜ್ಜಾಗ್ತಿದ್ದಾರೆ. ಅದಕ್ಕೆ ಕಲ್ಟ್ ಡೈರೆಕ್ಟರ್ ಪೂರಿ ಜಗನ್ನಾಥ್ ವೇದಿಕೆ ಸೃಷ್ಟಿಸ್ತಿದ್ದಾರೆ. ಇತ್ತೀಚೆಗೆ ಇವರ ಮೀಟಿಂಗ್ಸ್ ಟಾಕ್ ಆಫ್ ದಿ ಟೌನ್ ಆಗಿವೆ. ಅದ್ರ ಕಂಪ್ಲೀಟ್ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ ನೋಡಿ.
ಒಬ್ರು ಸ್ಯಾಂಡಲ್ವುಡ್ ಸ್ಟಾರ್.. ಮತ್ತೊಬ್ರು ಕಾಲಿವುಡ್ ಸೂಪರ್ ಸ್ಟಾರ್. ಇವರ ಸಿನಿಮಾಗಳು, ಪಾತ್ರಗಳು, ನಟನೆ ಎಲ್ಲವೂ ಭಿನ್ನ, ವಿಭಿನ್ನ. ನೋಡಿದವರಿಗೆ ವ್ಹಾವ್ ಫೀಲ್ ತರಿಸುತ್ತೆ. ಇದೀಗ ಅವರಿಬ್ಬರೂ ಒಟ್ಟಿಗೆ ಸಿನಿಮಾ ಮಾಡುವ ಸೂಚನೆ ನೀಡಿದ್ದಾರೆ. ಯೆಸ್.. ಅದು ಬೇರಾರೂ ಅಲ್ಲ ತಮಿಳಿನ ವಿಜಯ್ ಸೇತುಪತಿ ಮತ್ತು ಕನ್ನಡದ ದುನಿಯಾ ವಿಜಯ್ ಕುಮಾರ್.
ಝೀರೋದಿಂದ ಹೀರೋಗಳ ತನಕ ಇವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಇಬ್ಬರೂ ಕೂಡ ಕಷ್ಟದಿಂದ ಬೆಳೆದು ದೊಡ್ಡ ಸಾಮ್ರಾಜ್ಯ ಕಟ್ಟಿದವರು ಅನ್ನೋದು ಇಂಟರೆಸ್ಟಿಂಗ್. ಸದ್ಯ ಇವರಿಬ್ಬರೂ ಸಹ ಬಹುಭಾಷೆಗಳಲ್ಲಿ ಡಿಮ್ಯಾಂಡ್ ಹೆಚ್ಚಿಸಿಕೊಂಡಿರೋ ವರ್ಸಟೈಲ್ ಆ್ಯಕ್ಟರ್ಸ್. ಇಂತಹ ದಿಗ್ಗಜರನ್ನ ಒಟ್ಟಿಗೆ ಸೇರಿಸೋ ಕಾರ್ಯ ಮಾಡ್ತಿರೋದು ಸೆನ್ಸೇಷನಲ್ ಟಾಲಿವುಡ್ ಡೈರೆಕ್ಟರ್ ಪೂರಿ ಜಗನ್ನಾಥ್.
ಹೌದು.. ಅಪ್ಪು, ಪೋಕಿರಿ, ಬ್ಯುಸಿನೆಸ್ಮ್ಯಾನ್ ಸೇರಿದಂತೆ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನ ನೀಡಿರೋ ಪೂರಿ ಜಗನ್ನಾಥ್ ಅವರು ತಮ್ಮ ವಿಭಿನ್ನ ಶೈಲಿಯ ಮೇಕಿಂಗ್ ಹಾಗೂ ಕಥೆಗಳಿಂದಲೇ ಕಲ್ಟ್ ಡೈರೆಕ್ಟರ್ ಆಗಿ ಗುರ್ತಿಸಿಕೊಂಡಿದ್ದಾರೆ. ಲೈಗರ್ ಸಿನಿಮಾದ ಬಳಿಕ ಪೂರಿ ದೊಡ್ಡದಾಗಿ ಪ್ಲ್ಯಾನ್ ಮಾಡ್ತಿದ್ದು, ಈ ಅಸಾಧಾರಣ ಟ್ಯಾಲೆಂಟ್ಸ್ನ ಒಟ್ಟಿಗೆ ಸೇರಿಸೋ ಮಹಾಕಾರ್ಯ ಮಾಡ್ತಿದ್ದಾರೆ.
ಅಂದಹಾಗೆ ದುನಿಯಾ ವಿಜಯ್ ಬಾಲಕೃಷ್ಣ ಜೊತೆ ಈ ಹಿಂದೆ ವೀರಸಿಂಹಾರೆಡ್ಡಿ ಸಿನಿಮಾದಲ್ಲಿ ವಿಲನ್ ಖದರ್ ತೋರಿದ್ದರು. ಅದಾದ ಬಳಿಕ ಸದ್ಯ ನಯನತಾರಾ ಜೊತೆ ಮೂಕುತಿ ಅಮ್ಮನ್-2 ಚಿತ್ರದಲ್ಲಿ ನಟಿಸ್ತಿದ್ದಾರೆ. ಅವುಗಳ ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗಾಗಿ ವಿಜಯ್ ಸೇತುಪತಿ ಹಾಗೂ ಪೂರಿ ಜಗನ್ನಾಥ್ ಜೊತೆ ಕೈ ಜೋಡಿಸ್ತಿದ್ದಾರೆ ದುನಿಯಾ ವಿಜಯ್.
ಸದ್ಯ ಮಗಳಿಗಾಗಿ ವಿನಯ್ ರಾಜ್ಕುಮಾರ್ ಜೊತೆ ಸಿಟಿಲೈಟ್ಸ್ ಅನ್ನೋ ಸಿನಿಮಾನ ನಿರ್ದೇಶನ ಮಾಡ್ತಿದ್ದಾರೆ ದುನಿಯಾ ವಿಜಯ್. ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ನಟಿಸಿ, ಅದ್ರ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ಭಾಗಿ ಆಗ್ತಿದ್ದಾರೆ. ಇಬ್ಬರೂ ಮಕ್ಕಳನ್ನ ಹೀರೋಯಿನ್ಸ್ ಮಾಡ್ತಾ, ಒಂದ್ಕಡೆ ಡೈರೆಕ್ಷನ್ ಜೊತೆಗೆ ಸಾಲು ಸಾಲು ಸಿನಿಮಾಗಳಿಗೆ ಕಮಿಟ್ ಆಗಿದ್ದಾರೆ ಸ್ಯಾಂಡಲ್ವುಡ್ ಭೀಮ ವಿಜಯ್ ಕುಮಾರ್.
ಆ ಕಡೆ ವಿಜಯ್ ಸೇತುಪತಿ ಕೂಡ ಸುಮ್ಮನೆ ಕೈ ಕಟ್ಟಿ ಕೂತಿಲ್ಲ. ವಿಡುದಲೈ ಪಾರ್ಟ್-2 ಬಳಿಕ ಏಸ್ ಸಿನಿಮಾನ ಮಾಡಿ ಮುಗಿಸಿದ್ದಾರೆ. ಅದರಲ್ಲಿ ನಮ್ಮ ಕನ್ನಡತಿ ರುಕ್ಮಿಣಿ ವಸಂತ್ ಜೊತೆ ತೆರೆಹಂಚಿಕೊಂಡಿದ್ದಾರೆ. ಅಲ್ಲದೆ, ಟ್ರೈನ್ ಹಾಗೂ ತಲೈವನ್ ತಲೈವಿ ಸಿನಿಮಾ ಕೂಡ ಮಾಡ್ತಿದ್ದಾರೆ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನ. ಇವೆಲ್ಲವುಗಳ ನಡುವೆ ಮತ್ತೊಂದು ಮೆಗಾ ಪ್ರಾಜೆಕ್ಟ್ ಗೆ ಕೈ ಹಾಕಿರೋದು ವಿಶೇಷ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್