UI ಬಳಿಕ ವಾಟ್ ನೆಕ್ಸ್ಟ್ ಉಪ್ಪಿ ಅಂತಿದ್ದವ್ರಿಗೆ ತಮ್ಮ ಬ್ಯುಸಿ ಶೆಡ್ಯೂಲ್‌ನ ಪರಿಚಯಿಸಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ. ಯೆಸ್.. ಡೈರೆಕ್ಷನ್‌ಗೆ ಸಣ್ಣದೊಂದು ಬ್ರೇಕ್ ನೀಡಿರೋ ಸೂಪರ್ ಸ್ಟಾರ್, ಪಕ್ಕದ ತೆಲುಗು- ತಮಿಳು ಇಂಡಸ್ಟ್ರಿಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ತಲೈವಾ ರಜನೀಕಾಂತ್ ಜೊತೆಗಿನ ಕೂಲಿ ರಿಲೀಸ್‌ಗೂ ಮೊದಲೇ ರಾಮ್ ಪೋತಿನೇನಿ ಜೊತೆ ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ಕೈ ಜೋಡಿಸಿದ್ದಾರೆ.
- ಕೂಲಿ ರಿಲೀಸ್‌ಗೂ ಮೊದ್ಲೇ RAPO ಜೊತೆ ಉಪ್ಪಿ ಕಮಿಟ್
- ತೆಲುಗು, ತಮಿಳಲ್ಲಿ ಉಪ್ಪಿ ಬ್ಯುಸಿ.. ಸದ್ಯಕ್ಕಿಲ್ಲ ಡೈರೆಕ್ಷನ್ ಟೆನ್ಷನ್
- ಆಗ ಅಲ್ಲು ಜೊತೆ ನಾಯ್ಡು.. ಈಗ ರಾಮ್ ಜೊತೆ ಸೂರ್ಯ
- ಪರಭಾಷೆಗಳಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್.. ಆಯ್ಕೆ ಅಪರೂಪ..!
ಯೆಸ್.. ಸನ್ ಆಫ್ ಸತ್ಯಮೂರ್ತಿ ಸಿನಿಮಾ ನೋಡಿರೋರಿಗೆ ಈಗಲೂ ಅದ್ರ ಹೆಸರು ಹೇಳ್ತಿದ್ದಂತೆ ಮೈ ಪುಳಿಕಿತಗೊಳ್ಳುತ್ತೆ. ಅದಕ್ಕೆ ಕಾರಣ ಸಿನಿಮಾದ ಕಥೆ, ಪಾತ್ರಗಳು ಹಾಗೂ ನಿರ್ದೇಶಕರ ನಿರೂಪಣಾ ಶೈಲಿ. ಅದರಲ್ಲೂ ಅಲ್ಲು ಅರ್ಜುನ್- ಉಪೇಂದ್ರ ಟಗ್ ಆಫ್ ವಾರ್ ನೋಡೋಕೆ ಸಿಕ್ಕಾಪಟ್ಟೆ ಮಜಬೂತಾಗಿದೆ. ದೇವರಾಜ್ ನಾಯ್ಡು ಪಾತ್ರದಲ್ಲಿ ಖಡಕ್ ಖಳನಾಯಕನಾಗಿ ಉಪ್ಪಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದ್ದರು.
ಸನ್ ಆಫ್ ಸತ್ಯಮೂರ್ತಿ ಸಿನಿಮಾ ತೆರೆಕಂಡು 10 ವರ್ಷ. ಈಗಲೂ ಆ ಪಾತ್ರ ತೆಲುಗು ಪ್ರೇಕ್ಷಕರನ್ನ ಕಾಡಲಿದೆ. ಅದಾದ ಬಳಿಕ ಗನಿ ಅನ್ನೋ ಸಿನಿಮಾದಲ್ಲಿ ನಾಗಬಾಬು ಮಗ ವರುಣ್ ತೇಜ್ ಜೊತೆ ಬಾಕ್ಸರ್ ರೋಲ್‌ನಲ್ಲಿ ಬಣ್ಣ ಹಚ್ಚಿದ್ರು. ಇದೀಗ ಬರೋಬ್ಬರಿ ಮೂರು ವರ್ಷಗಳ ಬಳಿಕ ಮತ್ತೊಮ್ಮೆ ಟಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಮತ್ತೊಮ್ಮೆ ಖಳನಾಯಕನಾಗಿ ಅನ್ನೋದು ಇಂಟರೆಸ್ಟಿಂಗ್.
ಹೌದು.. ರಾಮ್ ಪೋತಿನೇನಿ ಜೊತೆಗಿನ 22ನೇ ಸಿನಿಮಾಗೆ ಇವರೇ ವಿಲನ್. ಅಂದನಿವಾಡು, ಅಂದರಿವಾಡು ಮನ ಸೂರ್ಯ ಕುಮಾರ್ ಅಂತ ಉಪ್ಪಿ ಫಸ್ಟ್ ಲುಕ್ ರಿವೀಲ್ ಮಾಡಿದೆ ಚಿತ್ರತಂಡ. ಅದ್ರ ಅರ್ಥ ಯಾರಿಗೂ ಸಿಗದ, ಎಲ್ಲರ ಪರವಾದವನು ಈ ಸೂರ್ಯಕುಮಾರ್ ಎಂದರ್ಥ. ಇಲ್ಲಿ ರಾಮ್ ಪೋತಿನೇನಿ ಹಾಗೂ ಉಪ್ಪಿ ನಡುವಿನ ಜುಗಲ್ಬಂದಿ ನೋಡೋಕೆ ಮಸ್ತ್ ಮಜಾ ಕೊಡಲಿದೆ. ಮಹೇಶ್ ಬಾಬು ನಿರ್ದೇಶನದ ಈ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಇದೇ ಮೇ 15ಕ್ಕೆ ರಿವೀಲ್ ಆಗಲಿದೆ.
ಅಂದಹಾಗೆ ರಾಮ್ ಪೋತಿನೇನಿ ಬ್ರಿಲಿಯೆಂಟ್ ಆ್ಯಕ್ಟರ್. ಸದಾ ಭಿನ್ನ ಅಲೆಯ ಸಿನಿಮಾ ಹಾಗೂ ಪಾತ್ರಗಳಿಂದ ಎಲ್ಲರ ದಿಲ್ ದೋಚುತ್ತಾ ಬಂದಿದ್ದಾರೆ. ಅವರ ಎನರ್ಜಿ ಲೆವೆಲ್ ಹಾಗೂ ಲವಲವಿಕೆತನ ಬೇರಾವ ನಟನಲ್ಲೂ ಕಂಡಿಲ್ಲ. ಅಷ್ಟರ ಮಟ್ಟಿಗೆ ಹೈ ವೋಲ್ಟೇಜ್ ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಸಿನಿಮಾ ಆದ್ದರಿಂದ ಈ ಚಿತ್ರದ ಮೇಲೆ ಅತೀವ ನಿರೀಕ್ಷೆಯಿದೆ.
ಇನ್ನು ತಲೈವಾ ರಜನೀಕಾಂತ್ ಜೊತೆಗಿನ ಕೂಲಿ ಸಿನಿಮಾದ ರಿಲೀಸ್ ಡೇಟ್ ಈಗಾಗ್ಲೇ ಲಾಕ್ ಆಗಿದೆ. ಆಗಸ್ಟ್ 14ಕ್ಕೆ ಪ್ರೇಕ್ಷಕರ ಮುಂದೆ ಬರ್ತಿರೋ ತಮಿಳಿನ ಈ ಮಲ್ಟಿಸ್ಟಾರರ್ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನೀಕಾಂ ತ್ ಜೊತೆ ಉಪೇಂದ್ರ ಅಲ್ಲದೆ, ನಾಗಾರ್ಜುನ್ ಕೂಡ ಲೀಡ್‌ನಲ್ಲಿ ಕಾಣಸಿಗಲಿದ್ದಾರೆ. ಇಲ್ಲಿ ಉಪ್ಪಿ ನೆಗೆಟಿವ್ ಶೇಡ್ ಅಥ್ವಾ ಪಾಸಿಟಿವ್ ಶೇಡ್ ಅನ್ನೋ ಕ್ಯೂರಿಯಾಸಿಟಿ ಗರಿಗೆದರಿದೆ.
2008ರಲ್ಲಿ ವಿಶಾಲ್, ನಯನತಾರಾ ಜೊತೆಗಿನ ಸೆಲ್ಯೂಟ್ ಸಿನಿಮಾದ ಬಳಿಕ ಒಂದು ದೊಡ್ಡ ಗ್ಯಾಪ್ ಆಗಿತ್ತು. ಇದೀಗ ಕೂಲಿ ಚಿತ್ರದ ಮೂಲಕ ಉಪ್ಪಿಯನ್ನ ಒನ್ಸ್ ಅಗೈನ್ ಕಾಲಿವುಡ್‌ಗೆ ಕರೆತರುವಲ್ಲಿ ಡೈರೆಕ್ಟರ್ ಲೋಕೇಶ್ ಕನಕರಾಜ್ ಯಶಸ್ವಿ ಆಗಿದ್ದಾರೆ. ಯುಐ ಸಿನಿಮಾದ ಬಳಿಕ ನಟ ಉಪೇಂದ್ರ ಏನ್ ಮಾಡ್ತಿದ್ದಾರೆ ಅಂತ ಕೇಳ್ತಿದ್ದವರಿಗೆ ಸದ್ಯ ಕೂಲಿ ಹಾಗೂ RAPO22 ಸಿನಿಮಾಗಳ ಮುಖೇನ ಉತ್ತರ ನೀಡಿದ್ದಾರೆ.
ಅಂದಹಾಗೆ ತೆಲುಗು, ತಮಿಳು ಎರಡೂ ಚಿತ್ರರಂಗಕ್ಕೆ ಹೊಸಬರೇನಲ್ಲ. ಇವರ ಸಿನಿಮಾಗಳು ಪರಭಾಷೆಗಳಲ್ಲೂ ಹಲ್‌ಚಲ್ ಎಬ್ಬಿಸುತ್ತಾ ಬರ್ತಿವೆ. ಇವ್ರ ಚಿತ್ರಗಳು ವಾಯ್ಸ್ ಡಬ್, ರಿಮೇಕ್ ಆಗುವ ಮೂಲಕ ಅಲ್ಲಿನ ಪ್ರೇಕ್ಷಕರಿಗೂ ರುಚಿಸಿವೆ. ನಟರಾಗಿ, ನಿರ್ದೇಶಕರಾಗಿ ಕೂಡ ಸ್ಟ್ರೈಟ್ ತೆಲುಗು ಸಿನಿಮಾಗಳನ್ನ ಮಾಡುವಲ್ಲಿ ಉಪ್ಪಿ ಮೇಲುಗೈ ಸಾಧಿಸಿದ್ದರು. ಆ ಜರ್ನಿ ಇದೀಗ ಮತ್ತೆ ಮುಂದುವರೆಯುತ್ತಿದೆ. ಪರಭಾಷೆಗಳಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿಸಿಕೊಂಡಿರೋ ಉಪ್ಪಿ, ಕಥೆಗಳ ಆಯ್ಕೆಯಲ್ಲಿ ಸಖತ್ ಚೂಸಿ ಆಗಿದ್ದಾರೆ.