ನಾವು ಈ ಸ್ಟೋರಿಯಲ್ಲಿ ತ್ರಿಬಲ್ ಆರ್ ಕಥೆಯೊಂದನ್ನ ಹೇಳ್ತೀವಿ. ಆದ್ರೆ ಅದು ರಾಜಮೌಳಿಯ RRR ಕಥೆ ಅಲ್ಲ. ಅದಕ್ಕಿಂತ ರೋಮಾಂಚಕವಾದ ಸ್ಟೋರಿ. ರಾಕಿ-ರಣ್‌ಬೀರ್ ಹಾಗೂ ರಣ್‌ವೀರ್.. ಇವ್ರೇ ಆ ತ್ರಿಬಲ್ ಆರ್ ಸ್ಟಾರ್‌ಗಳು.
ರಾಕಿಂಗ್ ಸ್ಟಾರ್ ಯಶ್, ರಣ್‌ಬೀರ್ ಕಪೂರ್ ಹಾಗೂ ರಣ್‌ವೀರ್ ಸಿಂಗ್.. ಸದ್ಯ ಇಂಡಿಯನ್ ಸಿನಿದುನಿಯಾದ ಸೆನ್ಸೇಷನಲ್ ಸೂಪರ್ ಸ್ಟಾರ್ಸ್. ಇವರ ಸಿನಿಮಾಗಳು ಸಾವಿರಾರು ಕೋಟಿ ಬಾಕ್ಸ್ ಆಫೀಸ್ ಲೂಟಿ ಮಾಡ್ತಿವೆ. ಅದಕ್ಕೆ ಇವರುಗಳ ಟ್ಯಾಲೆಂಟ್, ಹಾರ್ಡ್ ವರ್ಕ್, ಡೆಡಿಕೇಷನ್ ಎಷ್ಟು ಮುಖ್ಯವೋ ಲಕ್ ಫ್ಯಾಕ್ಟರ್ ಕೂಡ ಅಷ್ಟೇ ಇಂಪಾರ್ಟೆಂಟ್ ಆಗುತ್ತೆ.
ರಾಕಿ-ರಣ್‌ಬೀರ್-ರಣ್‌ವೀರ್.. ಹೆಣ್ಮಕ್ಳೇ ಇವ್ರ ಸಕ್ಸಸ್ ಸೀಕ್ರೆಟ್
KGF, ಅನಿಮಲ್ & ಧುರಂಧರ್.. ಮಗಳು ತಂದ ಸೌಭಾಗ್ಯ..!!
ಸದ್ಯ ಭಾರತೀಯ ಚಿತ್ರರಂಗದಲ್ಲಿ ಹಲ್‌ಚಲ್ ಎಬ್ಬಿಸಿ, ಇಡೀ ವಿಶ್ವ ಸಿನಿದುನಿಯಾ ತನ್ನತ್ತ ನೋಡುವಂತೆ ಮಾಡಿದ ತ್ರಿಬಲ್ ಆರ್ ಸ್ಟಾರ್‌ಗಳಾಗಿ ರಾರಾಜಿಸ್ತಿದ್ದಾರೆ ನಮ್ಮ ರಾಕಿಭಾಯ್, ರಣ್‌ಬೀರ್ ಹಾಗೂ ರಣ್‌ವೀರ್. ಈ ಮೂವರಿಗೂ ಇತ್ತೀಚೆಗೆ ನಿರೀಕ್ಷೆಗೂ ಮೀರಿದ ಸ್ಟಾರ್‌ಡಮ್, ಸಕ್ಸಸ್ ಸಿಕ್ತು. ಆ ಸಕ್ಸಸ್ ಫ್ಯಾಕ್ಟರ್ ಏನಿರಬಹುದು ಅಂತ ಹುಡುಕಿದ್ರೆ ಮೂವರಲ್ಲಿ ಒಂದೇ ತರಹ ಇದೆ. ತುಂಬಾ ಕಾಮನ್ ಆಗಿದೆ. ಅದೇ.. ಅವ್ರ ಮಕ್ಕಳು ತಂದ ಸೌಭಾಗ್ಯ. ಅದ್ರಲ್ಲೂ ಹೆಣ್ಣು ಮಕ್ಕಳ ಜನನದ ಬಳಿಕ ಈ ಮೂವರೂ ಸ್ಟಾರ್ಸ್ ಹಣೆಬರಹ ಕಂಪ್ಲೀಟ್ ಆಗಿ ಬದಲಾಗಿ ಹೋಯ್ತು.
2018ರ ಡಿಸೆಂಬರ್ 2ರಂದು ಯಶ್‌ಗೆ ಮುದ್ದಿನ ಮಗಳು ಐರಾ ಜನಿಸಿದಳು. ಅದೇ ತಿಂಗಳು ಅಂದ್ರೆ ಡಿಸೆಂಬರ್ 21ಕ್ಕೆ ಕೆಜಿಎಫ್ ಚಾಪ್ಟರ್-1 ತೆರೆಗಪ್ಪಳಿಸಿತು. 80 ಕೋಟಿಯಲ್ಲಿ ತಯಾರಾದ ಕೆಜಿಎಫ್ ಬರೋಬ್ಬರಿ 250 ಕೋಟಿ ಗಳಿಸಿ, ಚಾಪ್ಟರ್-2 ಕಾಯುವಿಕೆಯನ್ನ ಹೆಚ್ಚಿಸಿತು. ಕೆಜಿಎಫ್-2 ಚಿತ್ರ 1250 ಕೋಟಿ ಗಳಿಸೋ ಮೂಲಕ ಯಶ್‌ರನ್ನ ಸಾವಿರ ಕೋಟಿ ಬಾಕ್ಸ್ ಆಫೀಸ್ ಸುಲ್ತಾನನ್ನಾಗಿಸಿತು. ಸದ್ಯ ಟಾಕ್ಸಿಕ್ ಹಾಗೂ ರಾಮಾಯಣ ಚಿತ್ರಗಳಿಂದ ಹಾಲಿವುಡ್ ಮಂದಿಯ ನಿದ್ದೆ ಕೆಡಿಸೋ ಮುನ್ಸೂಚನೆ ನೀಡಿದ್ದಾರೆ ಯಶ್.
ಕಪೂರ್ ಕುಟುಂಬದ ಕುಡಿ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ದಂಪತಿಗೆ 2022ರ ನವೆಂಬರ್ 6ರಂದು ರಾಹಾ ಜನಿಸಿದಳು. ಆ ನಂತ್ರ ಬಂದದ್ದೇ ಅನಿಮಲ್ ಸಿನಿಮಾ. ಸಂದೀಪ್ ರೆಡ್ಡಿ ವಂಗಾ ಹಾಗೂ ರಣ್‌ಬೀರ್ ಕಾಂಬೋನ ಅನಿಮಲ್ ಸಿನಿಮಾ 2023ರ ಡಿಸೆಂಬರ್ 1ಕ್ಕೆ ತೆರೆಕಂಡು ಬರೋಬ್ಬರಿ 918 ಕೋಟಿಗೂ ಅಧಿಕ ರೂಪಾಯಿ ಗಳಿಸಿತು. ಹೆಚ್ಚು ಕಡಿಮೆ ಸಾವಿರ ಕೋಟಿ ಬ್ಯುಸಿನೆಸ್ ಮಾಡಿ, ರಣ್‌ಬೀರ್ ಸ್ಟಾರ್ಡಮ್‌ನ ಮತ್ತಷ್ಟು ಹೆಚ್ಚಿಸಿತು.
ಐರಾ ಬಂದ ಬಳಿಕ ಕಂಪ್ಲೀಟ್ ಬದಲಾಯ್ತು ಯಶ್ ಹಣೆಬರಹ
ರಾಹಾ ನಂತ್ರ ರಣ್‌ಬೀರ್ ಅನಿಮಲ್ ಇಂಡಸ್ಟ್ರಿ ಬ್ಲಾಕ್ ಬಸ್ಟರ್..!
ಯಶ್, ರಣ್‌ಬೀರ್ ಬಳಿಕ ರಣ್‌ವೀರ್ ಸಿಂಗ್‌ದು ಕೂಡ ಅದೇ ಹಾದಿ. 2024ರ ಸೆಪ್ಟೆಂಬರ್ 8ರಂದು ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಜೋಡಿಗೆ ದುವಾ ಪಡುಕೋಣೆ ಸಿಂಗ್ ಹುಟ್ಟಿತು. ಆ ಪುಟ್ಟ ಮಹಾಲಕ್ಷ್ಮೀ ಮನೆಗೆ ಬಂದ ಬಳಿಕ ಧುರಂಧರ್ ರಿಲೀಸ್ ಆಯ್ತು. ರಣ್‌ವೀರ್ ಸಿಂಗ್ ಕರಿಯರ್‌ಗೆ ಭರ್ಜರಿ ಕಂಬ್ಯಾಕ್ ಮೂವಿ ಆಯ್ತು. 2025ರ ಡಿಸೆಂಬರ್ 5ರಂದು ರಿಲೀಸ್ ಆದ ಧುರಂಧರ್ ಬಾಕ್ಸ್ ಆಫೀಸ್‌ನಲ್ಲಿ 1428 ಕೋಟಿ ಪೈಸಾ ವಸೂಲ್ ಮಾಡಿ, ರಣ್‌ವೀರ್ ಸಿನಿಮೋತ್ಸಾಹವನ್ನ ಮತ್ತಷ್ಟು ಹೆಚ್ಚಿಸಿತು.
ಒಟ್ಟಾರೆ ಮನೆಗೆ ಈ ಪುಟ್ಟ ಮಹಾಲಕ್ಷ್ಮೀಯರ ಆಗಮನದಿಂದ ಈ ಸ್ಟಾರ್‌ಗಳ ನಸೀಬು ಕಂಪ್ಲೀಟ್ ಆಗಿ ಬದಲಾಗಿದ್ದು ಸುಳ್ಳಲ್ಲ. ಸಾಕಷ್ಟು ಜನ ಈ ಜನರೇಷನ್‌ನಲ್ಲಿ ಕೂಡ ಹೆಣ್ಣು ಮಗು ಬೇಡ, ಗಂಡು ಮಗುನೇ ಹುಟ್ಟಬೇಕು ಅಂತ ಬಯಸ್ತಾರೆ. ಆದ್ರೀಗ ಈ ಸೂಪರ್ ಸ್ಟಾರ್ಸ್‌ಗೆ ಆ ಹೆಣ್ಣು ಮಕ್ಕಳೇ ವರದಾನ ಆಗಿದ್ದಾರೆ. ಅವ್ರ ಆಗಮನ ವರಮಾನ ಕೂಡ ಹೆಚ್ಚಿಸಿರೋದು ಓಪನ್ ಸೀಕ್ರೆಟ್.
