ಯುವರ್ ಗೆಸ್ ಈಸ್ ವ್ರಾಂಗ್. ಯಶ್ ಈಸ್ ಆಲ್ವೇಸ್ ಅನ್‌ಪ್ರೆಡಿಕ್ಟೆಬಲ್. ರೀಸೆಂಟ್ ಟಾಕ್ಸಿಕ್ ಟೀಸರ್ ನೋಡಿ ಡಬಲ್ ರೋಲ್ ಅಂದುಕೊಂಡಿದ್ದವ್ರಿಗೆ ಅದು ತ್ರಿಬಲ್ ರೋಲ್ ಅನ್ನೋದನ್ನ ನಾನೇ ನಮ್ಮ ಗ್ಯಾರಂಟಿ ಪಿಚ್ಚರ್‌ನಲ್ಲಿ ಹೇಳಿದ್ವಿ. ಆದ್ರೀಗ ಆ ಟೀಸರ್‌ನಲ್ಲಿ ಮೂರಲ್ಲ ಬರೋಬ್ಬರಿ ನಾಲ್ಕು ಶೇಡ್‌ಗಳಲ್ಲಿ ರಾಕಿಭಾಯ್ ಮಿಂಚ್ತಿದ್ದಾರೆ. ಅದರೊಟ್ಟಿಗೆ ಮುಖಕ್ಕೆ ಬೆಂಕಿ ಬಿದ್ರೂ ನಾಯಕನಟಿ ರುಕ್ಮಿಣಿ ವಸಂತ್‌ನ ಕಾಪಾಡೋಕೆ ಡೆಡ್ಲಿ ಸ್ಟಂಟ್ ಮಾಡಿದ್ದಾರೆ.
ಟಾಕ್ಸಿಕ್..ಟಾಕ್ಸಿಕ್..ಟಾಕ್ಸಿಕ್..ಎಲ್ಲೆಡೆ ಬರೀ ಟಾಕ್ಸಿಕ್‌ದೇ ಚರ್ಚೆ. ರಿಸೆಂಟ್ ಟಾಕ್ಸಿಕ್ ಟೀಸರ್ ಬರೋವರೆಗೂ ಒಂದು ಲೆಕ್ಕ. ಅದು ಬಂದ ಬಳಿಕ ಹೊಸ ಲೆಕ್ಕ ಶುರುವಾಗಿದೆ. ಶೋ ಮ್ಯಾನ್ ರೀತಿ ಇಡೀ ಟೀಸರ್‌ನ ಸೆಂಟರ್ ಆಫ್ ಅಟ್ರ್ಯಾಕ್ಷನ್ ಒನ್ ಅಂಡ್ ಓನ್ಲಿ ರಾಕಿಂಗ್ ಸ್ಟಾರ್ ಯಶ್. ವೆರೈಟಿ ಆಫ್ ಶೇಡ್ಸ್‌ನಲ್ಲಿ ಯಶ್ ಚಿತ್ರಪ್ರೇಮಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

ಯಶ್ ಮುಖಕ್ಕೆ ಬೆಂಕಿ..ರುಕ್ಕುನ ಕಾಪಾಡೋಕೆ ಡೆಡ್ಲಿ ಸ್ಟಂಟ್
ಓ ಮೈ ಗಾಡ್..ಮೂರಲ್ಲ ನಾಲ್ಕು ಶೇಡ್ಸ್‌ನಲ್ಲಿ ರಾಕಿ ಸೆನ್ಸೇಷನ್

ಎಲ್ಲರೂ ರಾಯ ಅಂಡ್ ರೂಮಿ ತಂದೆ-ಮಗನಾಗಿ ಎರಡೆರಡು ರೋಲ್ ಮಾಡಿದ್ದಾರೆ ಅಂತಿದ್ರು. ಆದ್ರೆ ನಾವು ಮಾತ್ರ ತ್ರಿಬಲ್ ರೋಲ್ ಅನ್ನೋದನ್ನ ಹೇಳಿದ್ವಿ. ಯಶ್ ಯಾವಾಗ್ಲೂ ಹೀಗೇನೇ ಒಂಥರಾ ಅನ್‌ಪ್ರೆಡಿಕ್ಟೆಬಲ್. ಜನರ ಊಹೆಗೂ ಮೀರಿದವರು. ಕೆಜಿಎಫ್ ಮೊದಲ ಭಾಗ ಬರೋಕೆ ಮೊದಲೇ ಹೇಳಿದ್ರು ದಿಸ್ ಈಸ್ ಜಸ್ಟ್ ಬಿಗಿನಿಂಗ್ ಗಾಯ್ಸ್. ನೆನಪಿಟ್ಟುಕೊಳ್ಳಿ ಮುಂದೆ ಕನ್ನಡ ಚಿತ್ರರಂಗ ದೊಡ್ಡ ಮಟ್ಟಕ್ಕೆ ಬೆಳೆಯುತ್ತೆ ಅಂತ. ಅದೀಗ ನಿಜವಾಗ್ತಿದೆ. ಯಾಕಂದ್ರೆ ಟಾಕ್ಸಿಕ್‌ನಲ್ಲಿ ಎರಡು ಮೂರಲ್ಲ ಬರೋಬ್ಬರಿ ನಾಲ್ಕು ಶೇಡ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಯಶ್.

ಗಿವಪ್ ರಾಯ ಅನ್ನೋ ಡೈಲಾಗ್ ಚಿತ್ರದಲ್ಲಿದೆ. ಬಿಟ್ಟುಕೊಡೋದಾ..? ಬಿಟ್ಟುಕೊಡೋ ಮಾತೇ ಇಲ್ಲ. ನಾನು ಹೇಳಿದಾಗ್ಲೇ ಎಲ್ಲವೂ ಮುಗಿಯೋದು ಅನ್ನೋ ಮಾತು ಆ ರಾಯನ ಪವರ್ ಹಾಗೂ ಖದರ್‌ಗೆ ಕೇರ್ ಆಫ್ ಅಡ್ರೆಸ್ ಆಗಿದೆ. ಅಂದಹಾಗೆ ಯಶ್ ಕಥೆ, ಪಾತ್ರಗಳು, ಮೇಕಿಂಗ್, ಪರ್ಫಾಮೆನ್ಸ್ ಎಲ್ಲೂ ಕಾಂಪ್ರಮೈಸ್ ಆಗಿಲ್ಲ. ಇಡೀ ಬಾಲಿವುಡ್ ಟಾಕ್ಸಿಕ್ ಟೀಸರ್‌ಗೆ ಥಂಡಾ ಹೊಡೆದಿದೆ. ಹಾಲಿವುಡ್ ಅಕ್ಷರಶಃ ಅಚ್ಚರಿಗೊಂಡಿದೆ. ಇದೆಲ್ಲವನ್ನ ನೋಡ್ತಿದ್ರೆ ಯಶ್‌ಗೆ ಯಶ್ ಮಾತ್ರ ಸಾಟಿ ಅನಿಸ್ತಿದೆ.

ನೋ ಕಾಂಪ್ರಮೈಸ್..ಯಶ್‌ಗೆ ಯಶ್ ಮಾತ್ರ ಸರಿಸಾಟಿ ಗುರು
ಟಾಕ್ಸಿಕ್ ಟೀಸರ್ ನೋಡಿ ಬೆಚ್ಚಿಬಿದ್ದ ಬಾಲಿವುಡ್, ಹಾಲಿವುಡ್

ಇಂಟರೆಸ್ಟಿಂಗ್ ಅಂದ್ರೆ, ರುಕ್ಮಿಣಿ ವಸಂತ್‌ನ ಕಾಪಾಡೋ ದೃಶ್ಯವೊಂದರಲ್ಲಿ ಯಶ್ ತಮ್ಮ ಮುಖಕ್ಕೆ ಬೆಂಕಿ ಹಚ್ಚಿಕೊಂಡಿದ್ದಾರೆ. ಒಂದು ಪಾತ್ರಕ್ಕಾಗಿ ಆತ ಏನು ಬೇಕಾದ್ರೂ ಮಾಡೋಕೆ ಸಾಧ್ಯ ಅನ್ನೋದಕ್ಕೆ ಇಲ್ಲಿರೋ ಈ ದೃಶ್ಯವೇ ಸಾಕ್ಷಿ. ಟೀಸರ್‌ನಲ್ಲಿ ಬರೋ ಎರಡು ಸೆಕೆಂಡ್‌ನ ಈ ದೃಶ್ಯ ಈ ಚಿತ್ರದಲ್ಲಿ ಇನ್ನೂ ಎಂಥೆಂಥಾ ಡೆಡ್ಲಿ ಸ್ಟಂಟ್ಸ್ ಇರಬಹುದು ಅನ್ನೋದ್ರ ಸೂಚನೆ ನೀಡಿದೆ.

ರಾಯನ ಮಗ ರೂಮಿ ಅಲ್ಲ..ಯಮನ ಪಾದಕ್ಕೆ ‘ಟಿಕೆಟ್’
ಯಂಗೆಸ್ಟ್ ಯಶ್ ಹೆಸರು ಟಿಕೆಟ್..ಸ್ವತಃ ರಾಕಿ ಅನೌನ್ಸ್..!

ಕೆಜಿಎಫ್ ಸಿನಿಮಾದ ಕಾಲದಿಂದಲೂ ಲಾಂಗ್ ಹೇರ್ ಹಾಗೂ ಉದ್ದನೆಯ ಗಡ್ಡದಲ್ಲೇ ಕಾಣ್ತಿದ್ದ ಯಶ್, ಇದೇ ಮೊದಲ ಬಾರಿಗೆ ಟಾಕ್ಸಿಕ್ ಚಿತ್ರದ ಒಂದು ಶೇಡ್‌ಗಾಗಿ ತಮ್ಮ ಲಾಂಗ್ ಹೇರ್‌ನ ಕಟ್ ಮಾಡಿಸಿದ್ದಾರೆ. ಅಷ್ಟೇ ಅಲ್ಲ ಗಡ್ಡ ಕೂಡ ತೆಗೆದಿದ್ದಾರೆ. ಕಿವಿ, ಕುತ್ತಿಗೆ ಸುತ್ತ ವೆರೈಟಿ ಟ್ಯಾಟೂಗಳಿವೆ. ಬೇರ್ ಬಾಡಿಯಲ್ಲಿ ಕತ್ತಿ ಹಿಡಿದು ರಕ್ತ ಹರಿಸೋ ಆ ಪಾತ್ರ ರೂಮಿ ಎನ್ನಲಾಗಿತ್ತು. ಆದ್ರೆ ಆತನ ಹೆಸರು ರೂಮಿ ಅಲ್ಲ.. ಟಿಕೆಟ್. ಹೌದು.. ಸ್ವತಃ ಯಶ್ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಆ ಪೋಸ್ಟರ್ ಜೊತೆ ರಾಕಿಂಗ್ ಸ್ಟಾರ್ ಯಶ್ ಆ್ಯಸ್ ಟಿಕೆಟ್ ಅಂತ ಬರೆದುಕೊಂಡಿದ್ದಾರೆ.

ಆ ಪಾತ್ರ ನಿಜಕ್ಕೂ ಭಯಾನಕವಾಗಿದೆ. ಮಟನ್ ಅಂಗಡಿಯಲ್ಲಿ ಮಟನ್ ಕಡಿಯೋ ರೇಂಜ್‌ಗೆ ಟಿಕೆಟ್ ಎದುರಾಳಿಗನ್ನ ಚಂಡಾಡುತ್ತಾರೆ. ಮೈಯೆಲ್ಲಾ ರಕ್ತ, ಕತ್ತಿಗೂ ರಕ್ತ. ಎದುರಾಳಿಗಳನ್ನ ಯಮನ ಪಾದಕ್ಕೆ ಸೇರಿಸೋಕೆ ಟಿಕೆಟ್ ಕೊಡೋ ಪಾತ್ರವಾಗಿರೋದ್ರಿಂದ ಟಿಕೆಟ್ ಅನ್ನೋ ಹೆಸರು ಕೊಟ್ರಾ ಅನ್ನೋ ಕ್ಯೂರಿಯಾಸಿಟಿ ಕೂಡ ಹೆಚ್ಚಿದೆ. ಯೂತ್ ಫ್ರೆಂಡ್ಲಿ ನೇಮ್ ಇದಾಗಿದ್ದು, ಯಶ್ ಹೀಗೂ ಮಾಡಬಹುದು ಅನ್ನೋದನ್ನ ಈ ರೋಲ್‌ನಿಂದ ತೋರಿಸೋಕೆ ಹೊರಟಿದ್ದಾರೆ. ಸೋ.. ಅಸಲಿ ಟಾಕ್ಸಿಕ್ ವರ್ಲ್ಡ್ ಇದೇ ಮಾರ್ಚ್ 19ಕ್ಕೆ ಬೆಳ್ಳಿತೆರೆ ಮೇಲೆ ಬಯಲಾಗಲಿದೆ.





