ಸುನಾಮಿ ಸುಂಟರಗಾಳಿಯಂತೆ ಬಂದಪ್ಪಳಿಸಿದ ಟಾಕ್ಸಿಕ್ ಟೀಸರ್‌ಗೆ ಸೋಶಿಯಲ್ ಮೀಡಿಯಾ ಲಿಟ್ರಲಿ ಶೇಕ್ ಆಗಿದೆ. ಯಶ್ ಸ್ವ್ಯಾಗ್, ಎಲಿವೇಷನ್ ಶಾಟ್ಸ್ ಎಲ್ಲವೂ ಡೆಡ್ಲಿ & ಡೇರಿಂಗ್ ಆಗಿದ್ರೂ ಸಹ ನೆಟ್ಟಿಗರ ನಿದ್ದೆ ಕೆಡಿಸಿದ್ದು ಮಾತ್ರ ಕಾರೊಳಗಿನ ಆ ಹಸಿಬಿಸಿ ಸೀನ್. ರಾಯ ಜೊತೆ ಕಾರಿನೊಳಗೆ ಕಾಣಿಸಿಕೊಂಡ ಆ ಮಿಸ್ಟರಿ ಹಾಟ್ ಗರ್ಲ್ ಯಾರು ಅನ್ನೋದು ಬಿಲಿಯನ್ ಡಾಲರ್ ಪ್ರಶ್ನೆ. ನಟಾಲಿಯಾ ಅಂತ ಕನ್ಫ್ಯೂಸ್ ಆಗಿದ್ದವ್ರಿಗೆ ಪಕ್ಕಾ ಕ್ಲ್ಯಾರಿಟಿ ಕೊಟ್ಟಿದ್ದಾರೆ ಡೈರೆಕ್ಟರ್ ಗೀತು ಮೋಹನ್‌ದಾಸ್.
- ‘ಟಾಕ್ಸಿಕ್’ ಟೀಸರ್‌ನಲ್ಲಿ ಮಿಸ್ಟರಿ ಹಾಟ್ ಗರ್ಲ್ ಯಾರು..?
- ರಾಯ ಜೊತೆ ಕಾರ್ ಒಳಗೆ ನಟಾಲಿಯಾ ಅಲ್ಲ ಬೀಟ್ರಿಜ್..!
- ಬ್ರೆಜಿಲಿಯನ್ ಬ್ಯೂಟಿಗೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್..!
- ಕಾರ್ ಬ್ಯೂಟಿ.. ವೈರಲ್ ಬ್ಯೂಟಿ ಬೇರೆ ಬೇರೆ.. ಗೀತು ಕ್ಲ್ಯಾರಿಟಿ
ರಾಕಿಂಗ್ ಸ್ಟಾರ್ ಯಶ್ ಜನ್ಮದಿನಕ್ಕೆ ಬಿಡುಗಡೆಯಾದ ಟಾಕ್ಸಿಕ್ ಟೀಸರ್, ರಿಲೀಸ್ ಆದ ಕ್ಷಣದಿಂದಲೇ ಸೋಶಿಯಲ್ ಮೀಡಿಯಾವನ್ನು ಬೆಚ್ಚಿಬೀಳಿಸಿದೆ. ಯಶ್ ಅವರ ಸ್ಟೈಲ್, ಅಟಿಟ್ಯೂಡ್ ಎಲ್ಲವೂ ಟಾಪ್ ನಾಚ್ ಆಗಿದ್ದರೂ, ಟೀಸರ್‌ನ ನಿಜವಾದ ಶಾಕ್ ಫ್ಯಾಕ್ಟರ್ ಆಗಿದ್ದು ಕಾರಿನೊಳಗಿನ ಆ ಬೋಲ್ಡ್ ಬ್ಯೂಟಿ. ಯಶ್ ಜೊತೆ ಕ್ಲೋಸ್ ಮೂಮೆಂಟ್ಸ್‌ನಲ್ಲಿ ಕಾಣಿಸಿಕೊಂಡ ಆ ನಟಿ, ಪ್ರೇಕ್ಷಕರ ಕಣ್ಣುಗಳನ್ನೇ ಲಾಕ್ ಮಾಡಿಸಿದ್ದಾಳೆ.
ಕಾರಿನೊಳಗಿನ ಆ ಹಾಟ್ ಅಟ್ಮಾಸ್ಫಿಯರ್, ಸ್ಮಶಾನದ ಬ್ಯಾಕ್‌ಡ್ರಾಪ್ ಹಾಗೂ ಕ್ಷಣಾರ್ಧದಲ್ಲಿ ಬದಲಾದ ಸಿಟ್ಯುವೇಷನ್… ಟೀಸರ್‌ಗೆ ಡೇಂಜರಸ್ ಎಡ್ಜ್ ಕೊಟ್ಟಿದೆ. ಆ ದೃಶ್ಯದಲ್ಲಿ ನಟಿಸಿರುವ ನಟಿ ಯಾರು ಅನ್ನೋದು ನೆಟ್ಟಿಗರಿಗೆ ನಿದ್ದೆ ಕಸಿದುಕೊಂಡಿತು. ಒಂದು ಗಂಟೆಯೊಳಗೆ ಆ ನಟಿಯ ಸಿನಿ ಜರ್ನಿ, ಬ್ಯಾಕ್‌ಗ್ರೌಂಡ್ ಎಲ್ಲವೂ ನೆಟ್ಟಿಗರು ಜಾಲಾಡಿದರು. ಆರಂಭದಲ್ಲಿ ಹಾಲಿವುಡ್ ನಟಿ ನಟಾಲಿಯಾ ಬರ್ನ್ ಅನ್ನೋ ಸುದ್ದಿ ವೈರಲ್ ಆಯಿತು. ಇದರ ಪರಿಣಾಮ, ಟೀಸರ್ ರಿಲೀಸ್ ಆದ 24 ಗಂಟೆಗಳಲ್ಲಿ ನಟಾಲಿಯಾ ಬರ್ನ್ ಅವರ ಇನ್ಸ್ಟಾ ಫಾಲೋವರ್ಸ್ ಸಂಖ್ಯೆ ರಾಕೆಟ್ ಸ್ಪೀಡ್‌ನಲ್ಲಿ ಏರಿಕೆಯಾಗಿದೆ.
ಅಂದಹಾಗೆ ಹಾಲಿವುಡ್ ನಟಿ ನಟಾಲಿಯಾ ಬರ್ನ್ ಟಾಕ್ಸಿಕ್ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಟೀಸರ್‌ನಲ್ಲಿ ಕಾಣಿಸಿಕೊಂಡಿರುವುದು ಆಕೆ ಅಲ್ಲ. ಟೀಸರ್‌ನಲ್ಲಿರುವ ನಟಿಗೂ ನಟಾಲಿಯಾ ಬರ್ನ್‌ಗೂ ಕ್ಲಿಯರ್ ಮ್ಯಾಚ್ ಇಲ್ಲ ಅನ್ನೋ ಗುಸುಗುಸು ಕೂಡ ಜೋರಾಗಿತ್ತು. ಈ ನಡುವೆ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದು ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್ ದಾಸ್. ಸ್ವತಃ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಶೇರ್ ಮಾಡಿ, ಟಾಕ್ಸಿಕ್ ಟೀಸರ್‌ನಲ್ಲಿರುವ ಆ ನಟಿ ಬೀಟ್ರಿಜ್ ಟೌಫೆನ್‌ಬಾಚ್ ಎಂದು ಬರೆದುಕೊಂಡು ಬೀಟ್ರಿಜ್ ನ ಟ್ಯಾಗ್ ಮಾಡಿದ್ದಾರೆ. ಬ್ರೆಜಿಲ್ ಮೂಲದ ಬೀಟ್ರಿಜ್ ಇನ್ಸ್ಟಾಗ್ರಾಮ್ ಅಕೌಂಟ್ ಪ್ರೈವೇಟ್ ಇರೋದು ತಡವಾಗಿ ಬೆಳಕಿಗೆ ಬಂದಿದೆ.
ಸದ್ಯ ಟಾಕ್ಸಿಕ್ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲೇ 20 ಕೋಟಿಗೂ ಅಧಿಕ ವೀವ್ಸ್ ಮತ್ತು 50 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡಿದೆ. ಟಾಕ್ಸಿಕ್ ಪರ–ವಿರೋಧ ಚರ್ಚೆಗೂ ಕಾರಣವಾಗಿದೆ. ಯಶ್ ಸಿನಿಮಾದಲ್ಲಿ ಇಂತಹ ಬೋಲ್ಡ್ ದೃಶ್ಯ ಬೇಕಿರಲಿಲ್ಲ ಅನ್ನೋ ವಾದ ಒಂದೆಡೆ ಕೇಳಿಬರುತ್ತಿದ್ರೆ, ಇನ್ನೊಂದು ಕಡೆ ಹಾಲಿವುಡ್ ಲೆವೆಲ್ ಮೇಕಿಂಗ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ಯಶ್ ನಿರ್ಮಿಸಿರುವ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ, ರಾಜೀವ್ ರವಿ ಛಾಯಾಗ್ರಹಣವಿದ್ದು, ಮಾರ್ಚ್ 19ಕ್ಕೆ ಟಾಕ್ಸಿಕ್ ತೆರೆಗೆ ಬರಲಿದೆ.
ಅಂದಹಾಗೆ ಟಾಕ್ಸಿಕ್ ಟೀಸರ್ ನಲ್ಲಿ ಅಶ್ಲೀಲತೆ ಇದೆ ಎಂದು ಸೆನ್ಸಾರ್ ಬೋರ್ಡ್ ಗೆ ದೂರು ನೀಡಲಾಗಿದೆ. ಈ ಎಲ್ಲಾ ಟೀಕೆಗಳಿಗೆ ನಿರ್ದೇಶಕಿ ಗೀತು ಮೋಹನ್ ದಾಸ್ ಪ್ರತಿಕ್ರಿಯೆ ನೀಡಿದ್ದು, ‘ಸ್ತ್ರೀ ಸಂತೋಷ, ಸಮ್ಮತಿ, ವ್ಯವಸ್ಥೆಯ ಜೊತೆ ಆಕೆ ಆಟ , ಒಬ್ಬ ಸ್ತ್ರೀಯನ್ನ ಜನ ಹೀಗೆ ಗುರುತಿಸಿದರೆ ಮಜವಾಗಿರುತ್ತೆ ಎಂದು ಟೀಕಾಕಾರರಿಗೆ ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್ ದಾಸ್ ಟಕ್ಕರ್ ನೀಡಿದ್ದಾರೆ. ಸದ್ಯ ಯಶ್ ಈ ಬಾರಿ ಎಷ್ಟು ಡೇಂಜರಸ್ ಅನ್ನೋದಕ್ಕೆ ಸಿನಿ ಅಭಿಮಾನಿಗಳು ಉಸಿರು ಬಿಗಿದು ಕಾಯುತ್ತಿದ್ದಾರೆ.
ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





