• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಟಾಕ್ಸಿಕ್‌‌ಗೆ ಒಲಿದ ವರಮಹಾಲಕ್ಷ್ಮೀ: ದಾಖಲೆ ಮಟ್ಟದಲ್ಲಿ ಆನ್‌‌ಲೈನ್ ಬುಕ್ಕಿಂಗ್‌

ನಮ್ಮ ಹೆಮ್ಮೆಯ ಟಾಕ್ಸಿಕ್ ರಿಲೀಸ್‌ಗೆ ನಾಲ್ಕೇ ದಿನ ಬಾಕಿ!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 21, 2026 - 1:52 pm
in ಸಿನಿಮಾ
0 0
0
Untitled design 2026 08 21T135517.002

ಸದ್ಯ ಎಲ್ಲೆಡೆ ಸದ್ದು ಮಾಡ್ತಿರೋ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾದ ಹಿಂದೆ ಅಷ್ಟಲಕ್ಷ್ಮೀಯರ ಕೈಚಳಕವಿದೆ. ಇವರು ಇಲ್ಲ ಅಂದಿದ್ರೆ ಈ ಸಿನಿಮಾನೇ ಆಗ್ತಿರಲಿಲ್ಲ. ಯಶ್‌‌ ಹಿಂದಿನ ಆ ಅಸಲಿ ಶಕ್ತಿಯೇ ಇವರುಗಳು.

ಟಾಕ್ಸಿಕ್‌‌ಗೆ ಒಲಿದ ವರಮಹಾಲಕ್ಷ್ಮೀ..

RelatedPosts

ಕ್ಷಣಾರ್ಧದಲ್ಲಿ ಟಿಕೆಟ್ ಸೋಲ್ಡ್ ಔಟ್: ‘ಟಾಕ್ಸಿಕ್’ ಮುಂಗಡ ಬುಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್

‘ಟಾಕ್ಸಿಕ್’ ಸಿನಿಮಾ 3 ಗಂಟೆ 14 ನಿಮಿಷ; ಸೆನ್ಸಾರ್‌ನಿಂದ ‘ಎ’ ಪ್ರಮಾಣಪತ್ರ

‘ಟಾಕ್ಸಿಕ್’ ಟಿಕೆಟ್ ಬುಕಿಂಗ್‌ಗೆ ಕ್ಷಣಗಣನೆ; ನಾಳೆಯಿಂದ ಆನ್‌ಲೈನ್ ಬುಕಿಂಗ್ ಆರಂಭ

‘ಸಿಗ್ಮಾ’ ಸಿನಿಮಾ ರಿಲೀಸ್ ಮುಂದೂಡಿಕೆ: ಹೊಸ ರಿಲೀಸ್ ಡೇಟ್ ಘೋಷಣೆ

ADVERTISEMENT
ADVERTISEMENT

ದಾಖಲೆ ಮಟ್ಟದಲ್ಲಿ ಆನ್‌‌ಲೈನ್ ಬುಕ್ಕಿಂಗ್‌

ನಮ್ಮ ಹೆಮ್ಮೆಯ ಟಾಕ್ಸಿಕ್ ರಿಲೀಸ್‌ಗೆ ನಾಲ್ಕೇ ದಿನ ಬಾಕಿ..!!

ಎತ್ತಣ ಸ್ಯಾಂಡಲ್‌‌ವುಡ್ ಎತ್ತಣ ಹಾಲಿವುಡ್.. ಎತ್ತಣಿಂದೆತ್ತಣ ಸಂಬಂಧವಯ್ಯಾ..? ಯೆಸ್.. ಹಾಲಿವುಡ್ ಅನ್ನೋದು ನಮ್ಮ ಚಂದನವನಕ್ಕೆ ಮರೀಚಿಕೆ ಆಗಿದ್ದ ಕಾಲಘಟ್ಟದಲ್ಲಿ ಎರಡೂ ಒಂದೇ. ಸಿನಿಮಾ ಅನ್ನೋದು ಎಂಟರ್‌‌ಟೈನ್ಮೆಂಟ್. ಅಲ್ಲಿ ಯಾವುದೇ ಭೇದ ಭಾವ ಇಲ್ಲ ಅನ್ನೋದನ್ನ ತೋರಿಸಿಕೊಟ್ಟವರು ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್. ನಮ್ಮ ಕನ್ನಡದ ಕಥೆಗಳು ನೆಲ, ಜಲದ ಗಡಿ ರೇಖೆಗಳನ್ನ ದಾಟಿ, ಸಪ್ತಸಾಗರದಾಚೆಗೂ ಸದ್ದು ಮಾಡೋಕೆ ಮುನ್ನುಡಿ ಬರೆದವರು. ಸದ್ಯ ಟಾಕ್ಸಿಕ್ ಗ್ಲೋಬಲ್ ಆಡಿಯೆನ್ಸ್‌ನ ಟಾರ್ಗೆಟ್ ಮಾಡಿದೆ.

ಟಾಕ್ಸಿಕ್ ಬೆಳ್ಳಿಪರದೆಗೆ ಅಪ್ಪಳಿಸೋಕೆ ಇನ್ನೂ ನಾಲ್ಕೇ ನಾಲ್ಕು ದಿನ ಬಾಕಿಯಿದೆ. ವಿದೇಶಗಳಲ್ಲಿ ಈಗಾಗ್ಲೇ ಆನ್‌‌ಲೈನ್ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, 500 ಕೋಟಿ ರೂಪಾಯಿ ಪ್ರೀ ರಿಲೀಸ್ ಬ್ಯುಸಿನೆಸ್‌‌ನಿಂದ ಸದ್ದು ಮಾಡ್ತಿದೆ. ಇಂಡಿಯಾದಲ್ಲಿ ಇಂದಿನಿಂದ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ಬೆಂಗಳೂರಲ್ಲಿ ಓಪನ್ ಆದ ಒಂದೆರಡು ತಾಸುಗಳಲ್ಲೇ 270ಕ್ಕೂ ಅಧಿಕ ಶೋಗಳ ಟಿಕೆಟ್ಸ್ ಸೋಲ್ಡ್ ಔಟ್ ಆಗಿರೋದು ಸಾರ್ವಕಾಲಿಕ ದಾಖಲೆ.

ಸುಮಾರು 12 ಸಾವಿರ ಸ್ಕ್ರೀನ್ಸ್‌ನಲ್ಲಿ ಯಶ್ ಕಥೆ ಬರೆದು, ಲೀಡ್‌ನಲ್ಲಿ ನಟಿಸಿ, ಸಹ ನಿರ್ಮಾಣ ಮಾಡಿರೋ ಟಾಕ್ಸಿಕ್ ತೆರೆಗೆ ಬರ್ತಿದ್ದು, ಗೀತು ಮೋಹನ್‌ದಾಸ್ ನಿರ್ದೇಶನ ಹಾಗೂ ಕೆವಿಎನ್ ನಿರ್ಮಾಣವಿದೆ. ಅಂದಹಾಗೆ ಟಾಕ್ಸಿಕ್ ಸಿನಿಮಾಗೆ ನಮ್ಮ ಇಂಡಿಯನ್ ಸೆನ್ಸಾರ್ ಬೋರ್ಡ್‌ ಎ ಸರ್ಟಿಫಿಕೆಟ್ ನೀಡಿದ್ದು, ಪಕ್ಕಾ ಅಡಲ್ಟ್ ಮೂವಿ ಅನ್ನೋ ಮುದ್ರೆ ಹಾಕಿದೆ. ಅತ್ತ ಯುಕೆನಲ್ಲಿ BBFC ಸೆನ್ಸಾರ್ ಬೋರ್ಡ್ ಕೂಡ 18 ಸರ್ಟಿಫಿಕೆಟ್ ಕೊಟ್ಟು, ಔಟ್ & ಔಟ್ ಯೂತ್‌ ಚಿತ್ರ ಅನ್ನೋದನ್ನ ಖಾತರಿ ಪಡಿಸಿದೆ.

ವರಮಹಾಲಕ್ಷ್ಮೀ ಹಬ್ಬಕ್ಕೆ ಟಾಕ್ಸಿಕ್ ಅಷ್ಟಲಕ್ಷ್ಮೀಯರ ಕಲರವ

ಪ್ರತಿಯೊಂದು ಸಕ್ಸಸ್‌‌‌ಫುಲ್ ಪ್ರಾಡಕ್ಟ್ ಹಿಂದೆ ಒಂದಷ್ಟು ಮಂದಿಯ ಶ್ರಮ, ನೆತ್ತರು, ಶ್ರದ್ಧೆ, ನಿಷ್ಠೆ, ಭಕ್ತಿ ಮತ್ತು ಪ್ರಾಮಾಣಿಕತೆಗಳು ಅಡಗಿರುತ್ತೆ. ಅದೇ ರೀತಿ ಟಾಕ್ಸಿಕ್ ಅನ್ನೋ ಮಹಾಯಾಗದ ಹಿಂದೆ ಅದ್ರ ಅಷ್ಟಲಕ್ಷ್ಮಿಯರ ಪಾತ್ರ ದೊಡ್ಡದಿದೆ. ವರಮಹಾಲಕ್ಷ್ಮೀ ಹಬ್ಬದ ವಿಶೇಷ ಯಶ್ ಹಿಂದಿರೋ ಆ ಅದೃಷ್ಟದ ಅಷ್ಟಲಕ್ಷ್ಮಿಯರನ್ನ ಒಬ್ಬೊಬ್ಬರನ್ನಾಗಿ ಪರಿಚಯಿಸ್ತೀವಿ… ನೋಡ್ಕೊಂಡ್ ಬನ್ನಿ.

‘ಟಿಕೆಟ್’ ತಾಯಿ ನಾಡಿಯಾ ಆಗಿ ಬಾಲಿವುಡ್ ಕಿಯಾರಾ

ಟಾಕ್ಸಿಕ್ ಗ್ಲಾಮರ್ ಇವ್ರೇ.. ಟಿಕೆಟ್ ಹಿಂದಿನ ಖದರ್ ಇವ್ರೇ

ಟಾಕ್ಸಿಕ್ ಔಟ್ & ಔಟ್ ಗ್ಯಾಂಗ್‌ಸ್ಟರ್ ಮೂವಿ. ಈ ಚಿತ್ರದ ಗ್ಲಾಮರ್ ಅಂದ್ರೆ ಅದು ಕಿಯಾರಾ ಅಡ್ವಾಣಿ. ಇನ್‌‌ಫ್ಯಾಕ್ಟ್ ಇದು ಈ ಬಾಲಿವುಡ್ ಬ್ಯೂಟಿಯ ಚೊಚ್ಚಲ ಕನ್ನಡ ಸಿನಿಮಾ ಕೂಡ ಹೌದು. ಕೋಟಿ ಕೋಟಿ ರೆಮ್ಯುನರೇಷನ್ ಪಡೆಯುವ ಸ್ಟಾರ್ ನಟಿ ಕಿಯಾರಾ ನಟ ಸಿದ್ದಾರ್ಥ್ ಮಲ್ಹೋತ್ರಾ ಮುದ್ದಿನ ಮಡದಿ. ಅಂತಹ ಸ್ಟಾರ್ ನಟಿಯನ್ನ ಕನ್ನಡಕ್ಕೆ ಕರೆತರುವ ಪ್ರಯತ್ನ ಮಾಡಿ ಗೆದ್ದಿದ್ದಾರೆ ಯಶ್.

ಅಂದಹಾಗೆ ಕಿಯಾರಾ ಇಲ್ಲಿ ನಾಡಿಯಾ ಅನ್ನೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಕೆ ರಾಯನ ಪತ್ನಿ ಹೌದೋ ಅಲ್ಲವೋ ಗೊತ್ತಿಲ್ಲ. ಆದ್ರೆ ರೂಮಿ ಅಲಿಯಾಸ್ ಟಿಕೆಟ್‌‌ನ ತಾಯಿ ಅನ್ನೋದು ಖಚಿತಪಡಿಸಿದೆ ಚಿತ್ರತಂಡ. ಹೌದು.. ಯಶ್ ಮಿಲಿಟರಿ ಕಟಿಂಗ್‌‌ನಲ್ಲಿ ಲೀನ್ ಆಗಿ ಸೈಕ್ ತರಹದ ಪಾತ್ರ ನಿಭಾಯಿಸಿದ್ದು, ಆ ಟಿಕೆಟ್ ಪಾತ್ರಧಾರಿಯ ತಾಯಿ ರೋಲ್‌‌ನಲ್ಲಿ ಕಾಣಸಿಗಲಿದ್ದಾರೆ.

ಅಲ್ಲಿಗೆ ಟಾಕ್ಸಿಕ್‌‌ಗೆ ಗ್ಲಾಮರ್ ಕಿಯಾರಾನೇ.. ಅಷ್ಟೇ ಅಲ್ಲ.. ಟಿಕೆಟ್ ಖದರ್‌‌ ಹಿಂದಿನ ಶಕ್ತಿ ಕೂಡ ಈಕೆಯೇ. ತಂದೆ-ಮಗನ ದಯೆಯಿಲ್ಲದ ಬ್ಲಡ್‌‌ಲೈನ್ ವಾರ್‌‌ಗೆ ಓಂಕಾರ ಹಾಡುವುದು ಇದೇ ನಾಡಿಯಾ ಪಾತ್ರದ ಕಿಯಾರಾ ಅನ್ನೋದು ಬಿಗ್ಗೆಸ್ಟ್ ಸೀಕ್ರೆಟ್. ಅಂದಹಾಗೆ ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿ ಕಿಯಾರಾ ಹೇಳಿದಂತೆ ಆಕೆಯ ಕರಿಯರ್‌‌ನಲ್ಲಿ ಟಾಕ್ಸಿಕ್‌‌ಗೂ ಮುನ್ನ.. ಟಾಕ್ಸಿಕ್ ನಂತರ ಅಂತ ಜನ ಮಾತಾಡ್ತಾರಂತೆ.

ರಾಕಿಂಗ್ ರಾಯನ ಸಹೋದರಿ ಗಂಗಾ ಈ ನಯನತಾರಾ

ನಯನತಾರಾ-ಯಶ್ ಬ್ರದರ್-ಸಿಸ್ಟರ್ ಬಾಂಡಿಂಗ್ ಕಿಕ್..!

ಲೇಡಿ ಸೂಪರ್ ಸ್ಟಾರ್ ನಯನತಾರಾ ಟಾಕ್ಸಿಕ್ ಚಿತ್ರದ ಮತ್ತೊಂದು ಹೈಲೈಟ್. ಈಕೆ ಒಂಥರಾ ಲಕ್ಕಿ ಚಾರ್ಮ್. ಗ್ಲಾಮರ್‌‌ಗೂ ಕೊರತೆ ಇಲ್ಲ. ಆದ್ರೆ ಇಲ್ಲಿ ನಯನತಾರಾ ಯಶ್ ಜೊತೆ ರೊಮ್ಯಾನ್ಸ್ ಮಾಡಲ್ಲ. ಯಾಕಂದ್ರೆ ಅವರದ್ದು ರಕ್ತಸಂಬಂಧದ ಪಾತ್ರಗಳು. ಯೆಸ್.. ರಾಯನ ಪಾತ್ರಧಾರಿ ಯಶ್‌ಗೆ ಅಕ್ಕ ಗಂಗಾ ಆಗಿ ನಯನತಾರಾ ಬಣ್ಣ ಹಚ್ಚಿದ್ದಾರೆ. ಬೋಲ್ಡ್ & ಬ್ಯೂಟಿ ಅನ್ನುವಂತೆ ಡೆಡ್ಲಿ & ಟೆರಿಫಿಕ್ ಆಗಿ ಕಾಣಿಸಿಗ್ತಾರೆ ಇವರು.

ಟ್ರೈಲರ್ ಲಾಂಚ್ ವೇಳೆ ನಮ್ಮ ಯಶ್‌ಗೆ ರಾಕಿಭಾಯ್ ಅಂತ ಹೆಮ್ಮೆಯಿಂದ ಹಾಗೂ ಪ್ರೀತಿ-ಅಭಿಮಾನದಿಂದ ಕರೆದ ನಯನತಾರಾ, ಸಿಕ್ಕಾಪಟ್ಟೆ ಕೊಂಡಾಡಿದ್ರು. ಸಿನಿಮಾಗಳ ಪ್ರಮೋಷನ್ಸ್‌ಗೆ ಬಾರದ ನಯನತಾರಾ, ಇದೇ ಮೊದಲ ಬಾರಿಗೆ ಯಶ್‌ಗಾಗಿ ಟಾಕ್ಸಿಕ್ ಇವೆಂಟ್‌ನಲ್ಲಿ ಭಾಗಿಯಾಗಿದ್ದನ್ನ ಖುಷಿಯಿಂದ ಹಂಚಿಕೊಂಡಿದ್ದರು. ಈ ಹಿಂದೆ ಕನ್ನಡ ಚಿತ್ರದಲ್ಲಿ ನಟಿಸಿದ್ರೂ ಸಹ, ಈ ಬಾರಿ ನಯನತಾರಾ ಆಗಮನ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದೆ. ಒಟ್ಟಾರೆ ಡ್ರಗ್ ಕಾರ್ಟೆಲ್ ಲೀಡರ್.. ಬಿಗ್ಗೆಸ್ಟ್ ದೊಂಗ ರಾಯನಿಗೆ ಈ ಗಂಗಾನೇ ಬಿಗ್ಗೆಸ್ಟ್ ಸ್ಟ್ರೆಂಥ್.

ಎಲಿಜಬೆತ್ ಪಾತ್ರದಲ್ಲಿ ಬಿಟೌನ್ ಚೆಲುವೆ ಹುಮಾ ಖುರೇಷಿ

ಹಾಟ್ ಅಪಿಯರೆನ್ಸ್.. ಪ್ರೀತಿಯ ಸೆಲೆ.. ನೋಡುಗರಿಗೆ ಬಲೆ

ಹುಮಾ ಖುರೇಷಿ.. ಬಾಲಿವುಡ್‌‌ನಲ್ಲಿ ನಟನೆ ಜೊತೆ ಚಿತ್ರ ನಿರ್ಮಾಣದಲ್ಲೂ ತೊಡಗಿಸಿಕೊಂಡಿರೋ ಈ ಚೆಂದುಳ್ಳಿ ಚೆಲುವೆ, ಇಲ್ಲಿ ತುಂಬಾ ಮಿಸ್ಟೀರಿಯಸ್ ಪಾತ್ರದಲ್ಲಿ ಕಾಣಸಿಗಲಿದ್ದಾರೆ. ಸ್ಟೈಲಿಶ್ ಹಾಗೂ ಟೆರಿಫಿಕ್ ಆಗಿರೋ ಹುಮಾ.. ಟಾಕ್ಸಿಕ್‌‌ನಲ್ಲಿ ಎಲಿಜಬೆತ್‌‌ ಪಾತ್ರದಲ್ಲಿ ಕಾಣಸಿಗಲಿದ್ದಾರೆ. ಅದ್ರಲ್ಲೂ ರಾಕಿಂಗ್ ರಾಯನ ಜೊತೆಗಿನ ಹಾಟ್ ದೃಶ್ಯಗಳು ಹದಿ ಹರೆಯದ ಮನಸುಗಳ ದಿಲ್ ದೋಚುತ್ತಿದೆ.

ಸಿನಿಮಾನ ಟೀಕಿಸಿ, ನೆಗೆಟೀವ್ ಆಗಿ ಟ್ರೋಲ್ ಮಾಡೋರಿಗೆ ಟಾಕ್ಸಿಕ್ ತಕ್ಕ ಉತ್ತರ ಕೊಡಲಿದೆ ಅಂತ ಟ್ರೈಲರ್ ಲಾಂಚ್ ಇವೆಂಟ್‌‌ನಲ್ಲಿ ಮಾತನಾಡಿದ್ರು ಹುಮಾ. ಅಲ್ಲದೆ.. ಪ್ರತಿಷ್ಟಿತ ಕಾನ್ಸ್ ಫಿಲ್ಮ್ ಫೆಸ್ಟಿವಲ್‌‌ನಲ್ಲಿ ಟಾಕ್ಸಿಕ್ ಪೋಸ್ಟರ್ ಹಿಡಿದು ಗಮನ ಸೆಳೆಯುವ ಮೂಲಕ ಸಿನಿಮಾಗೆ ಅಧಿಕೃತ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ರು.

ರೆಬೆಕ್ಕಾ ರೋಲ್‌‌.. ತಾರಾ ಸುತಾರಿಯಾ ಬೆಡಗು ಬಿನ್ನಾಣ

ಚಿಕ್ಕದಾದ್ರೂ ಮೈಂಡ್‌‌ನಲ್ಲಿ ರಿಜಿಸ್ಟರ್ ಆಗುವ ಚೊಕ್ಕ ಪಾತ್ರ

ಟಾಕ್ಸಿಕ್‌ನ ರೆಬೆಕ್ಕಾ ಆಗಿ ಬಾಲಿವುಡ್‌ನ ಮತ್ತೊಬ್ಬ ಗ್ಲಾಮರ್ ಡಾಲ್ ತಾರಾ ಸುತಾರಿಯಾ ಕಾಣಸಿಗುವ ಪಾತ್ರವಾಗಿದೆ. ಸಿನಿಮಾದಲ್ಲಿ ಇದು ಚಿಕ್ಕದೊಂದು ಪಾತ್ರವಾದ್ರೂ ನೋಡುಗರ ಮನದಲ್ಲಿ ಉಳಿಯುವಂತಹ ಚೊಕ್ಕದಾದ ರೋಲ್ ಆಗಿರಲಿದೆಯಂತೆ. ಹೌದು.. ಲುಕ್‌ವೈಸ್ ಕೂಡ ತುಂಬಾ ಸ್ಟೈಲಿಶ್ ರೆಟ್ರೋ ಲುಕ್ ನೀಡಿದ್ದು, ಅಷ್ಟೇ ಪವರ್‌‌ಫುಲ್ ಹಾಗೂ ದಿಟ್ಟತನದ ಪಾತ್ರವಾಗಿದೆ.

ಕೈಯಲ್ಲಿ ಬಂದೂಕು ಹಿಡಿದು ಘರ್ಜಿಸಿರೋ ತಾರಾ ಸುತಾರಿಯಾ ಗಮನ ಸೆಳೆಯಲಿದ್ದಾರೆ. ಅದ್ರಲ್ಲೂ ರುಕ್ಮಿಣಿ ವಸಂತ್ ಜೊತೆಗಿನ ಕ್ಲ್ಯಾಶ್‌‌ನಲ್ಲಿ ತುಂಬಾ ಬೋಲ್ಡ್ ಆಗಿ ಕಾಣಸಿಗುತ್ತಾರೆ. ಟ್ರೈಲರ್ ಲಾಂಚ್‌ಗೆ ಬೆಂಗಳೂರಿಗೆ ಆಗಮಿಸಿದ್ದ ಈಕೆ ಯಶ್ ಅವ್ರ ವ್ಯಕ್ತಿತ್ವ, ನಟನೆ, ಡೈರೆಕ್ಟರ್ ಗೀತು ಮೋಹನ್‌ದಾಸ್ ನಿರ್ದೇಶನ ಹಾಗೂ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಮೆಚ್ಚುಗೆಯ ಮಾತುಗಳನ್ನಾಡಿದ್ರು.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 08 21T141105.833

ನಾಗೇಂದ್ರ ರಾಜೀನಾಮೆಗೆ ಬಿಜೆಪಿ-ಜೆಡಿಎಸ್ ಆಗ್ರಹ: ಕಪ್ಪು ಟೀ ಶರ್ಟ್‌ನಲ್ಲಿ ಸದನಕ್ಕೆ ಎಂಟ್ರಿ

by ದಿಶಾ ಕೆ. ಎಸ್.
August 21, 2026 - 2:11 pm
0

Untitled design 2026 08 21T135517.002

ಟಾಕ್ಸಿಕ್‌‌ಗೆ ಒಲಿದ ವರಮಹಾಲಕ್ಷ್ಮೀ: ದಾಖಲೆ ಮಟ್ಟದಲ್ಲಿ ಆನ್‌‌ಲೈನ್ ಬುಕ್ಕಿಂಗ್‌

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 21, 2026 - 1:52 pm
0

Untitled design 2026 08 21T133338.280

ಸೆ.7ರೊಳಗೆ ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿಯ ಕರಡು ಸಿದ್ಧ: ಸಚಿವ ಕೆ.ಜೆ. ಜಾರ್ಜ್‌

by ದಿಶಾ ಕೆ. ಎಸ್.
August 21, 2026 - 1:34 pm
0

Untitled design 2026 08 21T130648.453

‘ರಾಹುಲ್ ಗಾಂಧಿ ರೋಲ್ ಮಾಡೆಲ್’ ಎಂದಿದ್ದೇ ತಪ್ಪಾಯ್ತಾ? ₹40 ಲಕ್ಷ ಪ್ಯಾಕೇಜ್ ಹುಡುಗನಿಗೆ ನೋ ಎಂದ ಯುವತಿ

by ದಿಶಾ ಕೆ. ಎಸ್.
August 21, 2026 - 1:09 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 08 21T101734.040
    ಕ್ಷಣಾರ್ಧದಲ್ಲಿ ಟಿಕೆಟ್ ಸೋಲ್ಡ್ ಔಟ್: ‘ಟಾಕ್ಸಿಕ್’ ಮುಂಗಡ ಬುಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್
    August 21, 2026 | 0
  • Untitled design 2026 08 21T071302.921
    ‘ಟಾಕ್ಸಿಕ್’ ಸಿನಿಮಾ 3 ಗಂಟೆ 14 ನಿಮಿಷ; ಸೆನ್ಸಾರ್‌ನಿಂದ ‘ಎ’ ಪ್ರಮಾಣಪತ್ರ
    August 21, 2026 | 0
  • Untitled design 2026 08 20T201335.344
    ‘ಟಾಕ್ಸಿಕ್’ ಟಿಕೆಟ್ ಬುಕಿಂಗ್‌ಗೆ ಕ್ಷಣಗಣನೆ; ನಾಳೆಯಿಂದ ಆನ್‌ಲೈನ್ ಬುಕಿಂಗ್ ಆರಂಭ
    August 20, 2026 | 0
  • Untitled design 2026 08 20T175145.968
    ‘ಸಿಗ್ಮಾ’ ಸಿನಿಮಾ ರಿಲೀಸ್ ಮುಂದೂಡಿಕೆ: ಹೊಸ ರಿಲೀಸ್ ಡೇಟ್ ಘೋಷಣೆ
    August 20, 2026 | 0
  • Untitled design 2026 08 20T162137.953
    ಗೋವಿಂದ-ಸುನೀತಾ ದಾಂಪತ್ಯಕ್ಕೆ ಹೊಸ ತಿರುವು; ವಿಚ್ಛೇದನ ಅರ್ಜಿ ವಾಪಸ್
    August 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version