ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೆ ಸೈಲೆಂಟ್ ಆಗಿದ್ದ ಗಿಲ್ಲಿ ನಟ, ಇದೀಗ ಇಡೀ ಸ್ಯಾಂಡಲ್‌ವುಡ್ ತಿರುಗಿ ನೋಡೋ ತರಹದ ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯೇ ಗಿಲ್ಲಿಗೆ ಗಾಳ ಹಾಕಿದ್ದು, ಇದು ಗಿಲ್ಲಿಯ ನಯಾ ಇನ್ನಿಂಗ್ಸ್‌ಗೆ ಮುನ್ನುಡಿ ಬರೆಯುವಂತಿದೆ.
ಗಿಲ್ಲಿಗೆ KVN ಗಾಳ.. ಇದು ಟ್ಯಾಲೆಂಟ್‌ನಿಂದ ಬಂದ ಭಾಗ್ಯ
ಬಿಗ್‌ಬಾಸ್ ಗಿಲ್ಲಿ ಈಗ ಬಿಗ್‌ಸ್ಕ್ರೀನ್ ಮೇಲೆ ಹೀರೋ ಗುರು
ಟಾಕ್ಸಿಕ್ ನಿರ್ಮಾಪಕರಿಂದ ಗಿಲ್ಲಿಗೆ ಸಿಕ್ತು ಗೋಲ್ಡನ್ ಟಿಕೆಟ್
ಜೂನ್ 21ಕ್ಕೆ ಡಬಲ್ ಧಮಾಕಾ.. ಬರ್ತ್‌ಡೇ ದಿನ ಪೂಜೆ..!
ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೆ ಇವೆಂಟ್‌ಗಳಲ್ಲೇ ಬ್ಯುಸಿಯಾಗಿದ್ದ ಗಿಲ್ಲಿ ನಟನ ಮೇಲೆ ಫ್ಯಾನ್ಸ್ ಕೊಂಚ ಮುನಿಸಿಕೊಂಡಿದ್ದು ಸುಳ್ಳಲ್ಲ. ಏನ್ ಗುರು, ಬರೀ ಇವೆಂಟ್ ಮಾಡ್ಕೊಂಡಿರ್ತೀಯಾ, ಸಿನಿಮಾ ಯಾವಾಗ? ಅಂತ ಕಾಯ್ತಿದ್ದ ಫ್ಯಾನ್ಸ್‌ಗೆ ಈಗ ಗಿಲ್ಲಿ ಕೊಟ್ಟಿರೋದು ಅಂತಿಂಥ ಶಾಕ್ ಅಲ್ಲ, ಬಿಗ್ ಶಾಕ್. ಅದು ಸಾಧಾರಣ ಲಾಂಚ್ ಅಲ್ಲವೇ ಅಲ್ಲ, ಟಾಕ್ಸಿಕ್, ಜನನಾಯಗನ್ ನಂತಹ ಬಿಗ್ ಬಜೆಟ್ ಚಿತ್ರಗಳಿಗೆ ಬಂಡವಾಳ ಹೂಡಿರೋ ಕೆವಿಎನ್ ಈಗ ಗಿಲ್ಲಿಗೆ ಗಾಳ ಹಾಕಿದೆ. ಹೌದು, ಇದು ಟ್ಯಾಲೆಂಟ್‌ನಿಂದಲೇ ಗಿಲ್ಲಿ ಗಿಟ್ಟಿಸಿಕೊಂಡ ಭಾಗ್ಯ. ಸದ್ಯ ಗಿಲ್ಲಿ ಹೀರೋ ಆಗಿ ಲಾಂಚ್ ಆಗ್ತಿರೋ ಪ್ರೋಮೋ ಕೂಡ ರಿಲೀಸ್ ಆಗಿದ್ದು, ಕೆವಿಎನ್ ಸಂಸ್ಥೆ ಅರ್ಪಿಸಿ, ಹರೀಶ್ ಮತ್ತು ನವೀನ್ ಅನ್ನೋರು ರಾಶಿ ಫಿಲಂಸ್ ಬ್ಯಾನರ್‌ನಡಿ ನಿರ್ಮಾಣ ಮಾಡ್ತಿದ್ದಾರೆ.
ಗಿಲ್ಲಿಯ ಈ ಪ್ಯಾನ್-ಕರ್ನಾಟಕ ಸಿನಿಮಾದ ಮುಹೂರ್ತಕ್ಕೆ ಕೌಂಟ್ ಡೌನ್ ಶುರುವಾಗಿದೆ. ವಿಶೇಷ ಅಂದ್ರೆ, ಜೂನ್ 21ಕ್ಕೆ ಗಿಲ್ಲಿ ಬರ್ತ್‌ಡೇ ಸಂಭ್ರಮವಿದ್ದು, ಅದೇ ದಿನವೇ ಈ ಹೊಸ ಚಿತ್ರದ ಅದ್ಧೂರಿ ಮುಹೂರ್ತ ನೆರವೇರಲಿದೆ. ಈಗಾಗಲೇ ರಿಲೀಸ್ ಆಗಿರೋ ಮಸ್ತ್ ಪ್ರೋಮೋ ಗಾಂಧಿನಗರದಲ್ಲಿ ಧೂಳೆಬ್ಬಿಸುತ್ತಿದೆ. ಹಾಸ್ಯ ಚಿತ್ರಗಳ ಬ್ರ್ಯಾಂಡ್ ಡೈರೆಕ್ಟರ್ ಚಂದ್ರಮೋಹನ್ ಈ ಕಮರ್ಷಿಯಲ್ ಎಂಟರ್‌ಟೈನರ್‌ಗೆ ಆ್ಯಕ್ಷನ್ ಕಟ್ ಹೇಳ್ತಿರೋದ್ರಿಂದ ಸಿನಿಮಾದಲ್ಲಿ ನಗುವಿನ ಅಲೆ ಗ್ಯಾರಂಟಿ. ಒಂದು ಕನಸಿನ ಶುಭಾರಂಭ, ಕನಸಿನಿಂದ ಕ್ಯಾಮೆರಾವರೆಗೆ ಅಂತ ಗಿಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಫ್ಯಾನ್ಸ್ ಆಶೀರ್ವಾದ ಬೇಡಿದ್ದಾರೆ.
ಹೀರೋ ಆಗಿ ಬರ್ತಿರೋದೇನೋ ಸರಿ, ಆದ್ರೆ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಈಗ ಒಂದೇ ಒಂದು ಪ್ರಶ್ನೆ ಸಖತ್ ಸೌಂಡ್ ಮಾಡ್ತಿದೆ. ಈ ಬಿಗ್ ಬಜೆಟ್ ಸಿನಿಮಾಗೆ ಗಿಲ್ಲಿ ಜೊತೆ ರೋಮ್ಯಾನ್ಸ್ ಮಾಡೋ ಆ ಲಕ್ಕಿ ಗರ್ಲ್ ಯಾರು..? ಹೌದು, ಚಿತ್ರದ ನಾಯಕಿ ಮತ್ತು ಟೈಟಲ್ ಬಗ್ಗೆ ಸದ್ಯಕ್ಕೆ ಸಸ್ಪೆನ್ಸ್ ಕಾಯ್ದುಕೊಳ್ಳಲಾಗಿದ್ದು, ಗಿಲ್ಲಿಯ ಈ ಹೊಸ ಇನ್ನಿಂಗ್ಸ್ ಅವರ ಕರಿಯರ್‌ನ ದೊಡ್ಡ ಟರ್ನಿಂಗ್ ಪಾಯಿಂಟ್ ಆಗುತ್ತಾ ಅನ್ನೋದು ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





